ಬೆಂಗಳೂರು: ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಒಂದು 22 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ಖಚಿತವಾಗಿದೆ.
ಬೆಳಗಾವಿ ಜಿಲ್ಲೆಯೊಂದರಲ್ಲೆ 14 ಜನರಿಗೆ ಸೋಂಕು ತಾಗಿದ್ದರೆ, ಬೆಂಗಳೂರು, ಬೆಳಗಾವಿ, ದಕ್ಷಿಣ ಕನ್ನಡ, ವಿಜಯಪುರ, ತುಮಕೂರು ದಾವಣಗೆರೆಯಲ್ಲೂ ಸೋಂಕು ತಾಗಿರುವುದು ಖಚಿತವಾಗಿದೆ.
ಬೆಳಗಾವಿ ಜಿಲ್ಲೆಯ ಹಿರೇವಾಗೇವಡಿಯ 12 ಜನರಿಗೆ ಮತ್ತು ಹುಕ್ಕೇರಿಯ ಇಬ್ಬರಿಗೆ ಸೋಂಕು ತಾಗಿದೆ. ಸೋಂಕಿತ ಸಂಖ್ಯೆ 293ರ ಸಂಪರ್ಕದಿಂದ ಹುಕ್ಕೇರಿಯ 75 ವರ್ಷದ ಮಹಿಳೆ ಮತ್ತು 9 ವರ್ಷದ ಬಾಲಕನಿಗೆ ಸೋಂಕು ತಾಗಿದೆ.
ಹಿರೇಬಾಗೇವಾಡಿಯ 24 ವರ್ಷದ ಮಹಿಳೆ, 27 ವರ್ಷದ ಪುರುಷ, 24 ವರ್ಷದ ಮಹಿಳೆ, 18 ವರ್ಷದ ಯುವಕ, 48 ವರ್ಷದ ಮಹಿಳೆ, 50 ವರ್ಷದ ಪುರುಷ, 27 ವರ್ಷದ ಮಹಿಳೆ, 43 ವರ್ಷದ ಪುರುಷ, 16 ವರ್ಷದ ಬಾಲಕ, 36 ವರ್ಷದ ಮಹಿಳೆ, 36 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಹಿರೇಬಾಗೇವಾಡಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದ್ದು, ಸದ್ಯ ಈ ಗ್ರಾಮವೊಂದರಲ್ಲಿಯೇ 36 ಜನರಿಗೆ ಸೋಂಕು ಇದೆ.
ಸೋಂಕಿತ ಸಂಖ್ಯೆ 501ರ ಸಂಪರ್ಕದಿಂದ ದಕ್ಷಿಣ ಕನ್ನಡ 58 ವರ್ಷದ ಮಹಿಳೆಗೆ ಸೋಂಕು ತಾಗಿದೆ. ಈಕೆಗೆ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಜಯಪುರದಲ್ಲಿ ಸೋಂಕಿತ ಸಂಖ್ಯೆ 221ರ ಸಂಪರ್ಕದಿಂದ 62 ವರ್ಷದ ಗಂಡು ಮತ್ತು 33 ವರ್ಷದ ಮಹಿಳೆಗೆ ಸೋಂಕು ತಾಗಿದೆ. ನಿನ್ನೆ ಮೃತಪಟ್ಟ ಸೋಂಕಿತ (535)ರ ಸಂಪರ್ಕದಿಂದ ತುಮಕೂರಿನ 65 ವರ್ಷದ ಮಹಿಳೆಗೆ ಸೋಂಕು ತಾಗಿರುವುದು ಖಚಿತವಾಗಿದೆ. ದಾವಣಗೆರೆಯ 69 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದ್ದು, ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.