ಬೆಂಗಳೂರು: ರಾಜ್ಯದಲ್ಲಿ ಮತ್ತೆ 13 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇದರಿಂದ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ ಮತ್ತೆ ಎಂಟು ಸೋಂಕು ಪ್ರಕರಣಗಳು ದೃಢವಾಗಿದೆ. ಶಿವಮೊಗ್ಗದಲ್ಲಿ ಮೂರು, ವಿಜಯಪುರ, ಹಾಸನಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.
ಕಲಬುರಗಿಯಲ್ಲಿ ಸೋಂಕಿತ ಸಂಖ್ಯೆ 848ರ ಸಂಪರ್ಕದಿಂದ ಆರು ಜನರಿಗೆ ಸೋಂಕು ತಾಗಿದೆ. ಸೋಂಕಿತ ಸಂಖ್ಯೆ 927ರ ಸಂಪರ್ಕದಿಂದ ಓರ್ವ ಮಹಿಳೆಗೆ ಸೋಂಕು ತಾಗಿದ್ದು, ಮುಂಬೈನಿಂದ ಬಂದ 30 ವರ್ಷದ ಮಹಿಳೆಗೂ ಸೋಂಕು ತಾಗಿದೆ.
ಶಿವಮೊಗ್ಗದಲ್ಲಿ 4 ವರ್ಷದ ಮಗು ಸೇರಿ ಮೂವರು ಸೋಂಕಿಗೆ ಒಳಗಾಗಿದ್ದಾರೆ. ಈ ಮೂವರು ಮುಂಬೈನಿಂದ ಬಂದವರಾಗಿದ್ದಾರೆ. ಸೋಂಕಿತ ಸಂಖ್ಯೆ 594ರ ಸಂಪರ್ಕದಿಂದ ವಿಜಯಪುರದಲ್ಲಿ 4 ವರ್ಷದ ಹೆಣ್ಣು ಮಗುವೊಂದು ಸೋಂಕಿಗೆ ಒಳಗಾಗಿದೆ. ಹಾಸನ 18ರ ಯುವಕ ಮುಂಬೈನಿಂದ ಬಂದಿದ್ದು, ಸೋಂಕು ದೃಢವಾಗಿದೆ.
ಉಡುಪಿಯಲ್ಲಿ ಎರಡು ದಿನದ ಹಿಂದೆ ಮೃತಪಟ್ಟ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಆದರೆ ಆರೋಗ್ಯ ಇಲಾಖೆ ವರದಿಯಲ್ಲಿ ನಮೂದಿಸಲಾಗಿಲ್ಲ.
ಇಂದಿನ ಒಟ್ಟು 36 ಸೋಂಕಿತರ ಕಾರಣ ರಾಜ್ಯದ ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ 494 ಜನರು ಗುಣಮುಖರಾಗಿದ್ದಾರೆ.