Advertisement

ಸಂತ ನಿರಂಕಾರಿ ಮಂಡಳದಿಂದ ವಾರ್ಷಿಕ ಮಹಿಳಾ ಸಂತ ಸಮಾಗಮ

04:56 PM Apr 27, 2019 | Vishnu Das |

ಮುಂಬಯಿ: ಸಂತ ನಿರಂಕಾರಿ ಮಂಡಳದ ವತಿ ಯಿಂದ ಮಹಿಳಾ ಸಂತ ಸಮಾಗಮ ಕಾರ್ಯಕ್ರಮವು ಎ. 20 ಮತ್ತು ಎ. 21ರಂದು 2 ದಿನ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಗರದ ವಿವಿಧೆಡೆಗಳಲ್ಲಿ ನಡೆಯಿತು.

Advertisement

ನಗರದ ಚೆಂಬೂರು, ಬೊರಿವಲಿಯ ಗೋರೈ, ಥಾಣೆ ಹಾಗೂ ನವಿಮುಂಬಯಿ ಐರೋಲಿಯಲ್ಲಿ ನಡೆದ ಮಹಿಳಾ ಸಂತ ಸಮಾಗಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂತ ನಿರಂಕಾರಿ ಮಂಡಳದ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಸಮಾಗಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ, ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಚೆಂಬೂರು ಮತ್ತು ಬೊರಿವಲಿಯ ಗೋರೈಯಲ್ಲಿ ನಡೆದ ಸಮಾಗಮದ ಅಧ್ಯಕ್ಷತೆಯನ್ನು ಪ್ರಚಾರ ಸಮಿತಿಯ ಸಮನ್ವಯಕ ರೆವರೆಂಡ್‌ ಪ್ರೀಮಲ್‌ ಸಿಂಗ್‌ ಅವರು ವಹಿಸಿ, ಮಹಿಳೆಯರು ಕೌಟುಂಬಿಕವಾಗಿ ಯಾವ ರೀತಿಯಲ್ಲಿ ಮುನ್ನಡೆಯಬೇಕು, ಯಶಸ್ವಿ ಜೀವನ ನಡೆಸಲು ಸೂತ್ರಗಳೇನು, ಮಾನವೀಯತೆಯನ್ನು ಬೆಳೆಸಿಕೊಳ್ಳುವ ಪರಿಯ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ರಂಗೋಳಿ, ಸಂಗೀತ ಇನ್ನಿತರ ಕಾರ್ಯಕ್ರಮಗಳು ನಡೆಯಿತು. ಸುಮಾರು 3000ಕ್ಕೂ ಅಧಿಕ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಚೆಂಬೂರಿನ ನೇವಿ ನಗರ್‌, ಘಾಟ್‌ಕೋಪರ್‌, ಮಾನ್‌ಖುರ್ಡ್‌, ವಿಲೇಪಾರ್ಲೆ, ಇನ್ನಿತರ ಪ್ರದೇಶಗಳಿಂದ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ದೇಶಭಕ್ತಿಗೀತೆ, ಭಕ್ತಿಗೀತೆಗಳ ಗಾಯನ, ಭಾಷಣ, ಸಮೂಹ ಗಾಯನ, ಕಿರು ನಾಟಕ, ಏಕಪಾತ್ರಾಭಿನಯ ಇನ್ನಿತರ ಕಾರ್ಯಕ್ರಮಗಳು ಇಂಗ್ಲಿಷ್‌, ಹಿಂದಿ, ಮರಾಠಿ, ಪಂಜಾಬಿ, ಭೋಜ್‌ಪುರಿ ಇನ್ನಿತರ ಭಾಷೆಗಳಲ್ಲಿ ಮಹಿಳಾ ಕಾರ್ಯಕರ್ತೆಯರು ಪ್ರಸ್ತುತಪಡಿಸಿದರು. ಸ್ಥಳೀಯ ಸೇವಾ ದಳದ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಆಯಾಯ ವಲಯಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next