Advertisement

ಥಾಣೆ ಶ್ರೀ ಚಾಮುಂಡೇಶ್ವರೀ ಕ್ಷೇತ್ರ: ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ

02:16 PM Sep 16, 2021 | Team Udayavani |

ಥಾಣೆ: ಥಾಣೆ ಪಶ್ಚಿಮದ ವೀರ ಸಾವರ್ಕರ್‌ ನಗರದಲ್ಲಿರುವ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಸೆ. 13ರಂದು ಭಕ್ತಿ ಪೂರ್ವಕವಾಗಿ ನೆರವೇರಿತು.

Advertisement

ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಮುಖ್ಯಸ್ಥ ಶಿವಪ್ರಸಾದ್‌ ಪೂಜಾರಿ ಪುತ್ತೂರು ಅವರ ಮುಂದಾಳತ್ವದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಜಗದೀಶ್‌ ಎಸ್‌. ತಂತ್ರಿ ಅವರ ಮಾರ್ಗದರ್ಶನದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ ಶ್ರೀ ಚಾಮುಂಡೇಶ್ವರೀ ದೇವಿ ಹಾಗೂ ಪರಿವಾರ ದೈವಗಳಿಗೆ ಪಂಚಕಜ್ಜಾಯ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮತ್ತು ಮಹಾ ಪ್ರಸಾದದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು.

ಇದನ್ನೂ ಓದಿ:ಕಿರಾತಕ-2 ಚಿತ್ರದ ಸಂಭಾವನೆ ಹಿಂದಿರುಗಿಸಿದ ಯಶ್ | ನಿರ್ಮಾಪಕರ ಹಿತ ಕಾಯ್ದ ರಾಕಿ ಭಾಯ್

ಸಂಜೆ 6ರಿಂದ ರಾತ್ರಿ 8ರ ವರೆಗೆ ಕ್ಷೇತ್ರದ ಸದಸ್ಯರು ಭಜನೆ ಸೇವೆಗೈದರು. ಈ ಸುಸಂದರ್ಭದಲ್ಲಿ ಕ್ಷೇತ್ರದ ಭಕ್ತರೂ ಶುಭ ಚಿಂತಕರೂ ಆದ ಗಿರೀಶ್‌ ಪಾಟೀಲ್‌ ಮತ್ತು ಪ್ರತೀಕ್‌ ಪಾಟೀಲ್‌ ಇವರನ್ನು ಶಾಲು ಹೊದೆಸಿ, ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು. ಅನೇಕ ಭಕ್ತರು ಪಾಲ್ಗೊಂಡು ಶ್ರೀ ಸತ್ಯನಾರಾಯಣ ದೇವರು, ಶ್ರೀದೇವಿ ಹಾಗೂ ದೈವದೇವರ ಕೃಪೆಗೆ ಪಾತ್ರರಾದರು. ಮಂದಿರದ ರೂವಾರಿ ಶಿವಪ್ರಸಾದ್‌ ಪೂಜಾರಿ ದಂಪತಿ ಪ್ರಾರ್ಥನೆಗೈದು ಭಕ್ತರ ಇಷ್ಟಾರ್ಥಗಳನ್ನು ಶ್ರೀ ಚಾಮುಂಡೇಶ್ವರೀ ಅಮ್ಮ ಈಡೇರಿಸಲೆಂದು ಹರಸಿದರು. ಸೆ. 16ರಂದು ಕ್ಷೇತ್ರದಲ್ಲಿ ಮಾಸಿಕ ಸಂಕ್ರಮಣ ಪೂಜೆ ಜರಗಲಿದೆ ಎಂದು ಇದೇ ಸಂದರ್ಭ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next