ಮುಂಬಯಿ: ಹೆಜಮಾಡಿ ಗೋಪಾಲ್ ಎಂ. ಕೋಟ್ಯಾನ್ಕರ್ ಅವರಿಂದ ಸ್ಥಾಪಿಸಲ್ಪ
ಟ್ಟಿರುವ ಹಿರಿಯ ಧಾರ್ಮಿಕ ಸಂಸ್ಥೆ ಪೌರಾಣಿಕ ವಾಚಕ ಸಮಿತಿಯ 43ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆಯು ಡಿ. 1ರಂದು ಸಂಜೆ ಅಂಧೇರಿ ಪಶ್ಚಿಮದ ವೀರದೇಸಾಯಿ ಮಾರ್ಗದ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಮಿತಿಯ ಅರ್ಚಕ ಚಂದ್ರಶೇಖರ ಬಂಗೇರ ಅವರಿಂದ ಕಲಶ ಪ್ರತಿಷ್ಠಾಪನೆಯೊಂದಿಗೆ ಮಹಾ ಪೂಜೆಯು ಪ್ರಾರಂಭಗೊಂಡಿತು. ಪ್ರಥಮ ವಾಚಕರಾಗಿ ಕೇಶವ ಎಸ್. ಬಂಗೇರ ಮತ್ತು ಪ್ರಥಮ ಅರ್ಥ ವಿವರಣೆಗಾರರಾಗಿ ರತ್ನಾಕರ ಬಿ. ಬಂಗೇರ ಅವರು ಪಾಲ್ಗೊಂಡು ಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು.
ಪರಮಪವಿತ್ರ ಶನಿಗ್ರಂಥ ಪಾರಾಯಣದಲ್ಲಿ ಸುರೇಂದ್ರನಾಥ್ ಹಳೆಯಂಗಡಿ, ಸಂಜೀವ ಸಿ. ಬಂಗೇರ, ಹರಿಶ್ಚಂದ್ರ ಸಿ. ಕಾಂಚನ್, ಸದಾಶಿವ ಎನ್. ಸುವರ್ಣ, ಚಂದ್ರಶೇಖರ ಬಿ. ಬಂಗೇರ, ಸುಂದರ್ ಕಾಂಚನ್, ಜಗನ್ನಾಥ ಪಿ. ಪುತ್ರನ್, ಎಚ್. ಮಹಾಬಲ, ಇಂದಿರಾ ವಿ. ಮೆಂಡನ್, ಯಾದವಿ ಎಂ. ಕರ್ಕೇರ, ವಿದ್ಯಾ ಕಾಂಚನ್ ಅವರು ಪಾಲ್ಗೊಂಡಿದ್ದರು.
ಅರ್ಥ ವಿವರಣೆಯಲ್ಲಿ ಭೋಜ ಸುವರ್ಣ, ಉದಯ ಕರುಣಾಕರ್, ಪುಷ್ಪಾ ಜಿ. ಬಂಗೇರ, ಬಾಲಕೃಷ್ಣ ಪೂಜಾರಿ, ಲೋಕನಾಥ್ ಪಿ. ಕಾಂಚನ್ ಸಹಕರಿಸಿದರು. ಬೆಳಗ್ಗೆ ಜರಗಿದ ಭಜನಾ ಕಾರ್ಯಕ್ರಮದಲ್ಲಿ ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಮದ್ಭಾರತ ಮಂಡಳಿ ಅಂಧೇರಿ, ಶ್ರೀ ಮಹಾಲಕ್ಷ್ಮೀ ಭಜನ ಮಂಡಳಿ ಅಂಧೇರಿ ಇವರು ಪಾಲ್ಗೊಂಡು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕನಾಥ್ ಪಿ. ಕಾಂಚನ್ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲ ಭಕ್ತರಿಗೆ ಕೃತಜ್ಞತೆ ಸಲ್ಲಿಸಿ, ಪೌರಾಣಿಕ ವಾಚನ ಸಮಿತಿಯು 43 ವರ್ಷದಿಂದ ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸಾಧನೆಗಳನ್ನು ವಿವರಿಸಿ, ಸಹಕರಿಸಿದ ಓಂದಾಸ್ ಕಣ್ಣಂಗಾರ್ ಅವರನ್ನು ಅಭಿನಂದಿಸಿದರು.
ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಭೋಜ ಸುವರ್ಣ ಅವರು ವಂದಿಸಿದರು. ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.