Advertisement

ಸಹಕಾರ ಸಂಘಗಳು ರೈತರ ಜೀವನಾಡಿ- ಹೆಚ್.ಡಿ.ರಾಜೇಂದ್ರ

06:52 PM Dec 23, 2021 | Team Udayavani |

ಪಿರಿಯಾಪಟ್ಟಣ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಕಾಲಕಾಲಕ್ಕೆ ಅಗತ್ಯ ಸಾಲ ನೀಡುವ ಮೂಲಕ ರೈತರ ಜೀವನಾಡಿಯಾಗಿವೆ  ಎಂದು ಸಂಘದ ಅಧ್ಯಕ್ಷ ಹೆಚ್.ಡಿ.ರಾಜೇಂದ್ರ ತಿಳಿಸಿದರು.

Advertisement

ತಾಲ್ಲೂಕಿನ ನಾಂದಿನಾಥಪುರ ಗ್ರಾಮದಲ್ಲಿ ಗುರುವಾರ ನಡೆದ 2020-21 ನೇ ಸಾಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ನಂದಿನಾಥಪುರ ಕೃಷಿ ಪತ್ತಿನ ಸಹಕಾರ ಸಂಘವು 1967 ರಲ್ಲಿ ಪ್ರಾರಂಭವಾಗಿ ರಾಜ್ಯದಲ್ಲಿಯೇ 2 ನೇ ಅತಿ ದೊಡ್ಡ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಸ್ತುತ 3600 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿ 3.68 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. ಸಾಲವಿತರಣೆ, ಮರುಪಾವತಿ, ಠೇವಣೆ ಸಂಗ್ರಹ, ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟದಲ್ಲಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ. 2020-21 ನೇ ಸಾಲಿನಲ್ಲಿ ರೈತರಿಗೆ 35.93 ಕೋಟಿ ಸಾಲ ನೀಡಲಾಗಿದ್ದು, 19.24 ಲಕ್ಷ ನಿವ್ವಳ ಲಾಭ ಗಳಿಸಿದೆ ಇದಲ್ಲದೆ ಶೇ 90 ರಷ್ಟು ಸಾಲವನ್ನು ವಸೂಲಾತಿ ಮಾಡಲಾಗಿದೆ ಇದರೊಂದಿಗೆ ಕಾಲಕಾಲಕ್ಕೆ ಬೆಳೆಸಾಲ, ಪಿಗ್ಮಿಸಾಲ, ಸೌಧೆಸಾಲ, ಸೇರಿದಂತೆ ಅಲ್ಪಾವಧಿ ಮತ್ತು ಧೀರ್ಘಾವಧಿ ಸಾಲಗಳನ್ನು ನೀಡಲಾಗುತ್ತಿದ್ದು ರೈತರು ಈ ಸಧಾವಾಶವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಸಂಘದ ಸಿಇಒ ಶಿವಣ್ಣ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ರೈತರು ಸಹಕಾರ ಸಂಘಗಳನ್ನೆ ನಂಬಿ ಬದುಕುತ್ತಿದ್ದಾರೆ. ಸರ್ಕಾರ ಕೂಡ ಇವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇದನ್ನು ಸಂಪೂರ್ಣವಾಗಿ ಸದ್ಭಳಕೆ ಮಾಡಿಕೊಳ್ಳಬೇಕು, ಈ ಸಹಕಾರ ಸಂಘ ತಾಲ್ಲೂಕಿನಲ್ಲಿಯೇ ಅತ್ಯುತ್ತಮ ನಿವ್ವಳ ಲಾಭ ಹೊಂದಿದ್ದು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿ ಷೇರುದಾರರಿಗೆ ಸಹಕಾರಿಯಾಗಿದೆ. ಸಂಘದಿಂದ ಸಾಲ ಪಡೆದುಕೊಂಡ ರೈತರು ಹೈನುಗಾರಿಕೆ ಹಾಗೂ ನೀರಾವರಿ ಸೇರಿದಂತೆ ಇನ್ನಿತರ ಚಟುವಟಿಕೆಗೆ ಹಣ ಬಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎನ್.ಇ.ರಾಜು,  ನಿರ್ದೇಶಕರಾದ ಹೆಚ್.ಬಿ.ಗೋವಿಂದೇಗೌಡ, ಪಿ.ವಿ.ಜಲೇಂದ್ರ, ಎಂ.ಎಸ್.ಸ್ವಾಮಿಗೌಡ, ಎಸ್.ನಾಗಪ್ಪ, ಜವರೇಗೌಡ, ಕೃಷ್ಣೇಗೌಡ,  ಪಿ.ಜೆ, ಮಂಜುನಾಥ,  ವೆಂಕಟೇಶ, ಭಾಗ್ಯಸುರೇಶ್, ಎಚ್.ಕೆ.ಜಗದೀಶ್. ಸಿಬ್ಬಂದಿಗಳಾದ ಬಿ.ಬಿ.ಮಹದೇವ್, ಪಿ.ರಾಜಶೇಖರಮೂರ್ತಿ, ಬಿ.ಮಹದೇವಯ್ಯ, ಎಚ್.ಕೆ.ಮಂಜುನಾಥ್, ಎಂ.ವಿ.ರವಿ, ಮುತ್ತುರಾಜ್, ಎಂ.ಕೃಷ್ಣ, ಕೆ.ಎನ್.ಅರುಣ್ ಕುಮಾರ್, ಕೆ.ಎಸ್.ಮಧು, ಎಂ ಶಶಿಧರ, ಎನ್ ಪಿ ಗಣೇಶ್, ಎನ್ ಸಿ ರಾಜಾ, ಡಿ.ಬಸವರಾಜ್, ಮಹೇಶ್, ಪೂಣಚ್ಚ ಸೇರಿದಂತೆ ಸಂಘದ ಸರ್ವ ಸದಸ್ಯರು ಹಾಜರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next