Advertisement

ಜಗುಚಂದ್ರ ಸ್ಮರಣಾರ್ಥ ವಾರ್ಷಿಕ ಪ್ರಶಸ್ತಿ : ಡಾ|ಅಂಗಡಿ

04:31 PM May 21, 2018 | Team Udayavani |

ಧಾರವಾಡ: ರಂಗಕರ್ಮಿ ದಿ| ಜಗುಚಂದ್ರ ಕೂಡ್ಲ ಪುಣ್ಯ ಸ್ಮರಣೆ ಪ್ರಯುಕ್ತ ಪ್ರತಿವರ್ಷ ಏ. 12ರಂದು ರಂಗಭೂಮಿಯಲ್ಲಿ ಸಾಧನೆಗೈದವರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಲಿಂಗರಾಜ ಅಂಗಡಿ ಹೇಳಿದರು.

Advertisement

ನಗರದ ಸಾಹಿತ್ಯ ಭವನದಲ್ಲಿ ಜಗುಚಂದ್ರ ಕೂಡ್ಲ ಅಭಿಮಾನಿ ಬಳಗದಿಂದ ನೀಡಿದ 70 ಸಾವಿರ ಮೊತ್ತದ ಡಿಡಿ ಸ್ವೀಕರಿಸಿ ಮಾತನಾಡಿದ ಅವರು, ಪ್ರಶಸ್ತಿ ಪ್ರದಾನ ಜೊತೆಗೆ ನಾಟಕ, ವಿಚಾರಗೋಷ್ಠಿ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸದ್ಯ ದತ್ತಿ ಹಣವನ್ನು ಬ್ಯಾಂಕ್‌ನಲ್ಲಿ ಇಡಲಾಗುವುದು. ಅದರಿಂದ ಬರುವ ಬಡ್ಡಿಯಿಂದ ಕೂಡ್ಲ ಅವರ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. 

ಅಭಿನಯ ಭಾರತಿಯ ಅರವಿಂದ ಕುಲಕರ್ಣಿ ಮಾತನಾಡಿ, ಪ್ರತಿವರ್ಷ ಜಗುಚಂದ್ರ ಕೂಡ್ಲ ಅವರ ಜನ್ಮದಿನ ಜು. 28ರಂದು ನಾಟಕ ಪ್ರದರ್ಶನ ಕೈಗೊಳ್ಳಲಾಗುವುದು. ಅದರೊಟ್ಟಿಗೆ ರಂಗಭೂಮಿಯ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರು. ಜಾನಪದ ಕಲಾವಿದರಾದ ಬಸವಲಿಂಗಯ್ಯ ಹಿರೇಮಠ ಅವರು ತಮ್ಮ ಜಾನಪದ ಸಂಶೋಧನಾ ಕೇಂದ್ರದಿಂದ ಈ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

ಜಗುಚಂದ್ರ ಕೂಡ್ಲ ಅಭಿಮಾನಿಗಳ ಬಳಗದ ವತಿಯಿಂದ ಶಂಕರ ಕುಂಬಿ ಅವರು 70,000 ರೂ. ಡಿಡಿಯನ್ನು ಡಾ| ಲಿಂಗರಾಜ ಅಂಗಡಿ ಅವರಿಗೆ ನೀಡಿದರು. ವಿಶ್ವೇಶ್ವರಿ ಹಿರೇಮಠ, ಎಸ್‌.ಎಸ್‌. ದೊಡಮನಿ, ಕೆ.ಎಚ್‌. ನಾಯಕ, ಪ್ರಮೀಳಾ ಜಕ್ಕಣ್ಣವರ, ಲತಾ ಮುಳ್ಳೂರ, ಬಿ. ಮಾರುತಿ, ಕುಸುಮಾ ಹರಿಹರ, ಎಫ್‌.ಬಿ. ಕಣವಿ, ಬಿ.ಐ. ಈಳಿಗೇರ, ಬಸವರಾಜ ವಾಸನದ, ರಾಜಶೇಖರ ಹೊನ್ನಪ್ಪನವರ, ಪ್ರಭು ಹಂಚಿನಾಳ, ಅನಿತಾ ಮಹಾಜನಶೆಟ್ಟರ, ಚಂದ್ರಶೇಖರ ಕುಂಬಾರ, ಕೆ.ಎ. ದೊಡಮನಿ, ಪ್ರಕಾಶ ಅಂಗಡಿ, ಎಸ್‌.ಎನ್‌. ಅರಳಿಕಟ್ಟಿ ಇದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಕೆ.ಎಸ್‌. ಕೌಜಲಗಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next