Advertisement

ಪೋತೀಸ್‌ನಲ್ಲಿ ಅನ್ನಸಂತರ್ಪಣೆಯ ರಾಜ್ಯೋತ್ಸವ

12:20 PM Nov 05, 2018 | |

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಪೋತೀಸ್‌ ವಸ್ತ್ರಭಂಡಾರದ ಕೆಂಪೇಗೌಡ ರಸ್ತೆಯ ಮಳಿಗೆಯಲ್ಲಿ 1500 ಮಂದಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು.

Advertisement

ನಗರದ ಪೋತೀಸ್‌ ಮಳಿಗೆಗೆ ಇದು ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯಾದ್ದರಿಂದ  ಇಡೀ ವಸ್ತ್ರಭಂಡಾರವನ್ನು ಹಳದಿ-ಕೆಂಪು ಬಣ್ಣದಿಂದ ಸಿಂಗರಿಸಲಾಗಿತ್ತು. ಅಲ್ಲದೆ, ಕನ್ನಡ ಧ್ವಜಗಳು ರಾರಾಜಿಸುತ್ತಿದ್ದವು. ಸಿಬ್ಬಂದಿ ಶ್ವೇತ ವರ್ಣದ ಉಡುಗೆ ತೊಟ್ಟು ಕನ್ನಡ ಧ್ವಜ ಹಾಗೂ ಬಣ್ಣದ ಶಾಲು ಹಾಕಿಕೊಂಡು ಗ್ರಾಹಕರನ್ನು ಸ್ವಾಗತಿಸುತ್ತಿದ್ದದ್ದು ಕಂಡುಬಂತು. ಮಳಿಗೆಯಲ್ಲಿ ಕನ್ನಡ ಗೀತೆಗಳ ಧ್ವನಿ ಮೊಳಗುತ್ತಿದ್ದದ್ದು ವಿಶೇಷವಾಗಿತ್ತು.

ಕನ್ನಡ ಜನತೆಗೆ ಅನ್ನಸಂತರ್ಪಣೆ ನೀಡುವ ಮೂಲಕ ಮೊದಲ ವರ್ಷದ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸತಂದಿದೆ. ಸದ್ಯದಲ್ಲೇ ದೀಪಾವಳಿ ಹಬ್ಬ ಇರುವುದರಿಂದ ವಸ್ತ್ರಗಳ ಮೇಲೆ ರಿಯಾಯಿತಿ ಹಾಗೂ ಪ್ರತಿ ಶಾಪಿಂಗ್‌ ಮೇಲೆ ಗ್ರಾಹಕರಿಗೆ ಒಂದು ಸೀಟ್‌ ಬಾಕ್ಸ್‌ ಅನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದು ಪೋತೀಸ್‌ ಪ್ರಧಾನ ವ್ಯವಸ್ಥಾಪಕ ಕೃಷ್ಣ ಕುಮಾರ್‌ ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಮೀಡಿಯಾ ಮ್ಯಾನೇಜರ್‌ ಪಿ.ಜೆ.ವಿಜಯ್‌, ಮಾನವ ಸಂಪನ್ಮೂಲ ಅಧಿಕಾರಿ ಸರವಣನ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next