Advertisement

ನರ್ತಕಿ ಎದುರು ಅಣ್ಣಾವ್ರ ಕಟೌಟ್‌

12:00 PM Jan 26, 2018 | |

ಬೆಂಗಳೂರಿನ ನರ್ತಕಿ ಚಿತ್ರಮಂದಿರ ಎದುರು ಡಾ.ರಾಜಕುಮಾರ್‌ ಅವರ ಕಟೌಟ್‌ ನಿಂತಿದೆ. ಹೌದು, ಬುಧವಾರ ದುನಿಯಾ ವಿಜಯ್‌ ಅಭಿಮಾನಿಗಳು ಅಣ್ಣಾವ್ರ ಕಟೌಟ್‌ಗೆ ಹಾರ ಹಾಕಿ ಹಾಲಿನ ಅಭಿಷೇಕ ಮಾಡುವ ಮೂಲಕ “ಕನಕ’ನ ಆಗಮನಕ್ಕೆ ಸಜ್ಜಾಗಿದ್ದಾರೆ. ನಿರ್ದೇಶಕ ಕಮ್‌ ನಿರ್ಮಾಪಕ ಆರ್‌.ಚಂದ್ರು ಅವರು, ನರ್ತಕಿ ಚಿತ್ರಮಂದಿರದಲ್ಲಿ ಅಣ್ಣಾವ್ರ ಕಟೌಟ್‌ ನಿಲ್ಲಿಸುವುದಾಗಿ ಈ ಹಿಂದೆ ಹೇಳಿದ್ದರು.

Advertisement

ಅದರಂತೆ, ಅವರು ಕಟೌಟ್‌ ನಿಲ್ಲಿಸುವ ಮೂಲಕ  ಅಭಿಮಾನಿಗಳ ಮೊಗದಲ್ಲಿ ಸಂತಸದ ಹೊಳೆ ಹರಿಸಿದ್ದಾರೆ. “ಒಡಹುಟ್ಟಿದವರು’ “ಆಕಸ್ಮಿಕ’, “ಶಬ್ಧವೇದಿ’ ಚಿತ್ರಗಳ ಬಳಿಕ ನರ್ತಕಿ ಚಿತ್ರಮಂದಿರದಲ್ಲಿ ಈಗ ಅಣ್ಣಾವ್ರ ಕಟೌಟ್‌ ನಿಂತಿದೆ. ಸುಮಾರು ಎರಡುವರೆ ದಶಕಗಳ ಹಿಂದೆ ಅಣ್ಣಾವ್ರ ಚಿತ್ರಗಳು ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗ, ಅಲ್ಲಿ ಎತ್ತರದ ಕಟೌಟ್‌ ತಲೆಎತ್ತುತ್ತಿದ್ದವು.

ಅಭಿಮಾನಿಗಳು ಸಂತಸದಿಂದಲೇ ಕಟೌಟ್‌ಗೆ ಹಾರ ಹಾಕಿ ಸಂಭ್ರಮಿಸುತ್ತಿದ್ದರು. ಆ ಸಂಭ್ರಮ ಈಗ “ಕನಕ’ ಚಿತ್ರದ ಬಿಡುಗಡೆ ಮುನ್ನ ಕಾಣಬಹುದಾಗಿದೆ. ಬುಧವಾರ ಬೆಳಗ್ಗೆಯೇ ಅಣ್ಣಾವ್ರ ಕಟೌಟ್‌ ನಿಂತಿದ್ದು, ಅಭಿಮಾನಿಗಳು ಕಟೌಟ್‌ ನಿಲ್ಲಿಸುವ ಸಂದರ್ಭದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇಂದು “ಕನಕ’ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಅಣ್ಣಾವ್ರ ಕಟೌಟ್‌ ಪಕ್ಕ “ಕನಕ’ ಚಿತ್ರದ ನಾಯಕ ದುನಿಯಾ ವಿಜಯ್‌ ಅವರ ಕಟೌಟ್‌ ಕೂಡ ನಿಲ್ಲಲಿದೆ. 

“ಕನಕ’ಗೆ “ರಾಜ್‌ಕುಮಾರ್‌ ಫ್ಯಾನ್‌’ ಎಂಬ ಅಡಿಬರಹ ಕೂಡಾ ಇದೆ.  “ಕನಕ’ ಆಟೋ ಡ್ರೆ„ವರ್‌ ಒಬ್ಬನ ಕಥೆ. ಆತನೇನು ಡಿಗ್ರಿ ಮಾಡಿದೋನಲ್ಲ. ಓದಿದ್ದು ಕಡಿಮೆಯೇ. ಆದರಾತ ಅಪ್ಪಟವಾಗಿ ಡಾ. ರಾಜ್‌ಕುಮಾರ್‌ ಅವರ ಅಭಿಮಾನಿ. ಇಂಥಾ ವ್ಯಕ್ತಿಯ ಲವ್‌, ಅದರ ಸುತ್ತಲ ಘಟನಾವಳಿಗಳನ್ನು ಸಿನಿಮಾ ಮಾಡಲು ಹೊರಟಿದ್ದಾರೆ ಚಂದ್ರು.

ಚಿತ್ರದಲ್ಲಿ ತೆಲುಗು ನಟಿ ಸುಧಾ ಅವರು ನಟಿಸಿದ್ದಾರೆ. ವಿಶೇಷವೆಂದರೆ, ಅವರಿಲ್ಲಿ ದುನಿಯಾ ವಿಜಯ್‌ ಅವರ ತಾಯಿಯಾಗಿ ನಟಿಸುತ್ತಿದ್ದಾರೆ. ನಟಿ ಸುಧಾ ಅವರು ತೆಲುಗಿನಲ್ಲಿ ಬಹು ಬೇಡಿಕೆಯ ಪೋಷಕ ನಟಿ. ಚಿರಂಜೀವಿ ಸೇರಿದಂತೆ ಮಹೇಶ್‌ಬಾಬು ಹಾಗೂ ಇತರೆ ನಟರ ಬಹುತೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

Advertisement

ಚಿತ್ರದಲ್ಲಿನ ವಿಜಯ್‌ ಅವರ ಇಂಟ್ರೋಡಕ್ಷನ್‌ ಸಾಂಗ್‌ ಅನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ. ವಿಶಿಷ್ಟವಾದ ವಾರಿಯರ್‌ ಶೈಲಿಯ  ಈ ಹಾಡು ದೇವನಹಳ್ಳಿ ಬಳಿ ಹದಿನೈದೆಕರೆಯಷ್ಟು ವಿಶಾಲವಾದ ಕೆಂಪು ಹುಡಿ ಮಣ್ಣಿನ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ನವೀನ್‌ ಸಜ್ಜು ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next