Advertisement
ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯನ್ನು ಪ್ರಾರಂಭ ದಲ್ಲಿ ಬಿಜೆಪಿಯವರು ಕನ್ನ ಭಾಗ್ಯ ಎಂದು ಲೇವಡಿ ಮಾಡಿದ್ದರು. ಆದರೆ ಈ ಯೋಜನೆಯ ಕೆಲವು ಲೋಪ ದೋಷಗಳನ್ನು ನಾವು ಸರಿ ಪಡಿಸಿದ ಬಳಿಕ ಈಗ ಎಲ್ಲೆಡೆ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಇದಕ್ಕೆ ಅಕ್ಕಿಯನ್ನು ಕೇಂದ್ರ ಸರಕಾರ ನೀಡುತ್ತಿದೆ ಎಂದು ಇದೀಗ ಬಿಜೆಪಿಯವರು ಹೇಳಿ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Related Articles
ಯಾವುದೇ ಜಿಲ್ಲೆಯ ಕಾರ್ಮಿಕರು ರಾಜ್ಯದೊಳಗೆ ಎಲ್ಲಿ ಬೇಕಾದರೂ ಪಡಿತರ ಪಡೆಯುವುದಕ್ಕೆ ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದೆ. ಇದೇ ರೀತಿ ಸಾಧ್ಯವಿದ್ದರೆ ಕೇಂದ್ರ ಸರ ಕಾರ ದವರು ಹೊರ ರಾಜ್ಯದ ಕಾರ್ಮಿಕರು ಬೇರೆ ಯಾವುದೇ ರಾಜ್ಯಕ್ಕೆ ಹೋದಾಗ ಅಲ್ಲಿ ಆಹಾರ ಪಡಿ ತರ ಪಡೆ ಯುವು ದಕ್ಕೆ ಸೌಲಭ್ಯ ಕಲ್ಪಿಸಿ ಕೊಡಲಿ ಎಂದು ಖಾದರ್ ಆಗ್ರಹಿಸಿ ದರು. ಈ ಬಗ್ಗೆ ಆಹಾರ ಇಲಾಖೆ ವತಿಯಿಂದ ಕೇಂದ್ರ ಸರ ಕಾರಕ್ಕೂ ಪತ್ರ ಬರೆಯಲಿದ್ದೇನೆ ಎಂದರು.
Advertisement
ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಆರೋಗ್ಯ ಮಿಶನ್‌ನಂತಹ ಹಲವು ಕಾರ್ಯಕ್ರಮಗಳಲ್ಲಿ ಕೇಂದ್ರ ಸರಕಾರ ತನ್ನ ಪಾಲನ್ನು ಕಡಿತ ಗೊಳಿಸಿದೆ. ಇದರಿಂದಾಗಿಯೇ ಯಾವುದೇ ಶಾಲೆಯಲ್ಲಿ ಕಳೆದ ನಾಲ್ಕು ವರ್ಷ ದಿಂದ ಹೊಸ ಕೊಠಡಿ ನಿರ್ಮಾಣ ಗೊಳ್ಳುತ್ತಿಲ್ಲ. ಡೀಸೆಲ್, ಪೆಟ್ರೋಲ್ ಬೆಲೆ ಕಡಿತ ಗೊಂಡರೂ ಕೇಂದ್ರ ಸರಕಾರ ಅದರ ಪ್ರಯೋ ಜನ ವನ್ನು ಜನರಿಗೆ ವರ್ಗಾಯಿಸುತ್ತಿಲ್ಲ ಎಂದವರು ಆರೋಪಿಸಿದರು.
ಹೊಟೇಲ್ ಕಿರಿಕಿರಿಬೆಂಗಳೂರು ಮಾದರಿಯಲ್ಲಿ ದ.ಕ.ದಲ್ಲೂ ಇಂದಿರಾ ಕ್ಯಾಂಟೀನ್ ಅನುಷ್ಠಾನವಾಗಲಿದೆ. ಕೆಲವೆಡೆ ಖಾಸಗಿ ಹೊಟೇಲ್‌ನವರಿಂದ ಇದಕ್ಕೆ ವಿರೋಧವೂ ಎದುರಾಗುತ್ತಿದೆ. ಬೆಂಗಳೂರಿನಲ್ಲೂ ಹೀಗೆಯೇ ಆಗಿತ್ತು. ತೊಕ್ಕೊಟ್ಟಿನಲ್ಲಿ ಒಂದೆರಡು ಹೊಟೇಲ್‌ಗಳು ತಮಗೆ ಕ್ಯಾಂಟೀನ್‌ನಿಂದ ನಷ್ಟವಾಗಬಹುದು ಎಂಬ ಹೆದರಿಕೆ ಯಿಂದಲೋ ಏನೋ ಧಾರ್ಮಿಕ ವಿಚಾರವನ್ನು ಕ್ಯಾಂಟೀನ್ ವಿಚಾರದಲ್ಲಿ ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಧಾರ್ಮಿಕತೆಗೆ ತೊಂದರೆ ಆಗದಂತೆ ಸರಕಾರಿ ಜಾಗದಲ್ಲೇ ಕ್ಯಾಂಟೀನ್ ನಿರ್ಮಾಣಗೊಳ್ಳಲಿದೆ ಎಂದರು. ಪೊಲೀಸರಿಗೆ ಮಾಹಿತಿ ನೀಡಿ: ಎಚ್‌ಡಿಕೆಗೆ ಖಾದರ್
ದೀಪಕ್ ಹತ್ಯೆ ಕುರಿತಂತೆ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯು.ಟಿ. ಖಾದರ್ ಅವರು, ಒಂದು ಕೊಲೆಯಲ್ಲಿ ರಾಜಕೀಯ ವಿಚಾರಕ್ಕಿಂತ ನೈಜತೆ ಮುಖ್ಯವಾಗುತ್ತದೆ. ಕೊಲೆಯಲ್ಲಿ ಯಾರೂ ಕೂಡ ರಾಜಕೀಯ ಮಾಡುವುದು ಬೇಡ. ಕುಮಾರಸ್ವಾಮಿ ಅವರಲ್ಲಿ ಈ ಬಗ್ಗೆ ಮಾಹಿತಿ ಇದ್ದರೆ ಅವರು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ತನಿಖೆಗೆ ಸಹಕರಿಸಬೇಕು. ಹತ್ಯೆಯ ಹಿಂದೆ ಯಾರಿದ್ದಾರೆ? ಯಾಕಾಗಿ ಕೊಲೆ ಮಾಡಲಾಗಿದೆ? ಎಂಬುದು ತನಿಖೆಯಿಂದಷ್ಟೇ ತಿಳಿದು ಬರಲಿದೆ. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ವಿನಾಕಾರಣ ಆತಂಕ ಸೃಷ್ಟಿಸುವುದು ಸರಿಯಲ್ಲ ಎಂದವರು ಹೇಳಿದರು.