Advertisement
ನಗರದ ತಮ್ಮ ನಿವಾಸದಲ್ಲಿ ಭಾನುವಾರ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿ, ಅವರು ಈ ಭರವಸೆ ನೀಡಿದರು. ಈ ಮೊದಲು ರಾಜ್ಯ ಸರಕಾರದ ಮನವೊಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇನೆ. ನಾನು ಮತ್ತು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದಾಗ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಖರೀದಿಗೆ ಮಿತಿ ತೆರವುಗೊಳಿಸುವ ವಿಶ್ವಾಸ ಇದೆ. ಕೋವಿಡ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ಮತ್ತೆ ಮುಖ್ಯಮಂತ್ರಿಗಳ ಭೇಟಿ ಸಾಧ್ಯವಾಗಿರಲಿಲ್ಲ. ನಾಳೆಯೇ ಬೆಂಗಳೂರಿಗೆ ಹೊರಡುತ್ತಿದ್ದು, ಈ ಬಗ್ಗೆ ಮಾತನಾಡಲಾಗುವುದು. ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ ಮನವರಿಕೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ. ಒಂದು ವೇಳೆ ಸರಕಾರ ಖರೀದಿ ಮಿತಿಯನ್ನು ತೆಗೆಯದಿದ್ದರೆ, ನಾನೇ ಮುಂದೆ ನಿಂತು ರೈತರ ಪರವಾಗಿ ದೊಡ್ಡ ಮಟ್ಟದ ಹೋರಾಟಕ್ಕೆ ಇಳಿಯುತ್ತೇನೆ ಎಂದರು.
Advertisement
ಶಾಸಕರ ನಿವಾಸಕ್ಕೆ ಅನ್ನದಾತರ ದಂಡು
12:53 PM Jan 17, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.