ಪ್ರತಿವರ್ಷ ಸರ್ಕಾರದಿಂದಲೇ ಆಚರಿಸಬೇಕು ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಒತ್ತಾಯಿಸಿಸಿದರು.
Advertisement
ನಗರದ ಧರ್ಮ ಪ್ರಕಾಶ ಗಲ್ಲಿಯ ಶರಣ ನೂಲಿಯ ಚಂದಯ್ಯ ಭವನದಲ್ಲಿ ಆದಿ ಜಾಂಬವ ಮಾದಿಗ ಸಮಾಜ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಶರಣ ಮಾದರ ಚನ್ನಯ್ಯ ಪಂಚ ಕಮಿಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಾಮ್ರಾಟ್ ಅಣ್ಣಾಭಾವು ಸಾಠೆ ಅವರ 97ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದ ಜಯಂತಿ ಆಚರಿಸುವ ಕುರಿತು ಎಲ್ಲರೂ ಸೇರಿ ಸರ್ಕಾರಕ್ಕೆ ಒತ್ತಾಯಿಸೋಣ ಎಂದರು.
ಸಾಠೆಯವರು 35 ಕಾದಂಬರಿಗಳನ್ನು, 300ಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯ ಜಾಗತಿಕ ಮಟ್ಟದ
ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಬಣ್ಣಿಸಿದರು. ಉಪನ್ಯಾಸಕ ಪ್ರಹ್ಲಾದ ಚಂಗಟೆ ವಿಶೇಷ ಉಪನ್ಯಾಸ ನೀಡಿದರು. ಪಂಚ ಕಮಿಟಿ ಅಧ್ಯಕ್ಷ ಘಾಳೆಪ್ಪ ಮುಜನಾಯಕ
ಅಧ್ಯಕ್ಷತೆ ವಹಿಸಿದ್ದರು. ಆದಿ ಜಾಂಬವ ಮಾದಿಗ ಸಮಾಜ ಸಂಘದ ಅಧ್ಯಕ್ಷ ಯುವರಾಜ ಭೆಂಡೆ ಸ್ವಾಗತಿಸಿ ಪ್ರಾಸ್ತಾವಿಕ
ಮಾತನಾಡಿದರು. ಶರಣೆ ಚಿತ್ರಮ್ಮ ತಾಯಿ, ನಗರ ಸಭೆ ಸದಸ್ಯೆ ಕಾವೇರಿ ಭೆಂಡೆ, ಮುಖಂಡರಾದ ದಿಲೀಪ ಸಿಂಧೆ,
ಮನೋಹರ ಮೈಸೆ, ಕೇಶಪ್ಪ ಬಿರಾದಾರ, ಸಂದೀಪ ಬುಯೆ, ಶಬ್ಬೀರ ಪಾಶಾ ಮುಜಾವರ, ವಾಲ್ಮೀಕ ಖನಕೂರೆ,
ಕಾಳಿದಾಸ ಜಾಧವ, ದಿಲೀಪಗೀರ ಗೋಸ್ವಾಮಿ, ಸಮಾಜದ ಪ್ರಮುಖರಾದ ಅಶೋಕ ಸಂಗನೂರೆ, ತುಕಾರಾಮ
ಲಾಡೆ, ದತ್ತು ಗೋರಾ, ಸಂಜುಕುಮಾರ ಸಂಗನೂರೆ ದಿಗಂಬರ ಜಲೆª, ಪ್ರದೀಪ ಢಗಳೆ, ಶ್ರೀನಿವಾಸ ಜಲೆª, ದತ್ತು
ಭೆಂಡೆ, ಅಜಯ ಕೊಟನೂರೆ, ಆನಂದ ಮುಜನಾಯಕ, ಪ್ರವೀಣ ಆಲಗೂಡೆ, ವಿಜಯಕುಮಾರ ಭೆಂಡೆ,
ದತ್ತು ಗೌರ, ಲಕ್ಷ್ಮಣ ತಂಬುರ್ಜಿ ಭಾಗವಹಿಸಿದ್ದರು. ರಮೇಶ ಉಮ್ಮಾಪೂರೆ ನಿರೂಪಿಸಿದರು. ಇದಕ್ಕೂ ಮುನ್ನ
ಅಣ್ಣಾಭಾವು ಸಾಠೆ ಅವರ ಭಾವಚಿತ್ರ ಮೆರವಣಿಗೆ ಜರುಗಿತು