Advertisement

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

01:12 AM Jun 16, 2024 | Team Udayavani |

ಚನ್ನಪಟ್ಟಣ: ನಮ್ಮನ್ನು ಸೋಲಿಸುವವರು ಯಾರೂ ಇಲ್ಲ ಎಂಬ ದುರಹಂಕಾರದಲ್ಲಿದ್ದ ಅಣ್ಣ ತಮ್ಮಂದಿರಿಗೆ ಈ ಬಾರಿಯ ಚುನಾವಣೆಯಲ್ಲಿ ಡಾ| ಮಂಜುನಾಥ್‌ ಅವರನ್ನು ಗೆಲ್ಲಿಸುವ ಮೂಲಕ ಜನತೆ ತಕ್ಕ ಉತ್ತರ ನೀಡಿದ್ದೀರಿ. ಈಗ ಅಣ್ಣತಮ್ಮಂದಿರ ವಕ್ರದೃಷ್ಟಿ ಚನ್ನಪಟ್ಟಣದ ಮೇಲೆ ಬಿದ್ದಿದೆ.

Advertisement

ಎಚ್ಚರಿಕೆಯಿಂದಿರಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಮುಂದಿನ ಉಪಚುನಾವಣೆ ಅಂಗವಾಗಿ ಬ್ಯಾನರ್‌ ಹಾಕಿಕೊಂಡಿದ್ದಾರೆ. ಚನ್ನಪಟ್ಟಣದ ಜನತೆಗೂ ಮಂಡ್ಯದವರ ಗುಣ ಇದೆ. ನೀವು ಯಾವುದಕ್ಕೂ ಬಗ್ಗುವವರಲ್ಲ, ಅಣ್ಣ ತಮ್ಮಂದಿರ ದರ್ಪ ದುರಾಡಳಿತ ನಿಮ್ಮ ಮುಂದೆ ನಡೆಯುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ “ನನ್ನ ಕೆಲಸಕ್ಕೆ ಕೂಲಿ ಕೊಡಿ’ ಎಂದು ಕೇಳಿಕೊಂಡು ತಿರುಗಾಡಿದರು. ಅವರು ಯಾವ ಕ್ಷೇತ್ರಕ್ಕೆ ಏನು ದುಡಿಮೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಇವರ ಸಾಕ್ಷಿ ಗುಡ್ಡೆ ಇರುವುದು ಕೇವಲ ಕನಕಪುರದಲ್ಲಿ ಮಾತ್ರ. ಚನ್ನಪಟ್ಟಣ, ರಾಮನಗರದಲ್ಲಲ್ಲ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next