Advertisement

Ankola; ನೀರುಪಾಲಾಗಿದ್ದ ಟ್ಯಾಂಕರ್‌ ಇಂಧನ ಖಾಲಿ ಮಾಡಿದ್ದು ಸುರತ್ಕಲ್‌ನ ಯುವಕರು!

01:56 AM Jul 21, 2024 | Team Udayavani |

ಸುರತ್ಕಲ್‌: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಸಂಭವಿಸಿ ನದಿ ಪಾಲಾ ಗಿದ್ದ ಎಲ್‌ಪಿಜಿ ಗ್ಯಾಸ್‌ ಟ್ಯಾಂಕರ್‌ನ ಅನಿಲ ಸೋರಿಕೆ ಯನ್ನು ಜೀವ ಪಣಕ್ಕಿಟ್ಟು ನಿಭಾಯಿಸುವಲ್ಲಿ ಯಶಸ್ವಿ ಯಾದವರು ಸುರತ್ಕಲ್‌ ಎಚ್‌ಪಿಸಿಎಲ್‌ ಸ್ಥಾವರದ ಗುತ್ತಿಗೆ ಸಿಬಂದಿ.

Advertisement

ಮಂಗಳೂರು ಎಚ್‌ಪಿಸಿಎಲ್‌ ಕಂಪೆನಿಯ ಗುತ್ತಿಗೆಯ ಎಸ್‌ ಪಿ ಎಂಜಿನಿಯರಿಂಗ್‌ ವರ್ಕ್ಸ್ ನ ಕಾರ್ಮಿ ಕರು ಎನ್‌ಡಿಆರ್‌ಎಫ್‌, ನೌಕಾ ದಳ ಹಾಗೂ ಅಗ್ನಿಶಾಮಕ ಸಿಬಂದಿ ಜತೆ ಸೇರಿ ಅನಿಲವನ್ನು ಖಾಲಿ ಮಾಡಿದ್ದಾರೆ. ಬಾಳ ಗ್ರಾಮದ ಸಂಕೇತ ಪೂಜಾರಿ, ಕುಳಾಯಿಗುಡ್ಡೆ ನಿವಾಸಿ ಮನೋಜ್‌, ಜನತಾ ಕಾಲನಿಯ ರತನ್‌, ಕಾವೂರಿನ ಸಂತೋಷ್‌ ಅವರು ನೇರ ಕಾರ್ಯಾಚರಣೆ ಕೈಗೊಂಡವರು. ಎಚ್‌ಪಿಸಿಎಲ್‌ ಸಂಸ್ಥೆಯ ಸುರûಾ ಅಧಿಕಾರಿ ಶಿವರಾಜ್‌ ಚೌಹಾಣ್‌ ಮಾರ್ಗದರ್ಶನ ನೀಡಿದರು.

ಸ್ವಲ್ಪ ಹೆಚ್ಚು ಕಡಿಮೆಯಾದರೂ ಸ್ಫೋಟವಾಗುವ ಸಾಧ್ಯತೆ ಮಧ್ಯೆ ತಮ್ಮ ಜೀವವನ್ನು ಪಣಕ್ಕಿಟ್ಟು ಯಶಸ್ವಿ ಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದರು ಎನ್ನುತ್ತಾರೆ ಎಸ್‌ಪಿ ಎಂಜಿನಿಯರಿಂಗ್‌ ವರ್ಕ್ಸ್ ಮಾಲಕ ಶಿವಪ್ರಸಾದ್‌ ಶೆಟ್ಟಿ .

ಕಾರ್ಯಾಚರಣೆ ಹೇಗೆ ನಡೆಯಿತು?
ನೀರಲ್ಲಿ ಟ್ಯಾಂಕರ್‌ ಕೊಚ್ಚಿಕೊಂಡು ಹೋಗುವ ಸಂದರ್ಭ ಅದರ ಹಿಂಭಾಗದಲ್ಲಿರುವ ಮೀಟರ್‌ಗೆàಜ್‌ಗೆ ಹಾನಿಯಾಗಿ ಸೋರಿಕೆ ಆರಂಭವಾಗಿತ್ತು. ಸೋರಿಕೆ ತಡೆಯುವುದು ಮೊದಲ ಸವಾಲಾಗಿತ್ತು. ಕಿಡಿ ಹೊತ್ತಿ ಅಪಾಯವಾಗದಂತೆ ಯಾವುದೇ ಕಬ್ಬಿಣದ ಆಯುಧ ಬಳಸದೆ ಕೇವಲ ಮರದ ರೀಪು ಸಹಿತ ಸುರಕ್ಷಾ ಕ್ರಮ ತೆಗೆದುಕೊಂಡು ಸೋರಿಕೆ ತಡೆಗಟ್ಟಲಾಯಿತು. ಬಳಿಕ ಅಗ್ನಿಶಾಮಕ, ಎನ್‌ಡಿಆರ್‌ಎಫ್‌ ತಂಡದೊಂದಿಗೆ ತೆರಳಿ ಇಂಧನ ಖಾಲಿ ಮಾಡಲು ಯತ್ನ ನಡೆಯಿತಾದರೂ ಟ್ಯಾಂಕರ್‌ ನೀರಿನ ರಭಸಕ್ಕೆ ಓಲಾಡುತ್ತಿದ್ದರಿಂದ ಸಾಧ್ಯವಾಗಲಿಲ್ಲ. ಬಳಿಕ ದಡದವರೆಗೆ ಎಳೆಯಲು ಸಿದ್ಧತೆ ನಡೆಸಿ, ನೀರಿನಲ್ಲಿಯೇ ಇಂಧನ ಖಾಲಿ ಮಾಡಲಾಯಿತು. ಶುಕ್ರವಾರ ಸಂಜೆ 6ರವರೆಗೆ ಕಾರ್ಯಾಚರಣೆ ನಡೆದಿತ್ತು.

Advertisement

ಟ್ಯಾಂಕರ್‌ನ ಗೇಜ್‌ಗೆ ಹಾನಿಯಾಗಿತ್ತು. ಟ್ಯಾಂಕ ರ್‌ನ ಕ್ಯಾಬಿನ್‌ ಇರಲಿಲ್ಲ. ಅದರಲ್ಲಿದ್ದ 18 ಟನ್‌ ಇಂಧ ನವನ್ನು ನೀರಿನಲ್ಲೇ ಖಾಲಿ ಮಾಡಿದೆವು. ಅಗ್ನಿಶಾಮಕದ ನೆರವಿನಿಂದ ಪ್ರಶರ್‌ ಮೂಲಕ ಇಂಧನವನ್ನು ಪೂರ್ತಿ ಖಾಲಿ ಮಾಡಿದೆವು. ನೀರಿನಲ್ಲಿಯೇ ಇದ್ದುದರಿಂದ ಯಾವುದೇ ಕಿಡಿ ಹೊತ್ತಿ ಸ್ಫೋಟವಾಗುವ ಅವಕಾಶ ಕಡಿಮೆ. ಆದರೂ ಸಾಕಷ್ಟು ಮುಂಜಾಗ್ರತೆ ವಹಿಸಿದ್ದೆವು ಎನ್ನುತ್ತಾರೆ ತಂಡದ ರತನ್‌.

Advertisement

Udayavani is now on Telegram. Click here to join our channel and stay updated with the latest news.

Next