Advertisement

Video: ರೀಲ್ಸ್‌ಗಾಗಿ ಹಾವನ್ನು ಬಾಯಿಯಲ್ಲಿ ಕಚ್ಚಿ ಹಿಡಿದ ಯುವಕ; ಮಧ್ಯಾಹ್ನದ ವೇಳೆಗೆ ಮೃತ್ಯು

01:15 PM Sep 07, 2024 | Team Udayavani |

ತೆಲಂಗಾಣ:  ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಳ್ಳುವ ಎಷ್ಟೋ ಘಟನೆಗಳು ಪ್ರತಿದಿನ ವರದಿಯಾಗುತ್ತವೆ. ಇಂಥದ್ದೇ ಒಂದು ಘಟನೆ ತೆಲಂಗಾಣದಲ್ಲಿ ಶುಕ್ರವಾರ(ಸೆ.6ರಂದು) ನಡೆದಿದೆ.

Advertisement

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬನ್ಸವಾಡ ಮಂಡಲದ ದೇಸಾಯಿಪೇಟ್ ಗ್ರಾಮದ ಹಾವಾಡಿಗನೊಬ್ಬನ ಮಗ ಶಿವ ಎಂಬಾತ ಗ್ರಾಮದ ಕಾಲೋನಿಗೆ ಪ್ರವೇಶಿಸಿದ 6 ಅಡಿಯ ನಾಗರ ಹಾವನ್ನು ಹಿಡಿದು ಗ್ರಾಮದಿಂದ ಹೊರಗೆ ಬಿಡಲು ತೆಗೆದುಕೊಂಡು ಹೋಗುವ ವೇಳೆ ಹುಚ್ಚು ಸಾಹಸವನ್ನು ಮಾಡಿದ್ದಾನೆ.

ಹಾವನ್ನು ಹಿಡಿದುಕೊಂಡು ಅದನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದ್ದಾನೆ. ಇದನ್ನು ಅಲ್ಲಿದ್ದವರು ಅಚ್ಚರಿಗೊಂಡು ವಿಡಿಯೋ ಹಾಗೂ ಫೋಟೋ ತೆಗೆದಿದ್ದಾರೆ. ಆದರೆ ಬಾಯಿಯೊಳಗೆ ಹೋದ ಹಾವು ಶಿವನಿಗೆ ಕಚ್ಚಿದ್ದು, ಇದು ಶಿವನ ಗಮನಕ್ಕೆ ಬಂದಿರುವುದಿಲ್ಲ.

ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಶಿವ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆತ ಆದಾಗಲೇ ಹಾವು ಕಡಿತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Advertisement

ವಿಷಕಾರಿ ಹಾವು ಕಡಿತಕ್ಕೂ ಮುನ್ನ ಶಿವ ಹಾವನ್ನು ಹಿಡಿದುಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next