Advertisement

Ankola Bus Stand ಮತ್ತೆ ಕಳ್ಳರ ಕರಾಮತ್ತು; ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನ

08:22 PM Jun 23, 2024 | Team Udayavani |

ಅಂಕೋಲಾ : ಇಲ್ಲಿನ ಬಸ್ ನಿಲ್ದಾಣದಲ್ಲಿ ಬೈಕ್ ಕಳ್ಳರ ಕರಾಮತ್ತು ಮತ್ತೆ ಮುಂದುವರಿದಿದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನವಾಗಿರುವ ಘಟನೆ ನಡೆದಿದ್ದು,ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಅಲಗೇರಿಯ ಕದಂಬ ವಾಟರ್ ಪ್ಯೂರಿಪಾಯರ್‌ನಲ್ಲಿ ಕೆಲಸ ಮಾಡುವ ಅಕ್ಷಯ ಆನಂದು ಆಚಾರಿ ಹನುಮಟ್ಟಾ ಅವರ ಹೀರೋ ಹೋಂಡಾ ಪ್ಲಸ್ ಬೈಕ್ ಕಳ್ಳತನವಾಗಿದೆ.

ಶುಕ್ರವಾರ ಬೆಳಿಗ್ಗೆ 7.30 ಗಂಟೆಯಿಂದ ಮಧ್ಯಾಹ್ನ 2.45ರ ನಡುವೆ ಬೈಕ್ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪಿಎಸೈ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

ಸಿಟಿಸಿಟಿಯಲ್ಲಿ ಸೆರೆ :
ಕಳೆದ 15 ದಿನದ ಹಿಂದಷ್ಟೇ ಇಲ್ಲಿಯ ಬಸ್ ನಿಲ್ದಾಣದಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ಸಿಸಿ ಕ್ಯಾಮೆರಾ ಅಳವಡಿಸಿದ ಮೇಲೆ ಇಲ್ಲಿ ನಡೆಯುವ ಕಳ್ಳತನಕ್ಕೆ ಕಡಿವಾಣ ಬೀಳಬಹುದು ಎಂಬ ಲೆಕ್ಕಾಚಾರ ಪೊಲೀಸ್ ಹಾಗೂ ನಾಗರಿಕರದ್ದಾಗಿತ್ತು. ಆದರೆ ಖತರ್ನಾಕ ಕಳ್ಳ ಮಾತ್ರ ಸಿಸಿಟಿವಿಯ ಕಣ್ಗಾವಲನ್ನು ಲೆಕ್ಕಿಸದೆ ಸಲೀಸಾಗಿ ಬೈಕ್‌ನ ಕದ್ದು ಸಾಗಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next