Advertisement

ರಾಷ್ಟ್ರೀಯ ಗಣರಾಜ್ಯೋತ್ಸವ ಪೆರೆಡ್ ಗೆ ತುಂಗಾ ಮಹಾವಿದ್ಯಾಲಯದ ಅಂಕಿತಾ ಎಸ್ ಆಯ್ಕೆ

08:28 PM Dec 18, 2022 | Team Udayavani |

ತೀರ್ಥಹಳ್ಳಿ : ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮ ರಾಷ್ಟ್ರದ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಅನಾವರಣಗೊಳ್ಳುವ ಶೌರ್ಯ, ಸಾಹಸ,ಶಕ್ತಿ ಹಾಗೂ ಭವ್ಯ ಸಾಂಸ್ಕೃತಿಕ ವೈಭವವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಇನ್ನು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೆಂದರೆ ಅದು ಅತ್ಯಂತ ಹೆಮ್ಮೆಯ ಸಂಗತಿಯೇ ಸೈ. ರಾಷ್ಟ್ರೀಯ ಕ್ರೀಡಾ ಮತ್ತು ಯುವಜನ ಇಲಾಖೆಯು ಎಲ್ಲ ರಾಜ್ಯಗಳ ಅಯ್ದ NCC ಹಾಗೂ NSS ನ ಯುವ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ರಾಷ್ಟ್ರೀಯ ಅಖಂಡತೆ ಮತ್ತು ಏಕತೆಗೆ ಬದ್ದರಾಗುವ ಧ್ಯೇಯವನ್ನು ಬಿತ್ತುತ್ತದೆ.

Advertisement

ಆರ್ ಡಿ. ಪೆರೇಡ್ ಗೆ ಆಯ್ಕೆಯಾಗುವುದು ಅಷ್ಟು ಸುಲಭವಂತೂ ಅಲ್ಲ. ಜಿದ್ದಾ ಜಿದ್ದಿನ ಸ್ಪರ್ಧೆ ಇರುವ ಮೂರು ಹಂತಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಥಹಳ್ಳಿ ತುಂಗಾ ಕಾಲೇಜಿನ ಕು. ಅಂಕಿತಾ ಎಸ್ ಆಯ್ಕೆಯಾಗಿರುತ್ತಾರೆ. ತುಂಗಾ ಕಾಲೇಜಿನ NSS ನ ಕ್ರಿಯಾಶೀಲ ಸಂಯೋಜಕರಾದ ಡಾ.ಪ್ರಶಾಂತ್, ಡಾ.ನರೇಂದ್ರ ಹಾಗೂ ಪ್ರೊ.ಸೃಜನ್ ರವರ ಸಮರ್ಥ ಮಾರ್ಗದರ್ಶನ ಬಹುಮುಖ ಪ್ರತಿಭೆಯ ಅಂಕಿತಾಳಿಗೆ ಈ ಅವಕಾಶ ಒದಗಿಸಿದೆ. ದೆಹಲಿಯ ಆರ್.ಡಿ. ಪೆರೇಡ್ ಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದ ಅಂಕಿತಾಳನ್ನು ತುಂಗಾ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ ಸಮೂಹ ಅಭಿನಂದಿಸಿದೆ.

ಅಂಕಿತಾ ತೀರ್ಥಹಳ್ಳಿ ಕುವೆಂಪು ರಸ್ತೆ ನಿವಾಸಿಗಳಾದ ವೇದಾ ಮಾತಾಜಿ ಹಾಗು ಮೆಕ್ಯಾನಿಕ್ ಉದ್ಯೋಗಿ ಸುರೇಶ್ ರವರ ಮಗಳು. ಅಂಕಿತಾ ಪ್ರಾಥಮಿಕ ಶಿಕ್ಷಣವನ್ನು ಸೇವಾಭಾರತಿಯಲ್ಲೂ, ಪ್ರೌಢಶಿಕ್ಷಣವನ್ನು ಡಾ. ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲೂ, ಪಿಯು ಶಿಕ್ಷಣವನ್ನು ವಾಗ್ದೇವಿ ಸಂಸ್ಥೆಯಲ್ಲೂ ಪಡೆದಿದ್ದು ಪ್ರಸ್ತುತ ತುಂಗಾಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next