Advertisement

ಫೆಡ್‌ ಕಪ್‌ ಟೆನಿಸ್‌ ಹಾಂಕಾಂಗ್‌ಗೆ ಸೋಲುಣಿಸಿದ ಭಾರತ

06:40 AM Feb 10, 2018 | Team Udayavani |

ಹೊಸದಿಲ್ಲಿ: ಅಂಕಿತಾ ರೈನಾ ಮತ್ತು ಕರ್ಮಾನ್‌ ಕೌರ್‌ ಥಂಡಿ ಅವರ ಅಮೋಘ ಆಟದಿಂದಾಗಿ ಭಾರತವು ಫೆಡ್‌ ಕಪ್‌ ಟೆನಿಸ್‌ ಕೂಟದಲ್ಲಿ ಹಾಂಕಾಂಗ್‌ ವಿರುದ್ಧ 3-0 ಅಂತರದ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಭಾರತ ಏಶ್ಯ-ಒಶಿಯಾನಿಯಾ ಬಣ ಒಂದರಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement

ಕರ್ಮಾನ್‌ ಕೌರ್‌ ಹಲವು ಅನಗತ್ಯ ತಪ್ಪುಗಳನ್ನು ಮಾಡಿದರೂ ಅಂತಿಮವಾಗಿ ಹಾಂಕಾಂಗಿನ ಎಡಿಸ್‌ ಚಾಂಗ್‌ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಲು ಯಶಸ್ವಿಯಾದರು. ಕರ್ಮಾನ್‌ ಕಳೆದ ನಾಲ್ಕು ಪಂದ್ಯಗಳಲ್ಲಿ ಸೋತಿದ್ದರು. ಅವರು ಫೆಡ್‌ ಕಪ್‌ ಕೂಟದಲ್ಲಿ ಸರಿಯಾಗಿ ಒಂದು ವರ್ಷದ ಹಿಂದೆ ಗೆಲುವು ಸಾಧಿಸಿದ್ದರು.

ಇನ್ನೊಂದು ಪಂದ್ಯದಲ್ಲಿ ಅಂಕಿತಾ ಅವರು ಲಿಂಗ್‌ ಝಾಂಗ್‌ ಅವರನ್ನು 6-3, 6-2 ಸೆಟ್‌ಗಳಿಂದ ಸೋಲಿಸಿದರು. 2018ರ ಋತುವಿನಿಲ್ಲಿ ಇದು ಭಾರತದ ಮೊದಲ ಗೆಲುವು ಆಗಿದೆ. ಡಬಲ್ಸ್‌ ಪಂದ್ಯದಲ್ಲಿ ಪ್ರಾರ್ಥನಾ ತೊಂಬರೆ ಮತ್ತು ಪ್ರಾಂಜಲಾ ಯಡ್ಲಪಲ್ಲಿ ಅವರು ಕ್ವಾನ್‌ ಯಾವ್‌ ಮತ್ತು ಚಿಂಗ್‌ ಹು ವು ಅವರನ್ನು 6-2, 6-4 ಸೆಟ್‌ಗಳಿಂದ ಕೆಡಹಿದರು.

ಭಾರತ ಈ ಹಿಂದೆ 3-0 ಅಂತರದ ಗೆಲುವು ಸಾಧಿಸಿದ್ದು 2016ರ ಫೆಬ್ರಯರಿಯಲ್ಲಿ. ಅಂದು ಭಾರತ ಥಾçಲಂಡಿನಲ್ಲಿ ಕಜಾಕ್‌ಸ್ಥಾನ ತಂಡವನ್ನು 3-0 ಅಂತರದಿಂದ ಸೋಲಿಸಿತ್ತು. ಭಾರತ ಶನಿವಾರ ನಡೆಯುವ ಹೋರಾಟದಲ್ಲಿ ಚೈನೀಸ್‌ ತೈಪೆ ತಂಡವನ್ನು ಎದುರಿಸಲಿದೆ. ಭಾರತ ಈ ಹಿಂದೆ 2011ರಲ್ಲಿ ಚೈನೀಸ್‌ ತೈಪೆ ವಿರುದ್ಧ ಆಡಿತ್ತು ಮತ್ತು 1-2 ಅಂತರದಿಂದ ಸೋತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next