Advertisement

ಅರ್ಜುನಕ್ಕೆ ಅಂಕಿತಾ, ದಿವಿಜ್‌ ಹೆಸರು ಶಿಫಾರಸು

01:06 AM May 18, 2020 | Sriram |

ಹೊಸದಿಲ್ಲಿ: ಪ್ರಸಕ್ತ ವರ್ಷದ ಅರ್ಜುನ ಪ್ರಶಸ್ತಿಗಾಗಿ ಏಷ್ಯನ್‌ ಗೇಮ್ಸ್‌ ಪದಕ ವಿಜೇತರಾದ ಅಂಕಿತಾ ರೈನಾ ಮತ್ತು ದಿವಿಜ್‌ ಶರಣ್‌ ಹೆಸರನ್ನು ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ ಶಿಫಾರಸು ಮಾಡಿದೆ. ಜತೆಗೆ ಮಾಜಿ ಡೇವಿಸ್‌ ಕಪ್‌ ಕೋಚ್‌ ನಂದನ್‌ ಬಾಲ್‌ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಿದೆ.

Advertisement

27ರ ಹರೆಯದ ಅಂಕಿತಾ ರೈನಾ 2018ರ ಏಶ್ಯನ್‌ ಗೇಮ್ಸ್‌ ವನಿತಾ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿ ಸಿದ್ದರು. ಬಳಿಕ ಫೆಡ್‌ ಕಪ್‌ ಟೆನಿಸ್‌ನಲ್ಲಿ ಅಮೋಘ ಪ್ರದ ರ್ಶನ ನೀಡಿದ್ದರು. ಭಾರತವನ್ನು ಮೊದಲ ಬಾರಿಗೆ ವಿಶ್ವ ಗ್ರೂಪ್‌ ಪ್ಲೇ-ಆಫ್‌ ಸುತ್ತಿಗೆ ಕೊಂಡೊಯ್ಯುವಲ್ಲಿ ಅಂಕಿತಾ ಆಟವೇ ನಿರ್ಣಾಯಕವಾಗಿತ್ತು.

ದಿವಿಜ್‌ ಬಂಗಾರದ ಸಾಧಕ
ದಿಲ್ಲಿಯ 34ರ ಹರೆಯದ ದಿವಿಜ್‌ ಶರಣ್‌ ಜಕಾರ್ತಾ ಏಶ್ಯಾಡ್‌ ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಜತೆಗೂಡಿ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ. 2019ರಲ್ಲಿ ದೇಶದ ಅಗ್ರಮಾನ್ಯ ಡಬಲ್ಸ್‌ ಆಟಗಾರನೆಂಬ ಹಿರಿಮೆಗೂ ದಿವಿಜ್‌ ಪಾತ್ರರಾಗಿದ್ದರು.

ಕಳೆದ ವರ್ಷ ಎರಡು ಎಟಿಪಿ ಡಬಲ್ಸ್‌ ಪ್ರಶಸ್ತಿ ಗೆದ್ದ ಸಾಧನೆಯೂ ದಿವಿಜ್‌ ಶರಣ್‌ ಅವರದಾಗಿದೆ. ಪುಣೆಯಲ್ಲಿ ನಡೆದ ಟಾಟಾ ಓಪನ್‌ನಲ್ಲಿ ರೋಹನ್‌ ಬೋಪಣ್ಣ ಜತೆಯಲ್ಲಿ, ಸೇಂಟ್‌ ಪೀಟರ್ಬರ್ಗ್‌ನಲ್ಲಿ ಐಗರ್‌ ಝೆಲೆನಾಯ್‌ ಜತೆಗೂಡಿ ದಿವಿಜ್‌ ಈ ಸಾಧನೆ ಮಾಡಿದ್ದರು. “ಇವರಿಬ್ಬರೂ ಅರ್ಜುನ ಪ್ರಶಸ್ತಿಗೆ ಖಂಡಿತವಾಗಿಯೂ ಅರ್ಹರು’ ಎಂಬುದಾಗಿ ಅಖೀಲ ಭಾರತ ಟೆನಿಸ್‌ ಅಸೋಸಿಯೇಶನ್‌ನ (ಎಐಟಿಎ) ಕಾರ್ಯದರ್ಶಿ ಹಿರಣೊ¾àಯ್‌ ಚಟರ್ಜಿ ಹೇಳಿದ್ದಾರೆ.

ನಂದನ್‌ಗೆ ಒಲಿದೀತೇ?
60 ವರ್ಷದ ನಂದನ್‌ ಬಾಲ್‌ 1980-83ರ ಅವಧಿಯಲ್ಲಿ ಡೇವಿಸ್‌ ಕಪ್‌ ಪಂದ್ಯಾವಳಿಯಲ್ಲಿ ಆಡಿದ್ದರು. ಬಳಿಕ ಭಾರತದ ಡೇವಿಸ್‌ ಕಪ್‌ ತಂಡದ ಕೋಚ್‌ ಆಗಿ ಸುದೀರ್ಘ‌ ಕಾಲ ಸೇವೆ ಸಲ್ಲಿಸಿದ್ದರು.

Advertisement

ಈವರೆಗೆ ಕೇವಲ ಮೂವರು ಟೆನಿಸ್‌ ಕೋಚ್‌ಗಳಿಗಷ್ಟೇ ಅರ್ಜುನ ಪ್ರಶಸ್ತಿ ಒಲಿದು ಬಂದಿದೆ. 2014ರಲ್ಲಿ ಜೀಶನ್‌ ಅಲಿ, 2015ರಲ್ಲಿ ಎಸ್‌.ಪಿ. ಮಿಶ್ರಾ ಮತ್ತು ಕಳೆದ ವರ್ಷ ನಿತಿನ್‌ ಕೀರ್ತನೆ ಈ ಗೌರವಕ್ಕೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next