Advertisement

ಸರಳವಾಗಿ ಸೆಟ್ಟೇರಿದ ಅಂಜು

12:05 PM Jul 02, 2019 | Team Udayavani |

ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಅಂಜು ಎಂಬ ಬಾಲಕಿ ಮುಂದೆ ತನ್ನ ಪರಿಶ್ರಮದಿಂದ ಸಾಧನೆ ಮಾಡಿ ವಿಶ್ವಸುಂದರಿಯಾಗಿ ಇತಿಹಾಸ ನಿರ್ಮಿಸುವ ಕಥಾನಕ ಹೊಂದಿರುವ “ಅಂಜು’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಿ.ಟಿ.ಎಂ ಲೇಔಟ್‌ನ ಶಿರಡಿ ಸಾಯಿಬಾಬಾ ಆಶ್ರಮದಲ್ಲಿ ನಡೆಯಿತು.

Advertisement

ಎಂ.ಎಸ್‌. ರಾಜಶೇಖರ್‌, ರೇಣುಕಾ ಶರ್ಮ, ದೊರೆ ಭಗವಾನ್‌ ರಂಥ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿದ್ದ ಎ. ವಿಶ್ವನಾಥ್‌ ನಿರ್ದೇಶನದ ಪ್ರಥಮ ಚಿತ್ರ ಇದಾಗಿದೆ. ಭದ್ರಾವತಿ ಮೀನಾ ಕುಮಾರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ನಾಯಕಿ ಅಂಜನಾ ಶೆಟ್ಟಿ ರಂಗಾಯಣದ ಪ್ರತಿಭೆ. ಹಲವಾರು ನಾಟಕ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದು ಮೊದಲ ಬಾರಿಗೆ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ನವನಟ ರಕ್ಷಿತ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next