Advertisement

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

09:18 PM Oct 26, 2021 | Team Udayavani |

ಗಂಗಾವತಿ: ವೇದ ಪುರಾಣ ಸೇರಿ ಭಾರತದ ಮಹಾನ್‌ ಗ್ರಂಥಗಳಲ್ಲಿ ಉಲ್ಲೇಖೀಸಿದಂತೆ ಕಿಷ್ಕಿಂದಾ ಅಂಜನಾದ್ರಿಯೇ ಹನುಮಂತ ಜನಿಸಿದ ಸ್ಥಳ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

Advertisement

ಅವರು ಮಂಗಳವಾರ ಮರಳಿ ಗ್ರಾಮದ ತಪೋವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲು ತುಂಗಭದ್ರಾ ನದಿಗೆ ಪಂಪಾನದಿ ಎಂದು ಕರೆಯಲಾಗುತ್ತಿತ್ತು. ಪಂಪಾನದಿ ತಟದಲ್ಲಿರುವ ಋಷ್ಯಮುಖ ಪರ್ವತದ ಬಳಿ ಶ್ರೀರಾಮ ಲಕ್ಷ್ಮಣರನ್ನು ಹನುಮಂತ ಭೇಟಿಯಾಗಿ ಕಿಷ್ಕಿಂದಾ ಅರಸ ಸುಗ್ರೀವನ ಬಳಿಗೆ ಕರೆದೊಯ್ದು ಭೇಟಿ ಮಾಡಿದ ಜಾಗವಿದೆ. ವಾಲಿಯನ್ನು ಶ್ರೀರಾಮಚಂದ್ರ ಹತ ಮಾಡಿದ್ದು ಆನೆಗೊಂದಿ ಬಳಿಯ ಜಾಗವನ್ನು ವಾಲಿದಿಬ್ಬ ಎಂದು ಕರೆಯಲಾಗುತ್ತಿದೆ ಎಂದರು.

ಇದನ್ನೂ ಓದಿ:ಕೋವಿಡ್ ಲಸಿಕೆ ಪಡೆದವರಿಗಷ್ಟೇ ಹಾಸನಾಂಬೆ ದರ್ಶನ ಭಾಗ್ಯ

ವಾನರರು ಮಹಾ ಶಿಲ್ಪಿಗಳಾಗಿದ್ದರು. ಇದನ್ನು ಮನಗಂಡ ಶ್ರೀರಾಮಚಂದ್ರ ಕಿಷ್ಕಿಂದಾ ಪ್ರದೇಶಕ್ಕೆ ಆಗಮಿಸಿ ವಾನರರ ಸಹಾಯದಿಂದ ಸಮುದ್ರದಲ್ಲಿ ಶ್ರೀಲಂಕಾ ದೇಶದವರೆಗೆ ಸೇತುವೆ ನಿರ್ಮಿಸಿ ರಾವಣನನ್ನು ವಧೆ ಮಾಡಿ ಸೀತಾಮಾತೆಯನ್ನು ಕರೆ ತಂದಿದ್ದರು. ಹೀಗಾಗಿ ಹನುಮ ಜನ್ಮಸ್ಥಳ ಕುರಿತ ಟಿಟಿಡಿಯವರ ಹೇಳಿಕೆಗೆ ಬದಲಾಗಿ ಕರ್ನಾಟಕ ಸರಕಾರ ಪೂರಕ ದಾಖಲೆ ಬಿಡುಗಡೆ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next