Advertisement

ಅಂಜನಾಪುರ ಮೆಟ್ರೋ ಮಾರ್ಗ ತುಸು ವಿಳಂಬ

12:21 PM Oct 30, 2020 | Suhan S |

ಬೆಂಗಳೂರು: ಯಲಚೇನಹಳ್ಳಿ- ಅಂಜನಾಪುರ ವಿಸ್ತರಿಸಿದ ಮಾರ್ಗದಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ವಾಣಿಜ್ಯ ಸಂಚಾರ ಆರಂಭವಾಗುವುದು ಸದ್ಯಕ್ಕಂತೂ ಅಸಾಧ್ಯ ವಾಗಿದ್ದು, ನವೆಂಬರ್‌ ಅಂತ್ಯ  ದೊಳಗೆ ಸೇವೆಗೆ ಮುಕ್ತಗೊಳಿಸಲು ಸಿದ್ಧತೆ ನಡೆದಿದೆ.

Advertisement

ಈ ಮೊದಲು ನ. 1ಕ್ಕೆ ವಾಣಿಜ್ಯ ಸಂಚಾರ ಆರಂಭಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವದ ಕೊಡುಗೆ ನೀಡುವ ಗುರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೊಂದಿತ್ತು. ಆದರೆ, ಇನ್ನೂ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆಗೂ ಬಂದಿಲ್ಲ. ಈ ಮಧ್ಯೆ 50ಕ್ಕೂ ಹೆಚ್ಚು ಅಂಶಗಳ ಪಟ್ಟಿ ಮಾಡಿ, ಅವೆಲ್ಲವುಗಳ ವ್ಯವಸ್ಥೆ ಸಮರ್ಪಕವಾಗಿ ವೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಆಯುಕ್ತರು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಮೂರನೇ ವಾರದಲ್ಲೇ ಬಿಎಂಆರ್‌ ಸಿಎಲ್‌, ರೈಲ್ವೆ ಸುರಕ್ಷತಾ ಆಯುಕ್ತರಿಗೆ ಆಹ್ವಾನ ನೀಡಿತ್ತು. ಅದಕ್ಕೆ ಪ್ರತಿಯಾಗಿ ಆಯುಕ್ತರು ಕೆಲವು ಅಂಶಗಳನ್ನು ಪಟ್ಟಿ ಮಾಡಿ, ತಮಗೆ ಸಲ್ಲಿಸಿದೆ. ಅವುಗಳಿಗೆ ಮೂರ್‍ನಾಲ್ಕು ದಿನಗಳಲ್ಲಿ ಲಿಖೀತವಾಗಿ ಪ್ರತಿಕ್ರಿಯಿಸ ಲಾಗುವುದು. ನಂತರ ಆಯುಕ್ತ ರನ್ನು ಒಳಗೊಂಡ ತಂಡ ಭೇಟಿ ನೀಡಲಿದ್ದು, ಆಮೇಲೆ ಎಲ್ಲವೂ ಸರಿಯಾಗಿದ್ದರೆ ಗ್ರೀನ್‌ ಸಿಗ್ನಲ್‌ ಸಿಗಲಿದೆ. ಈ ಎಲ್ಲ ಪ್ರಕ್ರಿ ಯೆ ಗಳು ನವೆಂಬರ್‌ ಎರಡು ಅಥವಾ ಮೂರನೇ ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ನಿಗಮದ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದರು.

ಗಡುವು ಸಾಧನೆ ಅಸಾಧ್ಯ: “ನ. 1ರ ಒಳಗೆ ಎಲ್ಲ ಕಾರ್ಯ ಮುಗಿಯಬೇಕು ಎಂದು ಗಡುವು ನೀಡಲಾಗಿತ್ತು. ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಆದರೂ, ತಿಂಗಳಲ್ಲಿ ಅಂಜನಾಪುರದವರೆಗೆ  ವಾಣಿಜ್ಯ ಸೇವೆ ಪ್ರಾರಂಭಿಸಲು ಸಾಧ್ಯವಾಗದು. ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ’ ಎಂದು ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ನಿಗದಿತ ಅವಧಿಯಲ್ಲಿ ಯಲಚೇನಹಳ್ಳಿಯಿಂದ ಮೊದಲ ಮೂರು ನಿಲ್ದಾಣದವರೆಗೆ ಮಾತ್ರ ಸೇವೆ ನೀಡಬಹುದಾಗಿದೆ. ಅಂಜನಾಪುರದವರೆಗೆ ಸೇವೆ ಪ್ರಾರಂಭವಾಗಲು ಇನ್ನಷ್ಟು ದಿನ ಕಾಯಬೇಕಾಗುತ್ತದೆ. ಆದರೆ, ಹೀಗೆ ಅರ್ಧ ಮಾರ್ಗವನ್ನು ಮುಕ್ತಗೊಳಿಸಿ, ಉಳಿದರ್ಧ ಬಾಕಿ ಇಡಲು ಬರುವುದಿಲ್ಲ ಎಂದೂ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಕೆಲವೆಡೆ ಪ್ರಗತಿ ಮಂದಗತಿ :  ಯಲಚೇನಹಳ್ಳಿ- ಅಂಜನಾಪುರ ಮಾರ್ಗದ ಕೋಣನಕುಂಟೆ ಕ್ರಾಸ್‌, ದೊಡ್ಡಕಲ್ಲಸಂದ್ರ ಹಾಗೂ ವಜ್ರಹಳ್ಳಿನಿಲ್ದಾಣಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ನಿಲ್ದಾಣದೊಳಗೆ ಪ್ಲಾಟ್‌ಫಾರಂ, ಟಿಕೆಟ್‌ ಕೌಂಟರ್‌, ಗ್ರಾಹಕ ಸೇವಾ ಕೇಂದ್ರಗಳ ನಿರ್ಮಾಣ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ. ಆದರೆ, ತಲಘಟ್ಟಪುರ, ಅಂಜನಾಪುರ ನಿಲ್ದಾಣದೊಳಗೆ ಟಿಕೆಟ್‌ ಕೌಂಟರ್‌, ಗ್ರಾಹಕ ಸೇವಾ ಕೇಂದ್ರಗಳ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next