Advertisement

ಅಂಜನಾದ್ರಿಯಲ್ಲಿ ಅರ್ಚಕ ವಿದ್ಯಾದಾಸ ಬಾಬಾರಿಂದ ನಿರಾತಂಕವಾಗಿ ಪೂಜೆ ಆರಂಭ

12:11 PM Oct 14, 2020 | sudhir |

ಗಂಗಾವತಿ: ಇತಿಹಾಸ ಪ್ರಸಿದ್ದ ಪ್ರವಾಸಿತಾಣ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ಹೈಕೋರ್ಟ್ ಸೂಚನೆಯಂತೆ ಜಿಲ್ಲಾಡಳಿತ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಅವರಿಗೆ ಪೂಜೆ ಧಾರ್ಮಿಕ ಕಾರ್ಯ ಮಾಡಲು ಅವಕಾಶ ಕಲ್ಪಿಸಿದ್ದು ಬುಧವಾರ ಬೆಳಗಿನ ಜಾವ ಯಾವುದೇ ಆತಂಕವಿಲ್ಲದೇ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು. ಮಂಗಳವಾರ ಸಂಜೆ ನಾಲ್ವರು ಶಿಷ್ಯರ ಜತೆ ಅಂಜನಾದ್ರಿ ಹತ್ತಿದ ಬಾಬಾ ಇವರಿಗೆ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಮೊದಲು ವಾಸವಾಗಿದ್ದ ಕೋಣೆಯಲ್ಲಿ ಬಾಬಾ ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು.

Advertisement

ದೇಗುಲದ ಮಾಲೀಕತ್ವ ಮತ್ತು ಪೂಜೆ ವಿಷಯವಾಗಿ ಆನೆಗೊಂದಿ ರಾಜವಂಶಸ್ಥರ ನೇತೃತ್ವದ ಟ್ರಸ್ಟ್ ಹಾಗೂ ವಿದ್ಯಾದಾಸ ಬಾಬಾ ಇವರ ನಡುವೆ ವಿವಾದವುಂಟಾಗಿ ಅರ್ಚಕ ಸ್ಥಾನದಿಂದ ವಿದ್ಯಾದಾಸ ಬಾಬಾ ಅವರನ್ನು ಟ್ರಸ್ಟ್ ನವರು ಪದಚ್ಯುತಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಗಂಗಾವತಿ ಜೆಎಂಎಫ್ ಸಿ ನ್ಯಾಯಾಲದಿಂದ ಬಾಬಾ ತಡೆಯಾಜ್ಞೆ ತಂದು ಅರ್ಚಕ ಹಾಗೂ ದೇಗುಲದ ಎಲ್ಲ ಕಾರ್ಯಗಳನ್ನು ಬಾಬಾ ಮುಂದುವರಿಸಿದರು. ಈ ಮಧ್ಯೆ ಬಾಬಾ ಬೆಂಬಲಿಗರು ಮತ್ತು ಆನೆಗೊಂದಿ ರಾಜಮನೆತನದವರ ಟ್ರಸ್ಟ್ ಪದಾಧಿಕಾರಿಗಳ ಮಧ್ಯೆ ಸಂಷರ್ಘವುಂಟಾಯಿತು.

ಇದನ್ನೂ ಓದಿ:ವಿಡಿಯೋ ವೈರಲ್: ಆನೆ ಮೇಲೆ ಯೋಗ: ದಿಢೀರ್ ಕೆಳಗೆ ಬಿದ್ದ ಬಾಬಾರಾಮ್ ದೇವ್

ಅಂಜನಾದ್ರಿ ದೇಗುಲದ ಬಳಿ ನಡೆದಿದೆ ಎನ್ನಲಾಗುವ ಲೈಂಗಿಕ ಪ್ರಕರಣಕ್ಕಾಗಿ ಬಾಬಾ ಅವರನ್ನು ಟ್ರಸ್ಟ್ ನವರ ಒತ್ತಾಯ ಮೇರೆ ಬೆಟ್ಟದಿಂದ ಪೊಲೀಸರ ನೇತೃತ್ವದಲ್ಲಿ ಕೆಳಗೆ ಇಳಿಸಿ ಕಳುಹಿಸಲಾಯಿತು. ಈ ಮಧ್ಯೆ ಪೊಲೀಸ್ ಮತ್ತು ಕಂದಾಯ ಇಲಾಖೆ ಶಿಫಾರಸ್ಸಿನಂತೆ ಜಿಲ್ಲಾಡಳಿತ ದೇಗುಲವನ್ನು ಕಳೆದ ಎರಡು ವರ್ಷಗಳ ಸರಕಾರದ ವಶಕ್ಕೆ ಪಡೆದಿತ್ತು. ಅರ್ಚಕ ವಿದ್ಯಾದಾಸ ಹೈಕೋರ್ಟ್ ಮೊರೆ ಹೋಗಿ ಪೂಜೆ ಮಾಡಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪೂಜೆ ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಇದೀಗ ಬಾಬಾ ಗೆ ಪೂಜೆ ಮಾಡಲು ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next