Advertisement

Anjali case; ಕಾನೂನಿಗೆ ಬೆಲೆಯಿದೆ ಎಂದು ಸರ್ಕಾರ ತೋರಿಸಲಿ: ಮೂರುಸಾವಿರ ಮಠದ ಜಗದ್ಗುರು

01:27 PM May 16, 2024 | Team Udayavani |

ಹುಬ್ಬಳ್ಳಿ: ಅಮಾನುಷ, ನಿರ್ಭಯವಾಗಿ ಕೊಲೆ ಮಾಡಿದ್ದಾನೆ ಎಂದರೆ ನೆಲದ ಕಾನೂನು ಬಗ್ಗೆ ಅಪರಾಧಿಗಳಿಗೆ ಭಯವಿಲ್ಲವಾಗಿದೆ. ಜನ ಸಾಮಾನ್ಯರಲ್ಲಿ ಭಯದ ವಾತಾವರಣದ ನಿರ್ಮಾಣವಾಗಿದೆ. ನೆಲದ ಕಾನೂನಿಗೆ ಗೌರವ ದೊರೆಯಬೇಕಾದರೆ ಸರ್ಕಾರ ಆರೋಪಿ ವಿರುದ್ಧ ನಿದ್ರಾಕ್ಷಿಣ್ಯವಾಗಿ ಸೂಕ್ತ ಕ್ರಮ ಕೈಗೊಂಡು ಬದ್ಧತೆ ತೋರಬೇಕು ಎಂದು ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಹೇಳಿದರು.

Advertisement

ಹತ್ಯೆಯಾದ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಇಂತಹ ಕೃತ್ಯಗಳಿಂದ ಜನರಿಗೆ ಸುರಕ್ಷತೆ ಇಲ್ಲವೆಂಬ ಭಾವ ಮೂಡಿದೆ. ಈ ಪರಿಸ್ಥಿತಿಯಲ್ಲಿ ಇಡೀ ಸಮಾಜ ಹತ್ಯೆಗೊಳಗಾದವರ ಕುಟುಂಬದ ಪರವಾಗಿ ನಿಂತು ನ್ಯಾಯ ದೊರಕಿಸಲು ಹೋರಾಡುತ್ತಿರುವುದು ನೋಡಿದರೆ ಇನ್ನೂ ಸಮಾಜದಲ್ಲಿ ದಯೆ ಇರುವುದನ್ನು ತೋರಿಸುತ್ತದೆ ಎಂದರು.

ನೇಹಾ ಮತ್ತು ಅಂಜಲಿಯಂತಹ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಂಜಲಿ ಹಂತಕನಿಗೆ ನೇಹಾ ಕೊಲೆ ಪ್ರೇರಣೆ ಆಗಿರಬಹುದು. ಈ ನೆಲದಲ್ಲಿ ಕಾನೂನಿಗೆ ಬೆಲೆ ಇದೆ ಎಂಬುವುದನ್ನು ಸರ್ಕಾರ ಆದಷ್ಟು ಬೇಗ ತೋರಿಸಬೇಕು‌ ಎಂದರು‌.

ಮೃತ ಅಂಜಲಿ ಸಹೋದರಿಯರು ಶಿಕ್ಷಣ ಪಡೆಯಲು ಇಚ್ಛಿಸಿದರೆ ಮೂರು ಸಾವಿರ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next