Advertisement

ಸಿಡ್ಕೊದಿಂದ ಹೊಸ ಪ್ರವಾಸಿ ಕೇಂದ್ರ ಯೋಜನೆ

09:21 AM Jul 02, 2021 | Team Udayavani |

ನವಿಮುಂಬಯಿ: ಪ್ರವಾ ಸೋದ್ಯಮಕ್ಕಾಗಿ ಸಿಡ್ಕೊದ ಉಲ್ವೆ ನೋಡ್‌ ಬಳಿ ದ್ವೀಪವನ್ನು ಅಭಿವೃದ್ಧಿ ಪಡಿಸಲು ಸಿಡ್ಕೊ ಹೂಡಿಕೆದಾರರಿಂದ ಪ್ರಸ್ತಾವಗಳನ್ನು ಆಹ್ವಾನಿಸಿದೆ. ಥಾಣೆ ಕೊಲ್ಲಿಯ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಈ ದ್ವೀಪವು ಮೂರು ಕಡೆ ಅರೇಬಿಯನ್‌ ಸಮುದ್ರದ ನೀರಿನಿಂದ ಆವೃತವಾಗಿದೆ ಮತ್ತು ಐತಿಹಾಸಿಕ ಎಲಿಫೆಂಟಾ ಗುಹೆಗಳ ಮುಂಭಾಗದ ನೋಟವನ್ನು ಹೊಂದಿದೆ.

Advertisement

ನವಿಮುಂಬಯಿ ಮಹಾನಗರ ಪಾಲಿಕೆಯು ದ್ವೀಪದ 30 ಹೆಕ್ಟೇರ್‌ ಭೂಮಿಯಲ್ಲಿ ಪ್ರಾದೇಶಿಕ ಉದ್ಯಾನ ಯೋಜನೆಯನ್ನು ಅಭಿವೃದ್ಧಿ ಯೋಜ ನೆಯಲ್ಲಿ ಕಾಯ್ದಿರಿಸಿದೆ. ಈ ದ್ವೀಪದ ಅಭಿವೃದ್ಧಿಯೊಂದಿಗೆ ನವಿಮುಂಬಯಿಗೆ ನೈಸರ್ಗಿಕ ಪ್ರವಾಸಿ ತಾಣ ಸಿಗಲಿದೆ. ಈ 60 ಹೆಕ್ಟೇರ್‌ ದ್ವೀಪವು ಉದ್ದೇಶಿತ ನವಾಹೇಶೇವ ಶಿವಿx ಸಮುದ್ರ ಸೇತುವೆಗೆ ಹತ್ತಿರದಲ್ಲಿದೆ. ಆದ್ದರಿಂದ ಸಿಡ್ಕೊ ದ್ವೀಪವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು, ಟೆಂಡರ್‌ ಆಹ್ವಾನಿಸಿದೆ.

ಜೂ. 27ರಿಂದ ಸಿಡ್ಕೊ ತನ್ನ ವೆಬ್‌ಸೈಟ್‌ನಲ್ಲಿ ಹೂಡಿಕೆದಾರರು ಮತ್ತು ಖರೀದಿದಾರರಿಗೆ ದ್ವೀಪದಲ್ಲಿ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ಮಿಸಲು ಬಯಸುವ ಎಲ್ಲ ಮಾಹಿತಿಗಳನ್ನು  ಒದಗಿಸಿದೆ. ಯೋಜನೆಗೆ ಬಿಡ್ಡಿಂಗ್‌ ಮಾಡಲು ಜು. 29ರ ಗಡುವು ನೀಡಲಾಗಿದೆ. ಟೆಂಡರ್‌ ಪೂರ್ವ ಅರ್ಹತೆಗಾಗಿ ಈ ಆಸಕ್ತಿಯ ಪ್ರಸ್ತಾವನೆ ಮೂಲಕ ಪಡೆದ ಸಲಹೆಗಳನ್ನು ನೀಡಲಾಗುವುದಿಲ್ಲ ಎಂದು ಸಿಡ್ಕೊ ಸ್ಪಷ್ಟಪಡಿಸಿದೆ. ಈ ಪ್ರಸ್ತಾವದ ಮೂಲಕ ಪಡೆದ ಸಲಹೆಗಳು ಮತ್ತು ಪ್ರತಿಕ್ರಿಯೆಗಳನ್ನು ಸೇರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಸಿಡ್ಕೊ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next