ಮುಂಬಯಿ: ಅಭ್ಯುದಯ ಸಹಕಾರಿ ಬ್ಯಾಂಕ್ ಆರ್ಥಿಕ ಸೇವೆಯೊಂದಿಗೆ ಸಾಮಾಜಿಕ ಸೇವೆಯಲ್ಲೂ ಎಲ್ಲರ ಮನಸ್ಸನ್ನು ಗೆದ್ದಿದೆ. ಅದು ನೈಸರ್ಗಿಕ ವಿಪತ್ತು ಇರಲಿ ಅಥವಾ ಕೋವಿಡ್ ವೈರಸ್ ವಿರುದ್ಧದ ಹೋರಾಟದಲ್ಲಿ ಕೊಡುಗೆಯಾಗಿರಬಹುದು, ಎಲ್ಲದರಲ್ಲೂ ಒಂದು ಹೆಜ್ಜೆ ಮುಂದಿದೆ. ಸಹಕಾರದ ಮೂಲಕ ಸಮೃದ್ಧಿಯ ಚೈತನ್ಯ ಎಂಬ ಧ್ಯೇಯ ವಾಕ್ಯವನ್ನು ಮುಂದುವರೆಸುತ್ತಾ ಅಭ್ಯುದಯ ಬ್ಯಾಂಕ್ ಸೇವೆ ಸಲ್ಲಿಸುತ್ತಿದೆ. ಇದೀಗ ಫ್ರಂಟ್ ಲೈನ್ ಕೊರೊನಾ ಯೋಧರಾದ ಪೊಲೀಸರಿಗೆ ಸತತ ಮೂರು ವರ್ಷಗಳಿಂದ 1,000 ರೇನ್‌ಕೋಟ್‌ಗಳನ್ನು ವಿತರಿಸಿದೆ. ಪೊಲೀಸರು ಪಟ್ಟುಬಿಡದೆ ಚಳಿ ಮಳೆ ಲೆಕ್ಕಿಸದೆ ಸೇವೆ ಸಲ್ಲಿಸುವ ವಿಶಾಲ ಮನೋಭಾವವನ್ನು ಹೊಂದಿದ್ದಾರೆ ಎಂದು ಅಭ್ಯುದಯ ಬ್ಯಾಂಕಿನ ಕಾರ್ಯಾಧ್ಯಕ್ಷ ಸಂದೀಪ್ ಎಸ್. ಘಂಡತ್ ಅವರು ಹೇಳಿದರು.
ಅಭ್ಯುದಯ ಬ್ಯಾಂಕ್ ವತಿಯಿಂದ ಮುಂಬಯಿ ಪೊಲೀಸರಿಗೆ ರೇನ್‌ಕೋಟ್ ವಿತರಿಸಿ ಪೊಲೀಸ್ ಸಿಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಭಿನಂದನಾ ಪ್ರಮಾಣ ಪತ್ರವನ್ನು ಅಭ್ಯುದಯ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪ್ರೇಮನಾಥ ಸಾಲ್ಯಾನ್ ಅವರು ಸಶಸ್ತ್ರ ಪೊಲೀಸ್ ಪಡೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಐಪಿಎಸ್ ವೀರೇಂದ್ರ ಮಿಶ್ರಾ ಅವರಿಗೆ ಹಸ್ತಾಂತರಿಸಿ ಶುಭಹಾರೈಸಿದರು.
ಪೊಲೀಸ್ ಪ್ರಧಾನ ಕಚೇರಿ ದಾದರ್‌ನಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪ್ರೇಮನಾಥ ಸಾಲ್ಯಾನ್ ಅವರು ಪೊಲೀಸರ ಅವಿರತ ಸೇವೆಯ ಬಗ್ಗೆ ಮಾತನಾಡಿ, ಕೊರೊನಾ ಕಠಿನ ಸಂದರ್ಭ ಇಡೀ ರಾಷ್ಟ್ರಕ್ಕೆ ಸವಾಲಿನ ಸಮಯ, ಭಾರೀ ಮಳೆಯಿಂದ ರಕ್ಷಣೆ ನೀಡುವುದು ಪೊಲೀಸ್ ಸಿಬಂದಿಗೆ ಹೆಚ್ಚು ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಮುಂಬಯಿ ಪೊಲೀಸರು ತಮ್ಮ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿ¨ªಾರೆ. ಮುಂಬಯಿ ಪೊಲೀಸರ ಉತ್ಸಾಹಕ್ಕೆ ನಮಸ್ಕರಿಸುತ್ತೇನೆ ಎಂದರು.
ವೀರೇಂದ್ರ ಮಿಶ್ರಾ ಐಪಿಎಸ್ ಅವರು ಅಭ್ಯುದಯ ಬ್ಯಾಂಕಿನ ಸಮಾಜಪರ ಕಾರ್ಯಗಳನ್ನು ಶ್ಲಾಘಿಸಿದರು. ಆರ್ಥಿಕ ರಂಗದಲ್ಲಿ ಬ್ಯಾಂಕ್ ನೀಡಿದ ಕೊಡುಗೆ ಮಾದರಿಯಾಗಿದೆ. ಗ್ರಾಹಕರ ಮೆಚ್ಚಿನ ಬ್ಯಾಂಕ್ ಆಗಿರುವ ಅಭ್ಯುದಯ ಬ್ಯಾಂಕ್ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದರು.
ಮಹಾರಾಷ್ಟ್ರ, ಗುಜರಾತ್‌ನಲ್ಲಿ 111 ಶಾಖೆಗಳನ್ನು ಹೊಂದಿರುವ ಅಭ್ಯುದಯ ಬ್ಯಾಂಕ್ ಇತ್ತೀಚೆಗೆ ತನ್ನ 57ನೇ ಪ್ರತಿಷ್ಠಾನ ದಿನವನ್ನು ಆಚರಿಸಿತು. ಆಕರ್ಷಕ ಬಡ್ಡಿಯೊಂ ದಿಗೆ ಠೇವಣಿಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಪರಿಷ್ಕರಿಸಿದೆ. ಶೀಘ್ರದÇÉೇ ಬ್ಯಾಂಕ್ ತನ್ನ ಗ್ರಾಹಕರಿಗೆ ಭಾರತ್ ಬಿಲ್ ಪಾವತಿ ಸೇವೆಗಳನ್ನು ನೀಡಲಿದೆ.