Advertisement

ಅಪಾಯದ ಸ್ಥಿತಿಯಲ್ಲಿ ಮುಂಬಯಿ ಪರಿಸರದ ಸರೋವರಗಳು

11:34 AM Jul 04, 2021 | Team Udayavani |

ಮುಂಬಯಿ: ನಗರದಲ್ಲಿಯ ವಸತಿ ಪ್ರದೇಶಗಳ ಕೊಳಚೆನೀರು, ತ್ಯಾಜ್ಯ, ಕಾಂಕ್ರೀ ಟಿಕರಣ ಇತ್ಯಾದಿಗಳಿಂದಾಗಿ ಮುಂಬಯಿ ಸುತ್ತ ಮುತ್ತಲಿನ ಪ್ರದೇಶಗಳ ಸರೋವರಗಳ ಸ್ಥಿತಿ ಪ್ರಸ್ತುತ ಹದಗೆಡುತ್ತಿರುವುದಲ್ಲದೆ, ಇದರೊಂದಿಗೆ ಜಲ ಸಂಪನ್ಮೂಲಗಳು ಅಪಾಯದಲ್ಲಿದೆ.

Advertisement

ಮುಂಬಯಿ ಪೊವಾಯಿ ಸರೋವರಕ್ಕೆ ನಗರದಲ್ಲಿಯ 17 ಒಳಚರಂಡಿಯಿಂದ ಕೊಳಚೆನೀರನ್ನು ಬಿಡಲಾಗುತ್ತಿದ್ದು, ಇದರಿಂದ ಗಣೇಶಘಾಟ್‌ ಮತ್ತು ಉತ್ತರ ಭಾಗದ ಸಮೀಪವಿರುವ ಪ್ರದೇಶಗಳಲ್ಲಿ ನೀರು ಹೆಚ್ಚು ಕಲುಷಿತಗೊಂಡಿದೆ. ಇದಲ್ಲದೆ ಸರೋವರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದರಿಂದ ಸರೋವರದ ಕೆಳಭಾಗಗಳಲ್ಲಿ ಪ್ಲ್ಯಾಸ್ಟರ್‌ ಆಫ್‌ ಪ್ಯಾರಿಸ್‌ ಸಂಗ್ರವಾಗಿರುವುದರಿಂದ ಇದರ ಆಳವು ಕಡಿಮೆಯಾಗಿದ್ದು, ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಗೊಂಡಿದೆ.

ಕಲುಷಿತ ನೀರು

ಸೂರ್ಯನ ಬೆಳಕು ನೀರನ ಎಷ್ಟು ಆಳಕ್ಕೆ ತಲುಪುತ್ತದೆ ಎಂಬುದರ ಮೂಲಕ ನೀರಿನ ಪಾರದರ್ಶಕತೆಯನ್ನು ಅಳೆಯಲಾಗುತ್ತದೆ. 1989ರಲ್ಲಿ ಪೊವಾಯಿ ಸರೋವರದ ಪಾರದರ್ಶಕತೆ 120 ಸೆಂ.ಮೀ.ಗಳಷ್ಟಿತ್ತು. ಅದೇ 2002ರಲ್ಲಿ ಇದು 100 ಸೆ. ಮೀ.ಗೆ ಇಳಿದಿತ್ತು. ಈಗ ಇದು ಕೇವಲ 19ರಿಂದ 20 ಸೆ. ಮೀ. ಪಾರದರ್ಶಕತೆ ಉಳಿದಿದೆ ಎಂದು ಸರೋವರವನ್ನು ಅಧ್ಯಯನ ಮಾಡುತ್ತಿರುವ ತಜ್ಞ ಡಾ| ಪ್ರಮೋದ್‌ ಸಲಸ್ಕರ್‌ ತಿಳಿಸಿದ್ದಾರೆ.

ಈ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಂದಾಗಿ ಜಮೀನುಗಳನ್ನು ಕಾಂಕ್ರಿಟ್‌ ಮಾಡಲಾಗಿದೆ. ಇದರಿಂದಾಗಿ ನೆಲದ ಮೇಲೆ ಬೀಳುವ ಮಳೆ ನೀರು ಸರೋವರಕ್ಕೆ ಸೇರುವುದಿಲ್ಲ ಎಂದು ಅವರು ಹೇಳಿದ್ದಾರೆ.

Advertisement

ಪಾಲ^ರ್‌ ತೆಂಬೋಡದಲ್ಲಿರುವ ಗಣೇಶಕುಂಡ್‌ ಸರೋವರವು ವರ್ಷಪೂರ್ತಿ ನೀರನ್ನು ಹೊಂದಿತ್ತು. ಆದರೆ ಸುತ್ತಮುತ್ತಲಿನ ನಿರ್ಮಾಣಗಳ ಮಣ್ಣು ಮತ್ತು ಗಣೇಶ ಮೂರ್ತಿಗಳ ವಿಸರ್ಜನೆಗಳಿಂದಾಗಿ ಸರೋವರದ ಆಳದಲ್ಲಿ ತ್ಯಾಜ್ಯಗಳು ಸಂಗ್ರಹವಾಗಿದೆ. ಇದರ ಪರಿಣಾಮ, ನೀರು ಮಣ್ಣಿನಲ್ಲಿ ಹರಿಯುವುದಿಲ್ಲ ಮತ್ತು ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಅನೇಕ ಸ್ಥಳಗಳಲ್ಲಿ ಗೋಡೆಗಳನ್ನು ಸಿಮೆಂಟಿನಿಂದ ಮುಚ್ಚಲಾಗಿದ್ದರಿಂದ ಸರೋವರಗಳು ಟ್ಯಾಂಕ್‌ಗಳ ರೂಪವನ್ನು ಪಡೆದಿವೆ.

ಲೋಖಂಡ್ವಾಲಾ ಸರೋವರದ  ಬಗ್ಗೆ ಕಳವಳ

ಲೋಖಂಡ್ವಾಲಾ-ಒಶಿವಾರಾ ನಿವಾಸಿಗಳ ಸಂಘದ ಧವಲ್‌ ಶಾ ಅವರು ಅಂಧೇರಿಯ ಲೋಖಂಡ್ವಾಲಾ ಸರೋವರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾರಾಟವಾಗದ ವಿಗ್ರಹಗಳನ್ನು ಗಣೇಶೋತ್ಸವದ ಬಳಿಕ ಈ ಸರೋವರದಲ್ಲಿ ಮುಳುಗಿಸಲಾಗುತ್ತಿದೆ. ಆದ್ದರಿಂದ ಕೆರೆಯ ಸ್ವತ್ಛತೆ ಮತ್ತು ಜಲಚರ ಜೀವಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next