Advertisement

“ಸಿಬಿಐ ವಿಚಾರಣೆ ಕಾನೂನು ಬಾಹಿರ’

01:17 PM Jul 03, 2021 | Team Udayavani |

ಮುಂಬಯಿ,: ಭ್ರಷ್ಟಾಚಾರದ ಆರೋಪದ ಬಗ್ಗೆ ಸಿಬಿಐ ತನ್ನ ವಿರುದ್ಧ ನಡೆಸುತ್ತಿರುವ ವಿಚಾರಣೆ ಕಾನೂನುಬಾಹಿರ ಮತ್ತು ಕಾನೂನು ಪ್ರಕ್ರಿಯೆಗಳ ಉಲ್ಲಂಘನೆಯಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶು¾ಖ್‌ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

Advertisement

ಎಪ್ರಿಲ್‌ನಲ್ಲಿ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆಯನ್ನು ಪ್ರಾರಂಭಿಸಲಾಗಿದ್ದರೂ ಅನಿಲ್‌ ದೇಶು¾ಖ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸಂಸ್ಥೆ ಮಹಾರಾಷ್ಟ್ರ ಸರಕಾರದಿಂದ ಪೂರ್ವ ಅನುಮತಿ ಪಡೆಯಲಿಲ್ಲ. ಆದುದರಿಂದ ದೇಶು¾ಖ್‌ ವಿರುದ್ಧ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಆರೋಪದ ಮೇಲೆ ವಿಚಾರಣೆ ಕಾನೂನುಬಾಹಿರವಾಗಿದೆ ಎಂದು  ದೇಶು¾ಖ್‌ ಅವರ ವಕೀಲ ಹಿರಿಯ ವಕೀಲ ಅಮಿತ್‌ ದೇಸಾಯಿ ಹೈಕೋರ್ಟ್‌ಗೆ ತಿಳಿಸಿದರು.

ಮುಂಬಯಿ ಮಾಜಿ ಪೊಲೀಸ್‌ ಆಯುಕ್ತ ಪರಂಬೀರ್‌ ಸಿಂಗ್‌ ವಿರುದ್ಧ ಭ್ರಷ್ಟಾಚಾರದ ಆರೋಪದ ಬಳಿಕ ಸಿಬಿಐ ತನ್ನ ವಿರುದ್ಧ ದಾಖಲಿಸಿದ ಎಫ್‌ಐಆರ್‌ ಅನ್ನು ಪ್ರಶ್ನಿಸಿ ದೇಶು¾ಖ್‌ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್‌. ಎಸ್‌. ಶಿಂಧೆ ಮತ್ತು ಎನ್‌. ಎಂ. ಜಮದಾರ್‌ ಅವರ ನ್ಯಾಯಪೀಠದ ಮುಂದೆ ದೇಸಾಯಿ ವಾದಿಸಿದರು.

ಈ ವರ್ಷದ ಎಪ್ರಿಲ್‌ನಲ್ಲಿ ಹೈಕೋರ್ಟ್‌ ಮುಖ್ಯ ನ್ಯಾ| ದೀಪಂಕರ್‌ ದತ್ತ ನೇತೃತ್ವದ ನ್ಯಾಯಪೀಠದ ಆದೇಶದ ಬಳೀಕ ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ದೇಶು¾ಖ್‌ ವಿರುದ್ಧ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು. ಪ್ರಾಥಮಿಕ ವಿಚಾರಣೆಯು ಹೈಕೋರ್ಟ್‌ ಆದೇಶಕ್ಕೆ ಅನುಗುಣವಾಗಿದ್ದರೂ ಸಿಬಿಐ ದೇಶು¾ಖ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಲ್ಲಿ ಕಾನೂನಿನ ಪ್ರಕ್ರಿಯೆಯನ್ನು ಉಲ್ಲಂಘಿಸಿದೆ ಎಂದು ವಕೀಲ ದೇಸಾಯಿ ಹೈಕೋರ್ಟ್‌ಗೆ ತಿಳಿಸಿದರು. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 17 ಎ ಯಲ್ಲಿ ಸಾರ್ವಜನಿಕ ಸೇವಕನ ವಿರುದ್ಧ ಕಾನೂನು ಕ್ರಮ ಜರಗಿಸಲು ಪೊಲೀಸರು ಅಥವಾ ಇನ್ನಾವುದೇ ತನಿಖಾ ಸಂಸ್ಥೆ ಪೂರ್ವ ಅನುಮತಿ ಪಡೆಯಬೇಕು ಎಂದು ದೇಸಾಯಿ ಹೇಳಿದ್ದಾರೆ.

ಆದಾಗ್ಯೂ ಸೆಕ್ಷನ್‌ 17 ಎ ತನ್ನ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರಿಯ ನಡವಳಿಕೆಯನ್ನು ರಕ್ಷಿಸುತ್ತದೆ ಎಂದು ನ್ಯಾಯಪೀಠ ಗಮನಸೆಳೆದಿದೆ. ಸಿಬಿಐ ತನ್ನ ಪ್ರಕರಣದಲ್ಲಿ ಸಲ್ಲಿಸಿದ ಅಫಿದವಿತ್‌ನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ ಮತ್ತು ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ದೇಶು¾ಖ್‌ ತನ್ನ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುತ್ತಿಲ್ಲ ಎಂದು ಹೇಳಿದೆ. ಜು. 5ರಂದು ಹೈಕೋರ್ಟ್‌ ಈ ಅರ್ಜಿಯನ್ನು ಆಲಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next