ಮುಂಬಯಿ: ಮುಂಬಯಿ ವಿಶ್ವವಿದ್ಯಾನಿಲಯದ ಪೂರ್ಣಗೊಂಡ ಕಟ್ಟಡಗಳಿಗೆ ಎನ್‌ಒಸಿ ಮತ್ತು ಅಕ್ಯುಪೆನ್ಸಿ ಸರ್ಟಿಫಿಕೆಟ್ ನೀಡದಿರುವುದು ವ್ಯರ್ಥ ಕಾಲಹರಣವಾಗಿದೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಮತ್ತು ಬಿಎಂಸಿಯಿಂದ ಅಕ್ಯುಪನ್ಸಿ ಸರ್ಟಿಫಿಕೆಟ್ ಇಲ್ಲದೆ ವಿಶ್ವವಿದ್ಯಾನಿಲಯದ 38 ಕಟ್ಟಡಗಳು ಬಳಕೆಯಾಗುತ್ತಿಲ್ಲ ಎಂದು ರಾಜ್ಯಪಾಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲ ಕೋಶ್ಯಾರಿ ಅವರು ಮಂಗಳವಾರ ಮುಂಬಯಿ ವಿಶ್ವವಿದ್ಯಾನಿಲ ಯದ ಕಲಿನಾ ಕ್ಯಾಂಪಸ್‌ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ವಿಶ್ವವಿದ್ಯಾನಿಲಯದ ವಿವಿಧ ಇಲಾಖೆಗಳು ಮತ್ತು ಕಟ್ಟಡಗಳಿಗೆ ಭೇಟಿ ನೀಡಿದರು. ವಿಶ್ವವಿದ್ಯಾನಿಲಯದ ಅ ಧಿಕಾರಿಗಳು, ಬಿಎಂಸಿ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರಾಜ್ಯಪಾಲರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಶ್ವವಿದ್ಯಾನಿಲಯದ ಬಲವರ್ಧನೆಗಾಗಿ ವಿಶ್ವವಿದ್ಯಾನಿಲಯದ ಪ್ರಮುಖ ಯೋಜನೆಗಳು ಮತ್ತು ಭವಿಷ್ಯದ ಯೋಜನೆಗಳ ಕುರಿತು ರಾಜ್ಯಪಾಲರ ಮುಂದೆ ಪ್ರಸ್ತುತಿ ನೀಡಲಾಯಿತು. ಹೊಸ ಪರೀûಾ ಕಟ್ಟಡ, ಹೊಸ ಗ್ರಂಥಾಲಯ ಕಟ್ಟಡ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ಹೊಸ ಬಾಲಕಿಯರ ಹಾಸ್ಟೆಲ…, ಮಾಸ್ಟರ್ ಪ್ಲ್ಯಾನ್ ಆಫ್ ಹೆರಿಟೇಜ್ ಕನ್ಸರ್ವೇಶನ್ ಮತ್ತು ಸೌರಶಕ್ತಿ ಯೋಜನೆಯ ಕಾರ್ಯಗಳ ಬಗ್ಗೆ ರಾಜ್ಯಪಾಲರಿಗೆ ತಿಳಿಸಲಾಯಿತು.
ನ್ಯಾನೊ ವಿಜ್ಞಾನ ಮತ್ತು ನ್ಯಾನೊ ತಂತ್ರಜ್ಞಾನದ ರಾಷ್ಟ್ರೀಯ ಕೇಂದ್ರ, ಎಂಟಪ್ರìನೆರುಶ್ ಮತ್ತು ಸ್ಟಾರ್ಟ್ ಅಪ್ ಕೇಂದ್ರವನ್ನು ಅಭಿವೃದ್ಧಿಪಡಿಸುವುದು, ಹಸಿರು ತಂತ್ರಜ್ಞಾನ ಕಟ್ಟಡ, ಮೂಲ ವಿಜ್ಞಾನಗಳ ಶಾಲೆ, ಹೊಸ ಪರೀûಾ ಕಟ್ಟಡ ಮತ್ತು ವಿಶ್ವವಿದ್ಯಾನಿಲಯದ ಜ್ಞಾನ ಸಂಪನ್ಮೂಲ ಕೇಂದ್ರ, ಡಾ| ಅಂಬೇಡ್ಕರ್ ಭವನಕ್ಕೆ ರಾಜ್ಯಪಾಲರು ಭೇಟಿ ನೀಡಿದರು. ಪ್ರಯೋಗಾಲಯಗಳು ಮತ್ತು ಜವಾಹರ್‌ಲಾಲ್ ನೆಹರೂ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಅಪರೂಪದ ಹಸ್ತಪ್ರತಿಗಳು ಮತ್ತು ಸಂಗ್ರಹವನ್ನು ಪರಿಶೀಲಿಸಿದರು. ಈ ಸಂದರ್ಭ ಉಪಕುಲಪತಿ ಡಾ| ಸುಹಾಸ್ ಪೆಡೆ°àಕರ್ ಅವರು ರಾಜಬಾಯಿ ಗೋಪುರದ ಪ್ರತಿಕೃತಿಯನ್ನು ರಾಜ್ಯಪಾಲರಿಗೆ ನೀಡಿ ಗೌರವಿಸಿದರು.
ಸಭೆಯಲ್ಲಿ ಉಪ ವೈಸ್ ಚಾನ್ಸೆಲರ್ ಪ್ರೊ| ರವೀಂದ್ರ ಕುಲಕರ್ಣಿ, ರಿಜಿಸ್ಟ್ರಾರ್ (ಐಸಿ) ಬಲಿರಾಮ್ ಗಾಯಕ್ವಾಡ್, ವಿವಿಧ ವಿಭಾಗಗಳ ಅಧ್ಯಾಪಕರು, ಡೀನ್‌ಗಳು ಮತ್ತು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಭಾಗವಹಿಸಿದ್ದರು.