Advertisement

“ಭಗವಂತನ ನಾಮಸ್ಮರಣೆಯಿಂದ ಕೊರೊನಾ ಭಯ ದೂರ”

01:04 PM Jun 30, 2021 | Team Udayavani |

ಮುಂಬಯಿ: ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಗಳನ್ನು ಮಾಡುತ್ತಾ ಬಂದಿರುವ, ಮಲಾಡ್‌ ಪೂರ್ವದ ವೇ| ಮೂ| ಸತೀಶ್‌ ಭಟ್‌ ಸ್ಥಾಪಿಸಿರುವ ತಥಾಸ್ತು ಫೌಂಡೇಶನ್‌ ವತಿಯಿಂದ ಕೊರೊನಾ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಅನ್ನದಾನ, ದಿನೋಪಯೋಗಿ ವಸ್ತುಗಳ ಕಿಟ್‌ ಮತ್ತು ಕಡುಬಡತನದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಿ ಸಹಕರಿಸುತ್ತಾ ಬಂದಿದ್ದು, ಕಳೆದ ಹಲವಾರು ತಿಂಗಳುಗಳಿಂದ ಹುಣ್ಣಿಮೆಯ ದಿನ ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸಿ ಕೊರೊನಾ ಮಹಾಮಾರಿಯು ದೂರವಾಗಬೇಕೆಂದು ವಿಶೇಷ ಪೂಜೆಯನ್ನು ಸಲ್ಲಿಸುತ್ತಾ ಬಂದಿದೆ.

Advertisement

ಈ ಬಾರಿಯ ಹುಣ್ಣಿಮೆಯ ಜೂ. 22ರಂದು ಸತ್ಯನಾರಾಯಣ ಪೂಜೆಯು ಮಲಾಡ್‌ ಕುರಾರ ವಿಲೇಜ್‌ನ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ ನಡೆಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಸಂಜೆ ಭಜನೆ, ಬಳಿಕ ಸತ್ಯನಾರಾಯಣ ಮಹಾಪೂಜೆ, ಸಾರ್ವಜನಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಪೂಜೆಯಲ್ಲಿ ಪಾಲ್ಗೊಂಡ ಭಕ್ತರೆಲ್ಲರಿಗೂ ವೇ| ಮೂ| ಸತೀಶ ಭಟ್‌ ಆಶೀರ್ವಚಿಸಿ, ಬದುಕಿನಲ್ಲಿ ಸತ್ಕಾರ್ಯಗಳನ್ನು ನಡೆಸಬೇಕು. ನಿತ್ಯ ನಿರಂತರ ದೇವರ ನಾಮಸ್ಮರಣೆಯನ್ನು ಮಾಡಬೇಕು. ಕೊರೊನಾ ರೋಗದ ಬಗ್ಗೆ ಚಿಂತಿಸುತ್ತಾ ಮನಸ್ಸಿನಲ್ಲಿ ದುಃಖ ಇರಬಾರದು. ಆರೋಗ್ಯವನ್ನು ಕಾಪಾಡುತ್ತಾ ದೇವರ ಸ್ಮರಣೆಯಲ್ಲಿ ಇರಬೇಕು. ಎಲ್ಲ  ಸಮಸ್ಯೆಗಳಿಗೂ ಭಗವಂತ ಮಾರ್ಗವನ್ನು ಸೂಚಿಸಿದ್ದಾನೆ. ಮುಂದೆ ಒಳ್ಳೆಯ ದಿನಗಳು ಬರಲಿದೆ ಎಂದು ತಿಳಿಸಿದರು.

ಪೂಜೆಗೆ ಆಗಮಿಸಿ ಭಕ್ತರು ಗಂಧ ಪ್ರಸಾದವನ್ನು ಹಾಗೂ ಶ್ರೀ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ಸ್ವೀಕರಿಸಿದ ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ  ಮಂತ್ರ ದೇವತಾ ಮಂದಿರದ ನರೇಶ್‌ ಪೂಜಾರಿ, ಕುಮಾರಸ್ವಾಮಿ, ತಥಾಸ್ತು ಫೌಂಡೇಶನ್‌ನ ಪದಾಧಿಕಾರಿಗಳು, ಮತ್ತಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next