Advertisement
ವಾಗಿ 6 ದಿನಗಳಿಂದ ತುಳುವಿನಲ್ಲಿ ಭಗವದ್ಗೀತೆಯ ಸಾರ ಕಾರ್ಯಕ್ರಮ ವನ್ನು (ತುಳುವ ಜಾಲ್ಡ್ ಕೃಷ್ಣ ಪಾರ್ದನ) ಯಶಸ್ವಿಯಾಗಿ ನಡೆಸಿದ್ದು, ಇದೀಗಲೇ ಸುಮಾರು 31 ರಾಷ್ಟ್ರಗಳಲ್ಲಿ ನೆಲೆಸಿರುವ ತುಳು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.
Related Articles
Advertisement
ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನ್‌ದಾಸ್ ಪರಮಹಂಸ ಸ್ವಾಮೀಜಿ, ಕಾಸರಗೋ ಡು ಉಪ್ಪಳದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಸುಂದರ್ ದಾಸ್ ಪ್ರಭುಜಿ ಬೃಂದಾವನ್ ಅವರು ಐಲೇಸಾ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿ ಹರಸಿದ್ದಾರೆ. ಆರ್‌ಎಸ್‌ಎಸ್ ಧುರೀಣ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಸಹಿತ ಹಲವಾರು ಗಣ್ಯರು ಶುಭಾಶಂಸನೆಗೈದಿದ್ದಾರೆ.
ಒಂಬತ್ತು ತಿಂಗಳ ಐಲೇಸಾ ದಿ ವಾಯ್ಸ ಆಫ್ ಓಶಿಯನ್ ಮೊದಲ ಬಾರಿಗೆ ಭಗವದ್ಗೀತೆಯನ್ನು ತುಳುವಿನಲ್ಲಿ ತುಳುವ ಜಾಲ್ಡ್ ಕೃಷ್ಣ ಪಾರ್ದನ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಕೊನೆಯ ದಿನವಾದ ಶುಕ್ರವಾರ ಒಡಿಯೂರು ಮಠಾಧೀಶ ಶ್ರೀ ಗುರು ದೇವಾನಂದ ಸ್ವಾಮೀಜಿ ಮತ್ತು ಕೇಮಾರು ಶ್ರೀ ಈಶ ವಿಟuಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಉಭಯ ಸಂಸ್ಥೆಗಳು ತುಳು ಭಾಷೆಗಾಗಿ ಸಂಸ್ಕೃತಿಯ ಉಳಿವಿಗಾಗಿ ಕೈಗೊಂಡ ಈ ಭಕ್ತಿ ಸಾರ ಕಾರ್ಯಕ್ರಮವು ಭಕ್ತರಿಗೆ ಮನೆಯಲ್ಲಿದ್ದೇ ಆನ್‌ಲೈನ್ ಮೂಲಕ ನೋಡಿ ಕೇಳಿ ದೇವರ ಕೃಪೆಗೆ ಪಾತ್ರರಾಗಲು ನೂತನ ಯೋಚನೆ, ಅನುಭವ ಮತ್ತು ಪ್ರಯತ್ನವಾಗಿದೆ. ವಿಶ್ವದ ಇನ್ನಷ್ಟು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಟೀಮ್ ಐಲೇಸಾ ತಂಡದ ಪ್ರಧಾನ ರೂವಾರಿ, ಗಾಯಕ ರಮೇಶ್ಚಂದ್ರ ಮತ್ತು ಸುರೇಂದ್ರಕುಮಾರ್ ಮಾರ್ನಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.