ಮುಂಬಯಿ: ಚಂಡಮಾರು ತದಿಂದ ಹಾನಿಗೊಳಗಾದ ಮೀನುಗಾರರಿಗೆ ಹಣಕಾಸಿನ ನೆರವು ನೀಡುವ ಕುರಿತು ಎಲ್ಲ ಪಕ್ಷಗಳಿಗೆ ತಿಳಿಸಲಾಗುವುದು. ಸರ್ವಾನು ಮತದ ನಿರ್ಧಾರದ ಮೂಲಕ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಪತ್ತು ನಿರ್ವ ಹಣೆ, ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಾಡೆಟ್ಟಿವಾರ್ ಅವರು ಹೇಳಿದರು.
ಚಂಡಮಾರುತದಿಂದ ಹಾನಿಗೊಳಗಾದ ಮೀನುಗಾರರಿಗೆ ಹಣಕಾಸಿನ ನೆರವಿನ ಮಾನದಂಡಗಳನ್ನು ಬದಲಾಯಿಸಲು ಸಚಿವಾಲಯದ ಸಭಾಂಗಣದಲ್ಲಿ ಬುಧವಾರ ಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಚಂಡಮಾರುತದಿಂದ ಮೀನು ಗಾರರಿಗೆ ಆಗಿರುವ ಹಾನಿ ಬಗ್ಗೆ ಬ್ಯಾಂಕ್‌ಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಸರಕಾರವು ಮಂಜೂರು ಮಾಡಿದ ಮೊತ್ತವನ್ನು ಸಂತ್ರಸ್ತ ಮೀನುಗಾರರಿಗೆ ವಿತರಿಸಲು ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿಸಲಾಗಿದೆ.
ಈ ಮೊದಲು ಚಂಡಮಾರುತದ ಸಮಯದಲ್ಲಿ, ಸರಕಾರವು ಹಳೆಯ ನಿರ್ಧಾರಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿತ್ತು. ವಿಪತ್ತು ಸಂತ್ರಸ್ತರಿಗೆ ನೀಡುವ ನೆರವನ್ನು ಹೆಚ್ಚಿಸಿತ್ತು. ಚಂಡಮಾರುತದಿಂದ ಸಂತ್ರಸ್ತರಿಗೆ ರಾಜ್ಯ ಸರಕಾರವು ಕೇಂದ್ರದ ಬಳಿ 1,040 ಕೋಟಿ ರೂ. ಪ್ರಸ್ತಾವ ಸಲ್ಲಿಸಿತ್ತು. ಆದರೆ ಕೇಂದ್ರ ಸರಕಾರ ಕೇವಲ 268 ಕೋಟಿ ರೂ.ಗಳನ್ನು ನೀಡಿದೆ, ರಾಜ್ಯ ಸರಕಾರ 780 ಕೋಟಿ ರೂ. ನೀಡಿದೆ. ಮೀನುಗಾರರ ಬಗ್ಗೆ ಸರಕಾರ ಸಕಾರಾತ್ಮಕವಾಗಿದೆ. ಅವರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ವರು ಮಾತನಾಡಿ, ಚಂಡಮಾರುತದ ಸಮಯದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಲು ಸರಕಾರ ಅನೇಕ ನಿಯಮಗಳನ್ನು ಬದಲಾಯಿಸಿದೆ. ಅದೇ ರೀತಿ ಚಂಡಮಾರುತದಿಂದ ಹಾನಿಗೊಳಗಾದ ಮೀನುಗಾರರಿಗೆ ನೆರವು ನೀಡುವ ಬಗ್ಗೆ ಸರಕಾರ ಸಕಾರಾತ್ಮಕವಾಗಿದೆ ಎಂದರು.
ಸಭೆಯಲ್ಲಿ ಮೀನುಗಾರಿಕೆ ಆಯುಕ್ತ ಅತುಲ್ ಪಟೆ°, ಉಪ ಕಾರ್ಯದರ್ಶಿ ಶ್ರೀನಿವಾಸ್ ಶಾಸ್ತ್ರಿ, ಕೊಂಕಣ ಪ್ರಾದೇಶಿಕ ಜಿÇÉಾಧಿಕಾರಿ ಮಹೇಶ್ ದಿಯೋರ್, ಮಹಾರಾಷ್ಟ್ರ ಮೀನುಗಾರರ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಿರಣ್ ಕೋಲಿ, ಜ್ಯೋತಿ ಮೆಹರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.