ಜಾಲ್ನಾ: ಭವಿಷ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪರಿಗಣಿಸಿ, ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ವಿದ್ಯುತ್ ಜಾಲವನ್ನು ಬಲಪಡಿಸಲು ಒತ್ತು ನೀಡಲಾಗುವುದು. ಮರಾಠಾವಾಡಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿ ಕೊಳ್ಳುವ ಮೂಲಕ ವಿದ್ಯುತ್ ಸ್ವಾವಲಂಬಿ ಯಾಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಇಂಧನ ಸಚಿವ ನಿತಿನ್ ರಾವುತ್ ಹೇಳಿದ್ದಾರೆ.
ಜಾಲ್ನಾ ತಾಲೂಕಿನ ಉಟ್ವಾಡಿ ಮತ್ತು ಘನ್ಸವಾಂಗಿ ತಾಲೂಕಿನ ತೀರ್ಥಪುರಿಯಲ್ಲಿ 132 ಕೆ.ವಿ. ಉಪ ಕೇಂದ್ರದ ಭೂಮಿ ಪೂಜೆ ನೆರವೇರಿಸಿ ಸಚಿವ ನಿತಿನ್ ರಾವುತ್ ಮಾತನಾಡಿದರು.ಉಟ್ವಾಡಿಯಲ್ಲಿ 132 ಕೆ.ವಿ. ಉಪಕೇಂದ್ರಕ್ಕೆ ಸಚಿವ ರಾಜೇಶ್ ಟೋಪೆ ಅವರು ಇಂಧನ ಸಚಿವರಾಗಿದ್ದಾಗ ಸಬ್‌ಸ್ಟೇಷನ್ ಮಂಜೂರು ಮಾಡಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವ ರಾಜೇಶ್ ಟೋಪೆ, ಸಚಿವ ಶಾಸಕ ಕೈಲಾಸ್ ಗೊರಾಂಟ್ಯಾಲ್ ಮತ್ತು ನಾಗರಿಕರ ಬೇಡಿಕೆಯಿಂದ ಈ ಉಪ ಕೇಂದ್ರ ನಿರ್ಮಾಣಕ್ಕಾಗಿ 38 ಕೋಟಿ ರೂ.ಗಳ ನಿಧಿಯನ್ನು ಮಂಜೂರು ಮಾಡಲಾಗಿದೆ.
ತೀರ್ಥಪುರಿಯ ಸಬ್‌ಸ್ಟೇಷನ್‌ಗಾಗಿ 42 ಕೋಟಿ ರೂ.ಗಳ ನಿಧಿಯೂ ಲಭ್ಯವಾಗಿದ್ದು, ಇದರಿಂದ ಸುತ್ತಮುತ್ತಲಿನ ಪರಿಸರದಲ್ಲಿನ ಹಲವು ಹಳ್ಳಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರಾವುತ್ ಹೇಳಿದ್ದಾರೆ.ಕೃಷಿ ಪಂಪ್‌ಗ್ಳಿಗೆ ವಿದ್ಯುತ್ ಸಂಪರ್ಕ, ಸಿಎಂ ಸೌರ ಯೋಜನೆ ಇಂಧನ ಅಂತೆಯೇ ಪಿಎಂ ಕುಸುಮ್ ಯೋಜನೆ ಮತ್ತು ವಿವಿಧ ವಿದ್ಯುತ್ ಯೋಜನೆಗಳನ್ನು ಶೀಘ್ರ ದಲ್ಲೇ ಜಾರಿಗೆ ತರಲಾಗುವುದು ಎಂದು ತಿಳಿಸಿದ ರಾವುತ್, ರೈತರ ಅನುಕೂಲಕ್ಕಾಗಿ ಪ್ರತಿ ಜಿÇÉೆಯಲ್ಲೂ ಒಂದೇ ವಿಂಡೋವ್ಯವಸ್ಥೆಯನ್ನು ಶೀಘ್ರದÇÉೇ ಜಾರಿಗೆ ತರಲಾ ಗುವುದು. ವಿದ್ಯುತ್ ಉತ್ಪಾದನೆಗೆ ಪೂರೈಕೆಗೆ, ಹೆಚ್ಚಿನ ಪ್ರಮಾಣದ ಹಣದ ಅಗತ್ಯವಿದ್ದು, ವಿದ್ಯುತ್ ಬಳಸುವ ಪ್ರತಿಯೊಬ್ಬರಿಗೂ ತಮ್ಮ ವಿದ್ಯುತ್ ಬಿಲ್ ಪಾವತಿಸುವಂತೆ ಮನವಿ ಮಾಡಿದರು.ಮುಖಮಂತ್ರಿ ಸೌರ ಯೋಜನೆ ಅಡಿಯಲ್ಲಿ ಜಾಲ್ನಾ ಜಿಲ್ಲೆಯಿಂದ 23 ಅರ್ಜಿಗಳು ಬಂದಿವೆ. ಈ ಅರ್ಜಿಗಳ ಜತೆಗೆ ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಲಾಗುವುದು. ಲಾಕ್‌ಡೌನ್ ಆವಧಿಯಲ್ಲಿ ಎಂಎಸ್‌ಇಡಿಸಿಎಲ್ ಸಿಬಂದಿ ಹಗಲು-ರಾತ್ರಿ ಕೆಲಸ ಮಾಡಿದ್ದರಿಂದ ಸಾಮಾನ್ಯ ಜನರಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಯೋಜನೆಗಳು ಸುಗಮವಾಗಿತ್ತು ಎಂದು ರಾವುತ್ ಹೇಳಿದ್ದಾರೆ.
ಸಾರ್ವಜನಿಕ ಆರೋಗ್ಯ ಸಚಿವ ರಾಜೇಶ್ ಟೋಪೆ ಮಾತನಾಡಿ, ಜಾಲ್ನಾ ಜಿಲ್ಲೆಯ ಆರ್ಥಿಕತೆ ಕೃಷಿಯ ಮೇಲೆ ಅವಲಂಬಿತವಾಗಿದೆ. ರೈತರ ಕೃಷಿ ಪಂಪ್‌ಗ್ಳಿಗೆ ಸರಾಗವಾಗಿ ವಿದ್ಯುತ್ ಪಡೆದರೆ ಮಾತ್ರ ಈ ಆರ್ಥಿಕ ಚಕ್ರವು ವೇಗಗೊಳ್ಳುತ್ತದೆ. ಉಟ್ವಾಡಿ ಮತ್ತು ತೀರ್ಥಪುರಿಯಲ್ಲಿ 132 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪಿಸಲಾಗುತ್ತಿರುವುದರಿಂದ ಉಟ್ವಾಡಿಯ 90 ಗ್ರಾಮಗಳು ಮತ್ತು ತೀರ್ಥಪುರಿಯ 44 ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸುಗಮವಾಗಲಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಕೈಲಾಸ್ ಗೋರಂತ್ಯಾಲ…, ಶಾಸಕ ರಾಜೇಶ್ ರಾಥೋಡ್, ಮಾಜಿ ಶಾಸಕ ಸುರೇಶ್ ಜೆಥಾಲಿಯಾ, ಅಧೀಕ್ಷಕ ಎಂಜಿನಿಯರ್ ರಂಗನಾಥ್ ಚವಾಣ್ ಮತ್ತಿತರರಿದ್ದರು.