Advertisement
ತನ್ನಯ ಗೂಡಲ್ಲಿ ಕೂಡಿ ಹಾಕಿ ಸದಾ ಸಾಲುಗಟ್ಟಿ ನಿಲ್ಲುತ್ತಿದ್ದ ಜನರನ್ನು ಕಂಡು ಬೇಸತ್ತಿದ್ದ ಪ್ರಾಣಿಗಳಿಗೆ ಈಗ ತುಸು ಆರಾಮ. ದಿನಕ್ಕೆ 3 ಬಾರಿ ಆಹಾರ ಮತ್ತು ನೀರು ನೀಡುವವರು ಮಾತ್ರ ಒಳಗೆ ಬಂದು ಹೋಗುತ್ತಿದ್ದು, ಪ್ರವಾಸಿಗರ ಸುಳಿವಿಲ್ಲ. ಇನ್ನು ಸಫಾರಿ ಲಭ್ಯವಿರುವ ಅರಣ್ಯಗಳಲ್ಲಿ ಪ್ರಾಣಿಗಳು ತುಂಬಾ ಶಾಂತವಾಗಿವೆ.
ಉದ್ಯಾನವನಗಳಲ್ಲಿ ಸಾಮಾನ್ಯವಾಗಿ ಮನುಷ್ಯರು ಮತ್ತು ವಾಹನಗಳು ಚಲಿಸುತ್ತಿದ್ದ ಸ್ಥಳಗಳಲ್ಲಿ ಪ್ರಾಣಿಗಳು ಖುಷಿಯಿಂದ ಓಡಾಡುತ್ತಿವೆ. ಸಾಮಾನ್ಯವಾಗಿ ಸಿಂಹಗಳು ರಸ್ತೆಯಲ್ಲಿ ಕಂಡು ಬರುವುದಿದೆ. ಆದರೆ ಕರಡಿಗಳು ರಸ್ತೆಯಲ್ಲಿ ಓಡಾಡುವುದು ತುಂಬಾ ವಿರಳ. ಆದರೆ ಆಫ್ರಿಕಾದಲ್ಲಿನ ಬಹುತೇಕ ವನ್ಯಜೀವಿಗಳು ಸ್ವಾತಂತ್ರ್ಯವನ್ನು ಅನುಭವಿಸುತ್ತಿವೆ. ಕೆಲವು ದಿನಗಳ ಹಿಂದೆ ಇದೇ ಅರಣ್ಯದ ರಸ್ತೆಯಲ್ಲೇ ಸಿಂಹಗಳ ಗುಂಪು ನಿದ್ದೆಯಲ್ಲಿ ಇರುವ ಚಿತ್ರಗಳು ಲಭ್ಯವಾಗಿದ್ದವು. ಈ ರಸ್ತೆಗಳು ಸಾಮಾನ್ಯ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಈಗ ಲಾಕ್‌ಡೌನ್ ಘೋಷಣೆಯ ಬಳಿಕ ಉದ್ಯಾನವನಕ್ಕೆ ಜನರು ಬರುತ್ತಿಲ್ಲ. ವನ್ಯಜೀವಿಗಳು ಸ್ವತ್ಛಂದವಾಗಿ ಓಡಾಡುತ್ತಿವೆ.
Related Articles
Advertisement
ಲಾಕ್‌ಡೌನ್ ತೆರವಾದ ಬಳಿಕ ಜನರು ಮತ್ತೆ ವನ್ಯಧಾಮಗಳನ್ನು ಸಂದರ್ಶಿಸಬಹುದಾಗಿದೆ. ಜನರು ಹಿಂತಿರುಗಿದ ಬಳಿಕ ವನ್ಯಜೀವಿಗಳು ತಾವು ಹಿಂದೆ ಓಡಾಡಿದ ಸ್ಥಳಗಳಿಂದ ಏಕಾಏಕಿ ಹೊರಹೋಗದೇ ಇರಬಹುದು ಎನ್ನುತ್ತಾರೆ ತಜ್ಞರು. ಲಾಕ್‌ಡೌನ್ ತೆರವಾದ ಬಳಿಕವೂ ವಾಹನಗಳ ಓಡಾಟಗಳಿಗೆ ಇವುಗಳು ಅಡ್ಡಿಪಡಿಸುವ ಸಾಧ್ಯತೆಯನ್ನೂತಳ್ಳಿ ಹಾಕುವಂತಿಲ್ಲ.