Advertisement

ಪ್ರಾಣಿ ಕಲ್ಯಾಣ ಸಹಾಯವಾಣಿ ನಾಳೆ(ಜೂನ್ 23) ಲೋಕಾರ್ಪಣೆ : ಸಚಿವ ಪ್ರಭು ಚವ್ಹಾಣ್

07:27 PM Jun 22, 2021 | Team Udayavani |

ಬೆಂಗಳೂರು: ಪಶುಸಂಗೋಪನೆ ಇಲಾಖೆ ರೈತರಿಗೆ ಜಾನುವಾರು ಸಾಕಣೆದಾರರಿಗೆ ಉತ್ಪಾದಕತೆ ಹೆಚ್ಚೆಸಲು ಹಾಗೂ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರೈತರಿಗೆ ಮತ್ತಷ್ಟು ಹತ್ತಿರವಾಗುವಲ್ಲಿ “ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್‌ರೂಮ್)”ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

Advertisement

ಇಂದು ವಿನಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ಕಲ್ಯಾಣಕ್ಕಾಗಿ ಪಶುಸಂಗೋಪನೆ ಇಲಾಖೆ ಸಾಕಷ್ಟು ಶ್ರಮವಹಿಸುತ್ತಿದೆ. ನಾಳೆ ಪಶುಸಂಗೋಪನೆ ಇಲಾಖೆಯ ಬಹುನಿರಿಕ್ಷೀತ ಪ್ರಾಣಿ ಕಲ್ಯಾಣ ಸಹಾಯವಾಣಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಲಿದ್ದಾದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲು ಹನೋದ್ಯಮಕ್ಕೆ ಪ್ರಾಣಿ ಕಲ್ಯಾಣ ಸಹಾಯವಾಣಿಸಾಕಷ್ಟು ಸಹಕಾರಿಯಾಗಲಿದ್ದು ವಾರ್‌ರೂಮ್ ಮೂಲಕ ರೈತರು, ಜಾನುವಾರು ಸಾಕಣೆದಾರರು ಎಲ್ಲ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ರಚನೆ

  • ಬಿಡಾಡಿ ದನ, ನಾಯಿ ಸೇರಿದಂತೆ ಎಲ್ಲ ಪ್ರಾಣಿಗಳ ರಕ್ಷಣೆ ಮಾಡಲಾಗುತ್ತಿದೆ. ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರು ಹಾಗೂ ಎನ್.ಜಿ.ಒ ಸೇರಿ ಕಾರ್ಯನಿರ್ವಹಣೆ ಆಗುತ್ತಿದೆ.

ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್‌ರೂಮ್)

  • ರಾಜ್ಯದ ಎಲ್ಲ ಪ್ರಾಣಿಗಳ ಕಲ್ಯಾಣ ಅನುಷ್ಠಾನಕ್ಕಾಗಿ ಸುಸಜ್ಜಿತ ರಾಜ್ಯ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್‌ರೂಮ್) ಲೋಕಾರ್ಪಣೆ ಆಗಲಿದೆ.
  • ದಿನದ ೨೪ ಗಂಟೆ ಕಾರ್ಯನಿರ್ವಹಿಸುತ್ತದೆ.
  • ಕರೆ ಮಾಡಿದ ಕೆಲವೆ ಗಂಟೆಗಳಲ್ಲಿ ಕ್ರಮ ವಹಿಸಲಾಗುತ್ತದೆ.
  • ಜಾನುವಾರು ಸಾಕಣೆದಾರರು, ರೈತರಿಗೆ ಅನುಕೂಲವಾಗುತ್ತದೆ.
  • ಸ್ವಂತ ಉದ್ಯೋಗಕ್ಕೆ ಬೇಕಾದ ಎಲ್ಲ ಮಾಹಿತಿ ದೊರೆಯುತ್ತದೆ.
  • ಆರೋಗ್ಯ, ಲಸಿಕೆ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
Advertisement

ಪಶು ಸಂಜೀವಿನಿ

  • ಆಂಬುಲೆನ್ಸ್ ಸೇವೆ ೧೫ ಜಿಲ್ಲೆಗಳಿಗೆ ನೀಡಲಾಗಿದ್ದು ಇನ್ನೂ ೨೫ ಆಂಬುಲೆನ್ಸ್ ಸೇವೆ ಸದ್ಯದಲ್ಲೇ ಒದಗಿಸಲಾಗುತ್ತದೆ.
  • ಸುಸಜ್ಜಿತ ಪಶುಚಿಕಿತ್ಸಾ ವಾಹನ ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುತ್ತಿರುವುದರಿಂದ ರೈತರು ಸಂತಸ ವ್ಯಕ್ತ ಪಡಿಸಿದ್ದಾರೆ. ಪಶುಸಂಜೀವಿನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಹೆಚ್ಚು ಒತ್ತು ನೀಡಲಾಗಿದೆ.

ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ

  • ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಕ್ಕೂ ಮೊದಲು ಅಧ್ಯಯನ ನಡೆಸಲಾಗಿದೆ.
  • ರಾಜ್ಯದಲ್ಲಿ ಗೋಹತ್ಯೆ ನಿಷೇಧ ಪರಿಣಾಮಕಾರಿಯಾಗಿ ಜಾರಿಗೆ ತರಲು ಅಧ್ಯಯನ ನಡೆಸಲಾಗಿದೆ.
  • ಗಜರಾತ್, ಉತ್ತರಪ್ರದೇಶಕ್ಕೆ ಭೇಟಿ ನೀಡಿ ಗೋಹತ್ಯ ನಿಷೇಧ ಕಾಯ್ದೆ ಅಧ್ಯಯನ ಮಾಡಲಾಗಿದೆ.
  • ರಾಜ್ಯದಲ್ಲಿಯೂ ಪರಿಣಾಮಕಾರಿ ಗೋಹತ್ಯೆ ನಿಷೇಧ ಜಾರಿ ಮಾಡಲಾಗಿದೆ.
  • ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ ೨೦೨೧ ಅನುಷ್ಠಾನ ಮಾಡಲಾಗಿದೆ.
  • ಗೋವುಗಳ ಸಂರಕ್ಷಣೆಗೆ ಕಾಯ್ದೆ ಸಹಕಾರಿಯಾಗಿದೆ.

ಜಿಲ್ಲೆಗೊಂದು ಗೋಶಾಲೆ

  • ೨೦೨೧-೨೨ ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಆದಂತೆ ಪ್ರತಿ ಜಿಲ್ಲೆಗೆ ಒಂದು ಗೋಶಾಲೆ ತೆರೆಯಲು ಕ್ರಮ ವಹಿಸಲಾಗುತ್ತಿದೆ.
  • ಈ ಗಾಗಲೇ ೨೨ ಜಿಲ್ಲೆಗಳಲ್ಲಿ ಗೋಶಾಲೆಗೆ ಸ್ಥಳ ಗುರುತಿಸಲಾಗಿದೆ.
  • ಸಂರಕ್ಷಿಸಿದ ಗೋವುಗಳ ರಕ್ಷಣೆಗೆ ಗೋಶಾಲೆ ಮಾಡಲಾಗುತ್ತಿದೆ
  • ಅನುದಾನ ಬಿಡುಗಡೆ ಮಾಡಲಾಗಿದೆ. 

ಗೋಶಾಲೆಗಳಿಗೆ ಅನುದಾನ

  • ರಾಜ್ಯದಲ್ಲಿ ೧೮೮ ಖಾಸಗಿ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿವೆ.
  • ಒಟ್ಟು ೪೯,೬೨೯ ಗೋವುಗಳ ರಕ್ಷಣೆ ಆಗಿರುತ್ತದೆ.
  • ಪಿಂಜರಾಪೋಲ್ ಮತ್ತು ಇತರ ಗೋಶಾಲೆ ಅನುದಾನ ಅಡಿಯಲ್ಲಿ ಸಹಾಯಧನ ನೀಡಲಾಗುತ್ತಿದೆ.

ಜಿಲ್ಲೆಗಳಿಗೆ ಭೇಟಿ

  • ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಇಲಾಖಾ ಪ್ರಗತಿ ಪರಿಶೀಲನೆ ನಡೆಸಲಾಗಿದೆ
  • ಇಲಾಖಾ ಚಟುವಟಿಕೆಗಳ ಅನುಷ್ಠಾನ, ಆರೋಗ್ಯ ಸೇವೆ, ವಿಸ್ತರಣಾ ಚಟುವಟಿಕೆ, ಗೋಶಾಲೆಗಳಿಗೆ ಭೇಟಿ ನೀಡಲಾಗಿದೆ.
  • ಎಲ್ಲ ಜಿಲ್ಲೆಗಳ ಗೋಶಾಲೆ, ಪಶು ಆಸ್ಪತ್ರೆಗಳಿಗೆ ಭೇಟಿ ನೀಡಲಾಗಿದೆ.

 

ಆರ್.ಐ.ಡಿ.ಎಫ್ ಯೋಜನೆ

  • ಆರ್.ಐ.ಡಿ.ಎಫ್ ಯೋಜನೆಯ ಮೂಲಕ ೨೮೮ ಕಟ್ಟಡಗಳನ್ನು ನಿರ್ಮಿಸಲು ಅನುದಾನ ನೀಡಲಾಗಿದೆ.
  • ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ.

ಜಿಲ್ಲೆಗೊಂದು ಪಾಲಿಕ್ಲಿನಿಕ್

  • ರಾಜ್ಯದಲ್ಲಿ ಸುಪರ್ ಸ್ಪೇಷಾಲಿಟಿ, ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಜಿಲ್ಲೆಗೊಂದು ಪಾಲಿಕ್ಲಿನಿಕ್ ಸ್ಥಾಪಿಸಿ ಸೇವೆ ಒದಗಿಸಲಾಗುತ್ತಿದೆ.
  • ಜಾನುವಾರು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ
  • ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಕ್ರಮ ವಹಿಸಲಾಗುತ್ತಿದೆ
  • ಔಷಧ ದಾಸ್ತಾನು ಕಡಿಮೆ ಆಗದಂತೆ ನೋಡಿಕೊಳ್ಳಲಾಗಿದೆ.

ರಿಂಗ್‌ವ್ಯಾಕ್ಸಿನ್

  • ಕಾಲುಬಾಯಿ ರೋಗದ ಲಕ್ಷಣ ಕಂಡುಬಂದ ಪ್ರದೇಶಗಳಲ್ಲಿ ತ್ವರಿತವಾಗಿ ರಿಂಗ್‌ವ್ಯಾಕ್ಸಿನ್ ಮಾಡಲು ಕ್ರಮವಹಿಸಲಾಗಿದೆ
  • ರೋಗವನ್ನು ಹತೋಟಿಗೆ ತಕ್ಷಣ ಕ್ರಮವಹಿಸಲಾಗಿದೆ. ರೋಗೋದ್ರೇಕ ಕಂಡುಬಂದ ಜಿಲ್ಲೆಗಳಲ್ಲಿ ತಕ್ಷಣಕ್ಕೆ ಕ್ರಮವಹಿಸಲಾಗಿದೆ. ಖಾಸಗಿ ಕಂಪನಿಯಿಂದ ಔಷಧ ಪಡೆದು ರಾಸುಗಳ ಜೀವ ರಕ್ಷಣೆ ಮಾಡಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next