Advertisement

ಕುಷ್ಟಗಿ ಜಾತ್ರೆಯಲ್ಲಿ ಪ್ರಾಣಿ ಹಿಂಸೆ ದುರದೃಷ್ಟಕರ: ದಯಾನಂದ ಸ್ವಾಮೀಜಿ

08:11 PM Mar 05, 2022 | Team Udayavani |

ಕುಷ್ಟಗಿ: ಕುಷ್ಟಗಿ ತಾಲೂಕಿನ ಡೊಣ್ಣೆಗುಡ್ಡ ದುರ್ಗಾದೇವಿ ಜಾತ್ರೆಯಲ್ಲಿ‌ ಪ್ರಾಣಿ ಬಲಿ‌ ನಿಷೇಧದ ಹಿನ್ನೆಲೆಯಲ್ಲಿ ಭಕ್ತಾದಿಗಳು ದೂರದ ಪ್ರದೇಶದಲ್ಲಿ ಪ್ರಾಣಿ ಹತ್ಯೆ ಮಾಡಿ ಮಾಂಸ ತಂದಿದ್ದಾರೆ. ಇದು ಪ್ರಾಣಿ ಬಲಿ ಆಗದು ಪ್ರಾಣಿ ಹತ್ಯೆ ಆಗಿದ್ದು ಒಟ್ಟಾರೆಯಾಗಿ ಈ ಜಾತ್ರೆಯಲ್ಲಿ ಪ್ರಾಣಿ ಜೀವ ಹಿಂಸೆ ಆಗಿರುವುದು ದುರದೃಷ್ಟಕರ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು.

Advertisement

ಕುಷ್ಟಗಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸಹಾಯಕ ಆಯುಕ್ತ,ತಹಶೀಲ್ದಾರ ಡಿವೈಎಸ್ಪಿ, ಸಿಪಿಐ, ಪಿಎಸೈ ಮೊದಲಾದವರ ಟೀಮ್ ವರ್ಕನಿಂದ ಪ್ರಾಣಿ ಬಲಿ ಸಂಪೂರ್ಣ ನಿಷೇಧ ಸಾದ್ಯವಾಗದೇ ಇದ್ದರು, ಗಣನೀಯ ಪ್ರಮಾಣದಲ್ಲಿ ಪ್ರಾಣಿ ಬಲಿ ತಡೆದಿದ್ದೇವೆ. ಕಳೆದ ಏಳು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ದೇವಿ ಜಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರಾಣಿ ಬಲಿ ನಡೆಯುತ್ತಿತ್ತು. ನಮ್ಮ ಹೋರಾಟದ ಪ್ರತಿಫಲವಾಗಿ ಹಂತ ಹಂತವಾಗಿ ಪ್ರಾಣಿ ಬಲಿ ಪ್ರಮಾಣ ಕಡಿಮೆ ಆಗಿದೆ ಎಂದರು.

ಸಿಕ್ಕಿ ಬಿದ್ದ ಚರ್ಮದ ವ್ಯಾಪಾರಿ
ಕಳೆದ ಮಾ.3 ರ ಜಾತ್ರೆಯಲ್ಲಿ ಪ್ರಾಣಿ ಬಲಿ‌ ನಿಷೇದಿತ ಪ್ರದೇಶ ಹೊರತು ಪಡಿಸಿ 300 ರಿಂದ 500 ಪ್ರಾಣಿ ಹತ್ಯೆ ಆಗಿರುವುದು ಅಂದಾಜಿಸಲಾಗಿದೆ. ಇದು ನಮ್ಮ ಹೋರಾಟಕ್ಕೆ ಬಹುತೇಕ ಯಶಸ್ವಿಯಾಗಿದೆ. ಹಿಂದಿನ ಹೋರಾಟಕ್ಕೆ ಹೋಲಿಸಿದರೆ ಬಹು ಸಂಖ್ಯೆಯಲ್ಲಿ ಪ್ರಾಣಿ ಬಲಿ ತಡೆದಿದ್ದೇವೆ.
ಈ ಸಂದರ್ಭದಲ್ಲಿ ಚರ್ಮ ವ್ಯಾಪಾರಿ ಕುರಿ ಚರ್ಮ ಸಮೇತ ಸಿಕ್ಕಿ ಬಿದ್ದಿದ್ದು ಆತ 151 ಚರ್ಮ‌‌ ವಶಕ್ಕೆ ತೆಗೆದುಕೊಳ್ಳಲಾಗಿದ್ದು ಈತನ ವಿರುದ್ದವೂ ಕೇಸ್ ದಾಖಲಿಸಿ 14 ದಿನಗಳ‌ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೂರ್ಖ‌ ಚರ್ಮದ ವ್ಯಾಪಾರಿ ಪ್ರಾಣಿ ಬಲಿ‌ ನಿಷೇಧದ ಅರಿವು ಇಲ್ಲದೇ ಚರ್ಮ ಖರೀಧಿಸಲು ಬಂದು ವಿಶ್ವ ಪ್ರಾಣಿ ಮಂಡಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಎಲ್ಲೆಲ್ಲಿ ಪ್ರಾಣಿ ಹತ್ಯೆ ನಡೆಸಿದವರ ಮಾಹಿತಿ ಆ ಚರ್ಮ‌ ವ್ಯಾಪಾರಿಯ ಮೂಲಕ ಪತ್ತೆ ಹಚ್ಚಲಾಗುತ್ತಿದೆ.

ಈ ವರ್ಷದಲ್ಲಿ ಪ್ರಾಣಿ ಬಲಿ ಹೇಗೆ ನಿಯಂತ್ರಿಸಬಹುದು ಎನ್ನುವ ತಂತ್ರಗಾರಿಗೆ ಸಿಕ್ಕಿದೆ. ಮುಂದಿನ ಜಾತ್ರೆಯಲ್ಲಿ ತಂತ್ರಗಾರಿಕೆ ಬಳಸಿಕೊಂಡು ಸಾಮೂಹಿಕ ಪ್ರಾಣಿ ಬಲಿ ನಿಯಂತ್ರಿಸಲಾಗುವುದು. ಈ ಬಾರಿ ದ್ರೋಣ್ ಕ್ಯಾಮರಾ ಬಳಸಿಕೊಂಡಿದ್ದೇವೆ. ಅಲ್ಲದೇ ಜಾತ್ರೆಯ ಮುನ್ನ 400 ಪೊಲೀಸರಿಂದ‌18 ಗ್ರಾಮಗಳಲ್ಲಿ ಪಥ ಸಂಚಲನ ನಡೆಸಿ ಪ್ರಾಣಿ ಬಲಿ‌ ಜಾಗೃತಿ ಮೂಡಿಸಲಾಗಿದೆ. ಮುಂದಿನ ಜಾತ್ರೆಯಲ್ಲಿ ಸುತ್ತಮುತ್ತಲಿನ ಜಮೀನು‌ ಮಾಲೀಕರು ಯಾವೂದೇ ಕಾರಣಕ್ಕೂ ಭಕ್ತರು ತಾತ್ಕಾಲಿಕ ಟೆಂಟ್ ಗೆ ಅವಕಾಶ ಕಲ್ಪಿಸಬಾರದು. ಸದರಿ‌ ಟೆಂಟ್ ನಲ್ಲಿ ಪ್ರಾಣಿ ನಡೆದರೆ ಜಮೀನು‌ ಮಾಲೀಕರು ಹೊಣೆಗಾರರು ಎಂದರು.

ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮಹಿಳಾ ಘಟಕದ ಅಧ್ಯಕ್ಷೆ ಸುನಂದಾದೇವಿ ವಸ್ತ್ರದ್ ಮಠ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next