Advertisement

Animal: ಮೊದಲ ದಿನದ ಗಳಿಕೆಯಲ್ಲೇ ʼಪಠಾಣ್‌, ʼಗದರ್‌ -2ʼ ದಾಖಲೆಯನ್ನು ಮುರಿದ ʼಅನಿಮಲ್‌ʼ

09:28 AM Dec 02, 2023 | Team Udayavani |

ಮುಂಬಯಿ: ಸಂದೀಪ್‌ ವಂಗಾ ಅವರ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ʼಅನಿಮಲ್‌ʼ ರಿಲೀಸ್‌ ಆಗಿದೆ. ಸಾವಿರಾರು ಥಿಯೇಟರ್‌ ನಲ್ಲಿ ಅದ್ಧೂರಿಯಾಗಿ ತೆರೆಕಂಡ ಸಿನಿಮಾ ಬಾಕ್ಸ್‌ ಆಫೀಸ್‌ ಗಳಿಕೆಯಲ್ಲೂ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.

Advertisement

ತಂದೆ – ಮಗನ ಕಥೆಯಲ್ಲಿ ಎಮೋಷನಲ್‌ ಹಾಗೂ ಆ್ಯಕ್ಷನ್ ಅಂಶಗಳನ್ನು 3 ಗಂಟೆ 21 ನಿಮಿಷ ಸ್ಕ್ರೀನ್‌ ಮೇಲೆ ಸಂದೀಪ್‌ ವಂಗಾ ತೋರಿಸಿದ್ದಾರೆ. ರಣ್ಬೀರ್‌ ಕಪೂರ್‌ ಅವರ ಮಾಸ್‌ ಲುಕ್‌ ಹಾಗೂ ಅಮೋಘ ನಟನೆ ಪ್ರೇಕ್ಷಕರ ಮನಗೆದ್ದಿದೆ. ಇನ್ನುಳಿದಂತೆ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಾಸ್‌ ಕಂಟೆಂಟ್‌ ಮೆಚ್ಚುವ ಪ್ರೇಕ್ಷಕರಿಂದ ಸಿನಿಮಾ ಪಾಸಿಟಿವ್‌ ರೆಸ್ಪಾನ್ಸ್‌ ಪಡೆದುಕೊಂಡಿದೆ. ನಿರೀಕ್ಷೆಯಂತೆ ಮೊದಲ ದಿನವೇ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ಓಪನಿಂಗ್‌ ಪಡೆದುಕೊಂಡಿದೆ.

ಇದನ್ನೂ ಓದಿ: Viral: ನೆದರ್‌ಲ್ಯಾಂಡ್‌ ಯುವತಿಯನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾದ ಯುಪಿ ಮೂಲದ ಯುವಕ

‌ʼ ಸ್ಯಾಕ್ನಿಲ್ಕ್ʼ ಪ್ರಕಾರ ‘ಅನಿಮಲ್’ ಮೊದಲ ದಿನ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ 61.00 ಕೋಟಿ ರೂ. ಗಳಿಸಿದೆ. ಹಿಂದಿ ಆವೃತ್ತಿ 50 ಕೋಟಿ ರೂ. ಗಳಿಸಿದ್ದು, ತೆಲುಗು ಆವೃತ್ತಿಯು 10 ಕೋಟಿ ರೂ., ತಮಿಳು ಆವೃತ್ತಿಯು 40 ಲಕ್ಷ ರೂ. ಕನ್ನಡ ಆವೃತ್ತಿ 9 ಲಕ್ಷ ರೂ. ಗಳಿಸಿದ್ದು, ಮಲಯಾಳಂ ಆವೃತ್ತಿ 1 ಲಕ್ಷ ರೂ. ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

Advertisement

ಮೊದಲ ದಿನ 61 ಕೋಟೊ ರೂ. ಗಳಿಸುವ ಮೂಲಕ ಈ ವರ್ಷದ ದೊಡ್ಡ ಬ್ಲಾಕ್ ಬಸ್ಟರ್‌ ಗಳಾದ ʼಪಠಾಣ್‌‌,ʼ ಗದರ್-2‌ʼ ಫಸ್ಟ್‌ ಡೇ ಗಳಿಕೆಯನ್ನು ಮೀರಿಸಿದೆ.

ʼಅನಿಮಲ್‌ʼ ನಲ್ಲಿ ರಣ್ಬೀರ್‌ ಕಪೂರ್‌, ರಶ್ಮಿಕಾ ಮಂದಣ್ಣ, ಅನಿಲ್‌ ಕಪೂರ್‌‌ ,ಬಾಬಿ ಡಿಯೋಲ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next