Advertisement

ಅನಿಲಭಾಗ್ಯ ಯೋಜನೆಯಡಿ ಸಿಲಿಂಡರ್‌ ವಿತರಣೆ: ಜಿಲ್ಲಾಧಿಕಾರಿ

07:25 AM Jun 12, 2020 | Suhan S |

ಕಲಬುರಗಿ: ಕೋವಿಡ್ ಲಾಕ್‌ಡೌನ್‌ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಜಿಲ್ಲೆಯ 7,845 ಫಲಾನುಭವಿಗಳಿಗೆ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಮೂರು ತಿಂಗಳವರೆಗೆ ಪ್ರತಿ ತಿಂಗಳಿಗೆ ಒಂದರಂತೆ ಮೂರು ರಿಫಿಲ್‌ ಸಿಲಿಂಡರ್‌ ಉಚಿತವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ.

Advertisement

ಫಲಾನುಭವಿಗಳಿಂದ ಹಿಂದೆ ಸಂಗ್ರಹಿಸಿದ ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆ ಮಾಹಿತಿ ಆಹಾರ ನಿರೀಕ್ಷಕರ ಲಾಗಿನ್‌ನಲ್ಲಿ ಈಗಾಗಲೇ ಲಭ್ಯವಿದೆ. ಫಲಾನುಭವಿಗಳ ಮಾಹಿತಿ ತಪ್ಪಾಗಿದ್ದಲ್ಲಿ ಹಾಗೂ ತಿದ್ದುಪಡಿ ಆಗಬೇಕಾದ್ದಲ್ಲಿ ಅಂತಹ ಫಲಾನುಭವಿಗಳು ಆಯಾ ತಾಲೂಕಿನ ತಹಶೀಲ್ದಾರ್‌ ಕಚೇರಿಯ ಆಹಾರ ಶಾಖೆಗೆ ಭೇಟಿ ನೀಡಿ ಜೂ.14ರೊಳಗಾಗಿ ಸರಿಯಾದ ಮಾಹಿತಿ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಆಹಾರ ಶಿರಸ್ತೇದಾರ, ಆಹಾರ ನಿರೀಕ್ಷಕರ ಕೆಳಕಂಡ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಅಫಜಲಪುರ: 94487 54630, 99728 98112, ಆಳಂದ: 95389 26999, 97411 68538, ಚಿಂಚೋಳಿ: 99013 33195, 97411 35727, ಚಿತ್ತಾಪುರ: 95916 68929, 94485 54589, ಜೇವರ್ಗಿ: 94481 34228, 9902846295, ಸೇಡಂ: 9972359755, 9845074767, ಕಲಬುರಗಿ (ಗ್ರಾಮೀಣ): 9845498779, 9448252028, ಕಲಬುರಗಿ (ನಗರ): 8867576591, 9741328123

Advertisement

Udayavani is now on Telegram. Click here to join our channel and stay updated with the latest news.

Next