Advertisement

ಗಂಭೀರ್‌ ಪ್ರಕಟಿಸಿದ ಸಾರ್ವಕಾಲಿಕ ಟೆಸ್ಟ್‌ ತಂಡಕ್ಕೆ ಅನಿಲ್‌ ಕುಂಬ್ಳೆ ನಾಯಕ

12:37 AM May 04, 2020 | Sriram |

ಹೊಸದಿಲ್ಲಿ: ಮಾಜಿ ಆರಂಭಕಾರ ಗೌತಮ್‌ ಗಂಭೀರ್‌ ತಮ್ಮ ಸಾರ್ವಕಾಲಿಕ ಭಾರತೀಯ ಟೆಸ್ಟ್‌ ತಂಡವೊಂದನ್ನು ಪ್ರಕಟಿಸಿದ್ದಾರೆ. ಇದಕ್ಕೆ ಸ್ಪಿನ್‌ ಮಾಂತ್ರಿಕ, ಕನ್ನಡಿಗ ಅನಿಲ್‌ ಕುಂಬ್ಳೆ ನಾಯಕರಾಗಿದ್ದಾರೆ.

Advertisement

ಕರ್ನಾಟಕದ ಮತ್ತಿಬ್ಬರು ಆಟಗಾರರಾದ ರಾಹುಲ್‌ ದ್ರಾವಿಡ್‌ ಮತ್ತು ಜಾವಗಲ್‌ ಶ್ರೀನಾಥ್‌ ಇದರಲ್ಲಿ ಸ್ಥಾನ ಪಡೆದಿದ್ದಾರೆ.ತಮ್ಮ ಆರಂಭಿಕ ಜತೆಗಾರ ಸೆಹವಾಗ್‌, ದಾಖಲೆಗಳ ವೀರ ಗಾವಸ್ಕರ್‌, ಲೆಜೆಂಡ್ರಿ ಕ್ರಿಕೆಟಿಗ ತೆಂಡುಲ್ಕರ್‌ ಈ ತಂಡದ ಪ್ರಮುಖರು. ಕಪಿಲ್‌ದೇವ್‌ ಏಕೈಕ ಆಲ್‌ರೌಂಡರ್‌.

ಗೌತಮ್‌ ಗಂಭೀರ್‌ ಟೆಸ್ಟ್‌ ಇಲೆವೆನ್‌: ಸುನೀಲ್‌ ಗಾವಸ್ಕರ್‌, ವೀರೇಂದ್ರ ಸೆಹವಾಗ್‌, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡುಲ್ಕರ್‌, ವಿರಾಟ್‌ ಕೊಹ್ಲಿ, ಕಪಿಲ್‌ದೇವ್‌, ಮಹೇಂದ್ರ ಸಿಂಗ್‌ ಧೋನಿ, ಹರ್ಭಜನ್‌ ಸಿಂಗ್‌, ಅನಿಲ್‌ ಕುಂಬ್ಳೆ (ನಾಯಕ), ಜಹೀರ್‌ ಖಾನ್‌, ಜಾವಗಲ್‌ ಶ್ರೀನಾಥ್‌.

 

Advertisement

Udayavani is now on Telegram. Click here to join our channel and stay updated with the latest news.

Next