‘ನಾವು ಪಾತ್ರವಾಗುತ್ತಾ ಹೋಗಬೇಕು, ನಟನಾಗಲ್ಲ‘. ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಇಫಿ] ಭಾಗವಾಗಿ ಶುಕ್ರವಾರ ನಡೆದ ‘ನಿರ್ದೇಶಕ ಮತ್ತು ನಟ‘ ನ ನಡುವಿನ ಸಂವಾದದಲ್ಲಿ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದು ಅನಿಲ್ ಕಪೂರ್.
Advertisement
ಸಭಿಕರೊಬ್ಬರ ಪ್ರಶ್ನೆ: ಇಂದಿಗೂ ನೀವು ಒಬ್ಬ ಒಳ್ಳೆಯ ನಟನಾಗಿರುವುದು ಹೇಗೆ?ಉತ್ತರ ಅನಿಲ್ ಕಪೂರ್‌ರದ್ದು: ನಾನು ನಟನೆಗೆ ಬಂದಾಗ ನನ್ನೊಂದಿಗೆ ಕಪೂರ್ ಎಂಬ ಸರ್ ನೇಮ್ ನ ಬ್ಯಾಗೇಜ್ ಘಹೊರೆ] ಇತ್ತು ಇದರರ್ಥ ರಾಜ್‌ಕಪೂರ್. ಶಮ್ಮಿಕಪೂರ್ ಶ್ರೇಷ್ಠ ನಟರ ಸರ್ ನೇಮ್]. ನಾನು ಮೊದಲು ಕಳಚಿಕೊಂಡಿದ್ದು ಅದನ್ನು. ಪ್ರಜ್ಣಾಪೂರ್ವಕವಾಗಿ ಅದರಿಂದ ದೂರ ಉಳಿಯುತ್ತಾ ಬಂದೆ, ಅಂದರೆ ನಾನು ಆ ಹೊರೆಯಿಂದ ದೂರ ಉಳಿದುಕೊಂಡು ಎಲ್ಲರೊಂದಿಗೆ ದುಡಿದೆ. ಹಾಗಾಗಿ ಎಂ.ಎಸ್. ಸತ್ಯು ಅವರ ಬಳಿ ಹೋದೆ, ಕೆಲಸ ಮಾಡಿದೆ. ಆಮೇಲೆ ಮಣಿರತ್ನಂ, ವಿಶ್ವನಾಥ್, ಬಾಪು.. ಹೀಗೆ ಅವಕಾಶ ಕೊಟ್ಟದ್ದನ್ನೆಲ್ಲಾ ಒಪ್ಪಿಕೊಂಡು, ಅದರಲ್ಲಿ ನಟನಾಗುವುದಕ್ಕಿಂತ ಆ ಪಾತ್ರವಾಗುವುದನ್ನು ಕಲಿತೆ. ಇದು ನಾನು ನನ್ನ ಹೊರೆಯನ್ನು ಇಳಿಸಿಕೊಳ್ಳಲು ಮಾಡಿದ ಪ್ರಯತ್ನ.