Advertisement

 ಸಿನ್ಸಿನಾಟಿ ಟೆನಿಸ್‌: ಸಾನಿಯಾ-ಶುಯಿ ಕ್ವಾರ್ಟರ್‌ ಪ್ರವೇಶ

11:24 AM Aug 18, 2017 | Team Udayavani |

ಸಿನ್ಸಿನಾಟಿ: ಭಾರತದ ಸಾನಿಯಾ ಮಿರ್ಜಾ- ಚೀನದ ಪೆಂಗ್‌ ಶುಯಿ ಜೋಡಿ ಸಿನ್ಸಿನಾಟಿ ಟೆನಿಸ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲಿಗೆ ಏರಿದೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ಸೋಲನುಭವಿಸಿದ್ದಾರೆ.

Advertisement

ಸಾನಿಯಾ-ಶುಯಿ ಸೇರಿಕೊಂಡು ಜರ್ಮನಿಯ ಜಾರ್ಜಸ್‌-ಉಕ್ರೇನಿನ ಓಲ್ಗಾ ಸಾವುcಕ್‌ ಅವ ರನ್ನು 7-5, 6-4 ಅಂತರದಿಂದ ಮಣಿಸಿದರು. ಬುಧವಾರ ರಾತ್ರಿಯ ಈ ಸ್ಪರ್ಧೆ ಒಂದೂವರೆ ಗಂಟೆ ಕಾಲ ಸಾಗಿತು. ಇಂಡೋ-ಚೈನೀಸ್‌ ಜೋಡಿಯಿನ್ನು ರೊಮೇನಿಯಾದ ಐರಿನಾ ಕ್ಯಾಮೆಲಿಯಾ ಬೆಗು-ರಲುಕಾ ಒಲಾರು ವಿರುದ್ಧ ಸೆಣಸಲಿದೆ.

ಪುರುಷರ ವಿಭಾಗದ ದ್ವಿತೀಯ ಸುತ್ತಿನಲ್ಲಿ ರಾಮ್‌ಕುಮಾರ್‌ ಅವರನ್ನು ಅಮೆರಿಕದ ವೈಲ್ಡ್‌ಕಾರ್ಡ್‌ ಆಟಗಾರ ಜರೆಡ್‌ ಡೊನಾಲ್ಡ್‌ಸನ್‌ 6-4, 2-6, 6-4 ಅಂತರದಿಂದ ಪರಾಭವಗೊಳಿಸಿದರು. ಇದು ಡೊನಾಲ್ಡ್‌ಸನ್‌ ವಿರುದ್ಧ ರಾಮ್‌ಕುಮಾರ್‌ ಅನುಭವಿಸಿದ ಸತತ 2ನೇ ಸೋಲು. ಮೊದಲ ಸೋಲು ಎದುರಾದದ್ದು 2015ರಷ್ಟು ಹಿಂದೆ. ಅದು 2015ರ ಫ್ರೆಂಚ್‌ ಓಪನ್‌ ಅರ್ಹತಾ ಪಂದ್ಯಾವಳಿಯಾಗಿತ್ತು.

ಪುರುಷರ ಡಬಲ್ಸ್‌ ದ್ವಿತೀಯ ಸುತ್ತಿನಲ್ಲಿ ರೋಹನ್‌ ಬೋಪಣ್ಣ-ಇವಾನ್‌ ಡೊಗಿಗ್‌ ಜೋಡಿ ಕೊಲಂಬಿಯಾದ ಜುವಾನ್‌ ಸೆಬಾಸ್ಟಿಯನ್‌ ಕಬಾಲ್‌-ಇಟಲಿಯ ಫ್ಯಾಬಿಯೊ ಫೊಗಿನಿ ವಿರುದ್ಧ ಸೆಣಸಲಿದೆ. 

ಲಿಯಾಂಡರ್‌ ಪೇಸ್‌-ಅಲೆಕ್ಸಾಂಡರ್‌ ಜ್ವರೇವ್‌ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಇವರನ್ನು ಹಿಮ್ಮೆಟ್ಟಿಸಿದವರು ಸ್ಪೇನಿನ ಫೆಲಿಶಿಯಾನೊ ಲೋಪೆಜ್‌-ಮಾರ್ಕ್‌ ಲೋಪೆಜ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next