Advertisement

ಕುಡಿದ ಮತ್ತಿನಲ್ಲಿ ಮಹಿಳೆಯ ರಂಪಾಟ ಬಾಲಿ ವಿಮಾನ ಚೆನ್ನೈಗೆ ಬಂದಿಳಿಯಿತು

06:01 PM Nov 06, 2017 | Team Udayavani |

ನವದೆಹಲಿ: ಕುಡಿದು ನಶೆಯಲ್ಲಿದ್ದ ಮಹಿಳೆಯೊಬ್ಬಳು ವಿಮಾನದೊಳಗೆ ರಂಪಾಟ ನಡೆಸಿದ್ದರಿಂದ ದೋಹಾ, ಬಾಲಿಯ ಕತಾರ್ ಏರ್ ವೇಸ್ ಚೆನ್ನೈಗೆ ಬಂದಿಳಿದ ಘಟನೆ ನಡೆದಿದೆ.

Advertisement

ಮೂಲಗಳ ಪ್ರಕಾರ, ನಿದ್ದೆಯಲ್ಲಿದ್ದ ಗಂಡನ ಮೊಬೈಲ್ ಫೋನ್ ಅನ್ನು ಅಲ್ ಲಾಕ್ ಮಾಡಿದ್ದ ಇರಾನಿ ಮಹಿಳೆ ರಂಪಾಟ ನಡೆಸಲು ಶುರು ಮಾಡಿದ್ದಳು. ಅದಕ್ಕೆ ಕಾರಣವಾಗಿದ್ದು, ಮೊಬೈಲ್ ಫೋನ್ ನಲ್ಲಿದ್ದ ಚಾಟಿಂಗ್ ಅನ್ನು ನೋಡಿ ಅಯ್ಯೋ ತನ್ನ ಗಂಡ ತನಗೆ ಮೋಸ ಮಾಡುತ್ತಿದ್ದಾನೆಂದು ಆರೋಪಿದ್ದಳು!

ಭಾನುವಾರ ವಿಮಾನ ಏರುವ ಮುನ್ನವೇ ಗಂಡ, ಹೆಂಡತಿ ಇಬ್ಬರು ಮದ್ಯ ಸೇವಿಸಿದ್ದರು. ರಂಪಾಟ ನಡೆಸುತ್ತಿದ್ದ ಮಹಿಳೆಯನ್ನು ವಿಮಾನ ಸಿಬ್ಬಂದಿಗಳು ಸಮಾಧಾನಪಡಿಸಲು ತುಂಬಾ ಪ್ರಯತ್ನಿಸಿದ್ದರು. ಆದರೆ ಪರಿಸ್ಥಿತಿ ಕೈಮೀರಿ ಹೋದಾಗ, ವಿಮಾನದ ದಿಕ್ಕನ್ನೇ ಬದಲಿಸಲು ಪೈಲಟ್ ನಿರ್ಧರಿಸಿದ್ದರು.

ಬಾಲಿಗೆ ತೆರಳಬೇಕಿದ್ದ ವಿಮಾನ ಚೆನ್ನೈಗೆ ಬಂದು ಲ್ಯಾಂಡ್ ಆಗಿ, ಅಲ್ಲಿ “ಕಿರಿಕ್ ಪಾರ್ಟಿ” ಇರಾನಿ ದಂಪತಿ ಹಾಗೂ ಮಗುವನ್ನು ಇಳಿಸಿದ್ದರು. ಬಳಿಕ ಕತಾರ್ ವಿಮಾನ ಬಾಲಿಗೆ ಪ್ರಯಾಣ ಬೆಳೆಸಿತ್ತು. ಚೆನ್ನೈ ಅಧಿಕಾರಿಗಳು ಇರಾನಿ ದಂಪತಿ, ಮಗುವನ್ನು ವಿಮಾನ ನಿಲ್ದಾಣದಲ್ಲಿಯೇ ಇರಿಸಿಕೊಂಡು, ಇರಾನಿ ಮಹಿಳೆಯ ಅಮಲು ಇಳಿದು ಹೋದ ಮೇಲೆ ಅವರನ್ನು ಕೌಲಾಲಂಪುರ ವಿಮಾನದಲ್ಲಿ ಕಳುಹಿಸಿಕೊಟ್ಟಿದ್ದರು. ಅಲ್ಲಿಂದ ದೋಹಾ ವಿಮಾನದಲ್ಲಿ ಪ್ರಯಾಣ ಬೆಳೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next