Advertisement
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಮಹಾತ್ಮಾ ಗಾಂಧೀಜಿ ವೃತ್ತ, ಬಸವೇಶ್ವರ ವೃತ್ತ, ಡಾ| ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು.
ಪ್ರಾರಂಭವಾಗಿದೆ. ಗರ್ಭಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ 3-4 ಕಿ.ಮೀ. ದೂರದಿಂದ ಅಲೆಯುತ್ತಿದ್ದಾರೆ.
ಮತ್ತೂಂದೆಡೆ ಶೇ.40 ರಷ್ಟು ಪೌಷ್ಟಿಕ ಆಹಾರದ ದುರುಪಯೋಗವಾಗುತ್ತಿದೆ ಎಂದು ಹರಿಹಾಯ್ದರು. ಅಂಗನವಾಡಿ ನೌಕರರಿಗೆ ಮಾಸಿಕ 18 ಸಾವಿರ ರೂ. ವೇತನ ಹಾಗೂ 3 ಸಾವಿರ ರೂ, ನಿವೃತ್ತಿ ವೇತನ ನೀಡಬೇಕು. ಬಾಲ ವಿಕಾಸ ಸಮಿತಿಯ ಪುನರ್ ರಚನೆಗೆ ಸ್ಥಳೀಯ ಸಂಸ್ಥೆ ಸದಸ್ಯರನ್ನು ಖಾತೆ ತೆರೆಯಲು ಕಡ್ಡಾಯ ಮಾಡಿದ್ದನ್ನು ಹಿಂಪಡೆಯಬೇಕು.
Related Articles
Advertisement
ಸಂಘಟನೆಯ ಪ್ರಮುಖರಾದ ಶೋಭಾ ಕಾಖಂಡಕಿ, ಅನಿತಾ ಲಮಾಣಿ, ನಿರ್ಮಲಾ ಕಾಂಬಳೆ, ಅಯ್ಯಮ್ಮ ವನಕಿಹಾಳ, ನಿಂಬೆಕ್ಕ ಕಾಳಾಪೂರ, ಮೈಬೂ ಬಾಗಲಕೋಟ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸಚಿವ ಜಿಗಜಿಣಗಿ ಕಚೇರಿ ಎದುರು ನಿರಶನವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಕೇಂದ್ರ
ಸಚಿವ ರಮೇಶ ಜಿಗಜಿಣಗಿ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ನಗರದ ಬಾರಾಕಮಾನ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಅಂಗನವಾಡಿ ನೌಕರರು, ಸ್ಟೇಶನ್ ರಸ್ತೆಯಲ್ಲಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ, ಕೇಂದ್ರ ಸರ್ಕಾರ ಬರುವ ಬಜೆಟ್‌ನಲ್ಲಿ ಅಂಗನವಾಡಿ ನೌಕರರ ಸಮಸ್ಯೆಗಳ ಕುರಿತು ಚರ್ಚಿಸಿ, ಅಗತ್ಯ ಸೌಲಭ್ಯ ಕಲ್ಪಿಸಬೇಕು. ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಗೌರಮ್ಮ ಪಾಟೀಲ, ಭಾರತಿ ವಾಲಿ, ರಾಯಚೂರಿನ ಪದ್ಮಾವತಿ, ಸುನಂದಾ ನಾಯಕ, ಸುರೇಖಾ ರಜಪೂತ,
ಲಕ್ಷ್ಮಣ ಹಂದ್ರಾಳ, ಬಿಸಿಯೂಟದ ಗಿರಿಯಪ್ಪ ಸಿದ್ದಮ್ಮ ಮಾತನಾಡಿ, 45 ಎಲ್‌ಐಸಿ ಯ ಶಿಫಾರಸ್ಸುಗಳಾದ
(ಭಾರತೀಯ ಕಾರ್ಮಿಕ ಸಮ್ಮೇಳನ) ಸ್ಕೀಮ್ ಗಳಲ್ಲಿ ದುಡಿಯುತ್ತಿರುವವರನ್ನು ಕಾರ್ಮಿಕರೆಂದು ಪರಿಗಣಿಸಿ 18 ಸಾವಿರ ಕನಿಷ್ಠ ವೇತನ, ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಕನಿಷ್ಠ 3 ಸಾವಿರ ರೂ. ನಿವೃತ್ತಿ ವೇತನ ನೀಡುವುದು ಸೇರಿದಂತೆ ಹಲವು ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಚಿವ ರಮೇಶ ಜಿಗಜಿಣಗಿ, ಅಂಗನವಾಡಿ ನೌಕರರ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಿಸಿದ ಇಲಾಖೆ ಸಚಿವರೊಂದಿಗೆ ಚರ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಬಾಗಲಕೋಟೆಯ ಹಣಮಂತ ದಾಸರ, ವರಲಕ್ಷ್ಮೀ, ಸುರೇಖಾ ಯಾದಗಿರಿ, ಬಸಲಿಂಗಮ್ಮ, ಸುಶೀಲಾ ಹತ್ತಿ, ಶ್ರೀದೇವಿ ಚುಡೆ, ದಾನಮ್ಮ ಗುಗ್ಗರೆ, ಸುವರ್ಣ ಹಲಗಣಿ, ಅಶ್ವಿನಿ ತಳವಾರ, ಎಲ್.ವೈ. ನದಾಫ್, ಜಯಶ್ರೀ ಪೂಜಾರಿ, ಸರಸ್ವತಿ ಮಠ, ಸರೋಜಿನ ಪಾಟೀಲ, ಶೈಲಾ ಕಟ್ಟಿ, ಶೋಭಾ ಕೊಡತೆ, ದಾಕ್ಷಾಯಿಣಿ ಅವಟಿ ಇದ್ದರು.