Advertisement

ಅಂಗನವಾಡಿ ಪಕ್ಕದಲ್ಲೇ ಜಲ್ಲಿ ಹುಡಿ ರಾಶಿ..!

09:43 PM Jan 02, 2020 | Team Udayavani |

ಬ್ರಹ್ಮಾವರ: ಕರ್ಜೆ ಪಂಚಾಯತ್‌ ವ್ಯಾಪ್ತಿಯ ಕಡಂಗೋಡು ಅಂಗನವಾಡಿ ಪಕ್ಕದಲ್ಲೇ ರಸ್ತೆ ಕಾಮಗಾರಿಗಾಗಿ ಜಲ್ಲಿ ಹುಡಿ ರಾಶಿ ಹಾಕಲಾಗಿದೆ.

Advertisement

ಪ್ರತಿನಿತ್ಯ ಶಾಲಾ ಅವಧಿಯಲ್ಲೇ ಟಿಪ್ಪರ್‌ನಲ್ಲಿ ಕ್ರಶರ್‌ ಹುಡಿ ತಂದು ಸುರಿಯಲಾಗುತ್ತದೆ, ಕಾಮಗಾರಿಗಾಗಿ ಮತ್ತೆ ತುಂಬಿಸಲಾಗುತ್ತಿದೆ. ಇದರಿಂದ ಹತ್ತಾರು ಅಂಗನವಾಡಿ ಪುಟಾಣಿಗಳ ಹಾಗೂ ಸರಕಾರಿ ಕಿ.ಪ್ರಾ. ಶಾಲಾ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.

ಶಾಲಾ ಮೈದಾನದಲ್ಲೇ ಬೃಹತ್‌ ಪ್ರಮಾಣದಲ್ಲಿ ಜಲ್ಲಿ ಹುಡಿ ಸಂಗ್ರಹಿಸುವುದರಿಂದ ಅನಾರೋಗ್ಯ ಸೇರಿದಂತೆ ಹಲವಾರು ಸಮಸ್ಯೆಗಳು ತಲೆದೋರಿವೆ. ವಿವಿಧ ಇಲಾಖೆಗಳ ಗಮನಕ್ಕೆ ತರಲಾಗಿದೆ. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಮೈದಾನದಲ್ಲಿ ಸಂಗ್ರಹಿಸಿದ ಕ್ರಶರ್‌ ಹುಡಿಯನ್ನು ಶಾಲಾ ಸಮಯ ಹೊರತು ಪಡಿಸಿ ತಕ್ಷಣ ತೆರವುಗೊಳಿಸಬೇಕು, ಅಂಗನವಾಡಿ ಪುಟಾಣಿಗಳ ಹಿತದೃಷ್ಟಿಯಿಂದ ಇಲಾಖೆ ತಕ್ಷಣ ಸ್ಪಂದಿಸಬೇಕೆಂದು ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next