Advertisement

ಎಲ್ಲರೊಳಗೂ ಕಾಳಿಕಾ ದೇವಿ ಅಸ್ತಿತ್ವ :ಆನೆಗುಂದಿ ಶ್ರೀ

11:29 AM Mar 19, 2017 | Harsha Rao |

ಕಾರ್ಕಳ: ಭಕ್ತನಾದವನು ಭಕ್ತಿಯಿಂದ ಕಾಳಿಕಾ ದೇವಿಯನ್ನು ಒಲಿಸಿಕೊಳ್ಳಬೇಕು. ಎಲ್ಲರಲ್ಲೂ ಕಾಳಿಕಾ ದೇವಿ ನೆಲೆಸಿದ್ದಾಳೆ. ಅವಳದ್ದು ಚೈತನ್ಯ ರೂಪವಾದ ಶಕ್ತಿ ಎಂದು ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿಯ ಅಷ್ಟೋತ್ತರ ಶತಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. 

Advertisement

ಅವರು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಮಾ. 16ರಂದು ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಕಾಳಿಕಾದೇವಿಯನ್ನು ಭಕ್ತಿಯಿಂದ ಮಾತ್ರ ಒಲಿಸಿಕೊಳ್ಳಲು ಸಾಧ್ಯ. ನಿರಾಕಾರ ಸ್ವರೂಪಳಾದ ಮಾತೆಯನ್ನು ಆಡಂಬರದಿಂದ ಒಲಿಸಿಕೊಳ್ಳಲು ಸಾಧ್ಯವಿಲ್ಲ. ಶ್ರದ್ಧೆ ತುಂಬಿದ ಭಕ್ತಿಯೇ ಇಷ್ಟಾರ್ಥ ಈಡೇರಲು ಸಹಕಾರಿ ಎಂದರು.

ವಿದ್ವಾನ್‌ ಪಂಜ ಭಾಸ್ಕರ ಭಟ್‌ ಧಾರ್ಮಿಕ ಉಪನ್ಯಾಸ ನೀಡಿ, ಬ್ರಹ್ಮಕಲಶೋತ್ಸವ ಎನ್ನುವ ಪದದ ಬದಲು ಬ್ರಹ್ಮಕಲಶ ಪುಣ್ಯೋತ್ಸವ ಎನ್ನುವುದೇ ಅತ್ಯಂತ ಸೂಕ್ತ. ಈ ಕಾರ್ಯದಿಂದ ಅಗಾಧ ಪುಣ್ಯವೇ ಪ್ರಾಪ್ತಿಯಾಗುತ್ತದೆ ಎಂದರು. 

ಇದೇ ಸಂದರ್ಭ ಕ್ಷೇತ್ರದ ಮಾಹಿತಿಯುಳ್ಳ ಸ್ಮರಣಸಂಚಿಕೆಯನ್ನು ಪರಮಪೂಜ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಹರೀಶ್‌ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ, ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಮೂಡಬಿದಿರೆ ಎಸ್‌ಕೆಎಫ್‌ ಗ್ರೂಪ್‌ನ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್ಯ, ಹಿರಿಯಂಗಡಿ ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ಶೆಟ್ಟಿ, ಬಾಕೂìರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ವಿ. ಆಚಾರ್ಯ ವಡೇರ ಹೋಬಳಿ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗರಾಜ ಆಚಾರ್ಯ, ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್‌ ಆಚಾರ್ಯ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ, ಭಟ್ಕಳ ಚೌಥನಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಸದಾನಂದ ಆಚಾರ್ಯ, ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಉಮೇಶ್‌ ಆಚಾರ್ಯ ಪೋಳ್ಯ, ಕುಂಬಳೆ ಕಾಳೆì ಆರಿಕ್ಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ಸುಧಾಕರ ಆಚಾರ್ಯ ಎಡನೀರು, ಅಷ್ಟಬಂಧ ಬ್ರಹ್ಮ
ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ಸುಧಾಕರ ಆಚಾರ್ಯ, ಜೊತೆ ಮೊಕ್ತೇಸರರಾದ ಕೆ. ರತ್ನಾಕರ ಆಚಾರ್ಯ ಹಾಗೂ ಶಿಲ್ಪಿ ರಾಮಚಂದ್ರ ಆಚಾರ್ಯ, ಅವಿಭಜಿತ ದ.ಕ. ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು.

Advertisement

ಸತೀಶ್‌ ಆಚಾರ್ಯ ಸ್ವಾಗತಿಸಿದರು, ಸುಧಾಕರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಲ್ಪಿ ರಾಮಚಂದ್ರ ಆಚಾರ್ಯ ಮತ್ತು ಹರ್ಷ ವರ್ಧನ ನಿಟ್ಟೆ ಸಂದೇಶ ವಾಚಿಸಿದರು. ಕವಿತಾ ಹರೀಶ್‌ ಸ್ಮರಣ ಸಂಚಿಕೆ ಬಗ್ಗೆ ಮಾಹಿತಿ ನೀಡಿದರು. ದಾಮೋದರ್‌ ಶರ್ಮಾ ಮತ್ತು ಗೀತಾ ಚಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು, ವಸಂತ ಆಚಾರ್ಯ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next