Advertisement
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ದೇಗುಲ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
Related Articles
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಹೊಸ ವರ್ಷದ ಸಲುವಾಗಿ ಜ. 1ರಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು.
Advertisement
ಡಿ. 31ರ ರಾತ್ರಿ ಕೊಲ್ಲೂರಿಗೆ ಆಗಮಿಸಿದ್ದ ಭಕ್ತರು ವಿವಿಧ ವಸತಿಗೃಹಗಳಲ್ಲಿ ತಂಗಿದ್ದರು. ಶನಿವಾರ 10,000ಕ್ಕೂ ಮಿಕ್ಕಿ ಭಕ್ತರು ದೇಗುಲಕ್ಕೆ ಆಗಮಿಸಿದ್ದರು.
ಆನೆಗುಡ್ಡೆಯಲ್ಲಿ ಭಕ್ತರ ದಂಡುತೆಕ್ಕಟ್ಟೆ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಪ್ರವಾಸಿಗರು ಸೇರಿದಂತೆ ದಾಖಲೆ ಸಂಖ್ಯೆಯ ಭಕ್ತರು ಆಗಮಿಸಿ, ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು.
ಇಲ್ಲಿನ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲ, ಕುಂಭಾಶಿ ಶ್ರೀ ಹರಿಹರ ದೇಗುಲ, ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಿತ ವಿವಿಧ ದೇಗುಲಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಶ್ರೀದೇವರ
ದರ್ಶನ ಪಡೆದರು. ಶ್ರೀಕೃಷ್ಣಮಠದಲ್ಲಿ ಜನಸಂದಣಿ
ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠ ಮತ್ತು ಮಲ್ಪೆ ಬೀಚ್‌ನಲ್ಲಿ ಶುಕ್ರವಾರ, ಶನಿವಾರ ಎರಡು ದಿನ ಹೆಚ್ಚಿನ ಜನ ಸಂದಣಿ ಹೆಚ್ಚಿತ್ತು. ವಿವಿದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿದ ಪ್ರವಾಸಿಗರು ಕಡಲ ತೀರದಲ್ಲಿ ನೂತನ ವರ್ಷವನ್ನು ಸಂಭ್ರಮಿಸಿದರು. ಕಡಲತೀರದ ಹೋಂ ಸ್ಟೇ, ರೆಸಾರ್ಟ್, ವಸತಿಗೃಹ ಗಳು ಭರ್ತಿಯಾಗಿದ್ದವು. ಶ್ರೀಕೃಷ್ಣಮಠಕ್ಕೆ ಶನಿವಾರ ಸುಮಾರು 12,000 ಭಕ್ತರು ಆಗಮಿಸಿದ್ದು ಸುಮಾರು 10,000 ಜನರು ಭೋಜನ ಪ್ರಸಾದ ಸ್ವೀಕರಿಸಿದರು.