Advertisement

ಗೂಗಲ್ ಮ್ಯಾಪ್‌ನಲ್ಲಿ ತಮಿಳು ಭಾಷೆಯಲ್ಲಿ ಆನೆಗುಂದಿ ಹೆಸರು : ನೆಟ್ಟಿಗರ ಆಕ್ರೋಶ

07:53 PM Feb 20, 2022 | Team Udayavani |

ಗಂಗಾವತಿ: ಗೂಗಲ್ ಸಂಸ್ಥೆ ವಿಶ್ವದ ಸ್ಥಳನಾಮ ಹಾಗೂ ಮ್ಯಾಪ್ ನಲ್ಲಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆನೆಗುಂದಿಯ ಹೆಸರನ್ನು ತಮಿಳುಭಾಷೆಯಲ್ಲಿ ಬರೆದಿದ್ದು ಇದಕ್ಕೆ ಗೂಗಲ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಗೂಗಲ್ ಸಂಸ್ಥೆ ಇಡೀ ವಿಶ್ವದ ಮಹತ್ವದ ಮತ್ತು ಉಪಯುಕ್ತ ಮಾಹಿತಿಯನ್ನು ಇಂಟರನೆಟ್ ಗೂಗಲ್ ಮೂಲಕ ನೀಡುತ್ತಿದ್ದು ಪ್ರದೇಶವಾರು ಜಿಪಿಎಸ್ ಮೂಲಕ ನಕ್ಷೆ ಮತ್ತು ಊರುಗಳ ಹೆಸರು ಮತ್ತು ದಿಕ್ಕನ್ನು ತೋರಿಸುತ್ತದೆ.

ಊರಿನ ಹೆಸರನ್ನು ಮೊದಲು ಅಂತಾರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲೀಷ್ ನಂತರ ಪ್ರಾಂತೀಯ ಭಾಷೆಗಳಲ್ಲಿವೆ. ಆನೆಗೊಂದಿ ಹೆಸರನ್ನು ಮೊದಲು ತಮಿಳು ನಂತರ ಕನ್ನಡ ಭಾಷೆಯಲ್ಲಿ ಬರೆಯುವ ಮೂಲಕ ಗೂಗಲ್ ಸಂಸ್ಥೆ ಕನ್ನಡಿಗರು ವಿಶೇಷವಾಗಿ ಆನೆಗೊಂದಿ ಭಾಗದ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕಳೆದ ಒಂದು ವಾರದಿಂದ ವರದಿ ಮಾಡುವ ಮೂಲಕ ಬರೆದಿರುವ ತಪ್ಪನ್ನು ಸರಿಪಡಿಸುವಂತೆ ಒತ್ತಡ ಹಾಕಲಾಗುತ್ತಿದೆ.

ವಿಶ್ವದಾದ್ಯಂತ ಗೂಗಲ್ ಮ್ಯಾಪ್ ಖ್ಯಾತವಾಗಿದ್ದು ಬೇಕಾದ ಸ್ಥಳಕ್ಕೆ ಮೊಬೈಲ್‌ನಲ್ಲಿ ಗೂಗಲ್ ಮ್ಯಾಪ್ ಹಾಕಿ ಹೋಗಲು ಅನುಕೂಲವಿದೆ. ಆಗಾಗ ಗೂಗಲ್ ಸಂಸ್ಥೆಯವರ ಯಡವಟ್ಟಿನಿಂದ ಸ್ಥಳನಾಮಗಳು ಮತ್ತು ಭಾಷೆಗಳಲ್ಲಿ ತಪ್ಪುಗಳಾಗುವುದರಿಂದ ಗೂಗಲ್ ಮ್ಯಾಪ್ ಬಳಸುವವರು ಗೂಗಲ್ ಸಂಸ್ಥೆಯ ವಿರುದ್ಧ ನಿರಂತರ ಆಕ್ರೋಶ ವ್ಯಕ್ತಪಡಿಸುವುದರಿಂದ ಆಗಿರುವ ತಪ್ಪನ್ನು ಗೂಗಲ್ ಸಂಸ್ಥೆ ಸರಿಯಾಗಿಸಿದ ಉದಾಹರಣೆಗಳಿವೆ.ಇತ್ತೀಚೆಗೆ ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಶಬ್ದವನ್ನು ಗೂಗಲ್ ಸಂಸ್ಥೆ ಬಳಕೆ ಮಾಡಿದ್ದನ್ನು ಖಂಡಿಸಿದ ನಂತರ ಗೂಗಲ್ ಸಂಸ್ಥೆ ಸರಿಪಡಿಸಿತ್ತು.

ಇದನ್ನೂ ಓದಿ : ನಿದ್ದೆ-ಪಾದಯಾತ್ರೆ ಮಾಡಿದರೆ  ಅಧಿಕಾರಕ್ಕೆ ಬರಲ್ಲ: ಶ್ರೀರಾಮುಲು

Advertisement
Advertisement

Udayavani is now on Telegram. Click here to join our channel and stay updated with the latest news.

Next