Advertisement

ಆಸ್ಟ್ರೇಲಿಯನ್‌ ಓಪನ್‌: ಮರ್ರೆ, ಜೊಕೊ, ನಿಶಿಕೋರಿ ಔಟ್‌

09:06 AM Jan 05, 2018 | Team Udayavani |

ಲಂಡನ್‌: ಬ್ರಿಟನ್‌ನ ಖ್ಯಾತ ಟೆನಿಸ್‌ ಆಟಗಾರ ಆ್ಯಂಡಿ ಮರ್ರೆ ಮುಂಬರುವ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದಿಂದ ಹಿಂದಕ್ಕೆ  ಸರಿದಿದ್ದಾರೆ. ಅವರು ಸೊಂಟ ನೋವಿನಿಂದ ಬಳಲುತ್ತಿರುವುದರಿಂದ ಜ.15ರಿಂದ ಆರಂಭವಾಗಲಿರುವ ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ
ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ 12 ಗ್ರ್ಯಾನ್‌ ಸ್ಲಾಮ್‌ ಗೆದ್ದಿರುವ ಸರ್ಬಿಯಾದ ಜೊಕೊವಿಚ್‌, ಜಪಾನ್‌ನ ನಿಶಿಕೋರಿಯಂತಹ ಪ್ರಮುಖರು ಕೂಡ ಕೂಟದಿಂದ ಹಿಂದಕ್ಕೆ ಸರಿದಿರುವುದನ್ನು ಘೋಷಿಸಿದ್ದಾರೆ. ಜೊಕೊವಿಚ್‌ ಮೊಣಕೈ ನೋವಿನಿಂದ ಬಳಲುತ್ತಿದ್ದಾರೆ. ನಿಶಿಕೋರಿ ಕಳೆದ ಆಗಸ್ಟ್‌ನಲ್ಲಿ ಗಾಯಕ್ಕೆ ತುತ್ತಾಗಿ ಕೂಟಗಳಿಂದ ದೂರವಿದ್ದರು.

Advertisement

ಒಟ್ಟಾರೆ ಹೊಸ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಬೇಕು ಎಂದು ಕನಸು ಕಾಣುತ್ತಿದ್ದ ದಿಗ್ಗಜ ಆಟಗಾರರಿಗೆ ಈಗ ದೊಡ್ಡ ನಿರಾಸೆಯಾಗಿದೆ ಎನ್ನುವುದಷ್ಟು ಸತ್ಯ. 30 ವರ್ಷದ ಮರ್ರೆ ಕಳೆದ ಕೆಲವು ದಿನಗಳಿಂದ ತೀವ್ರ ಸೊಂಟ ನೋವಿನಿಂದ ಬಳಲುತ್ತಿದ್ದಾರೆ. ಕಳೆದ ವರ್ಷವೂ ಇವರು ಗಾಯಗೊಂಡಿದ್ದರು. ಪ್ರಮುಖ ಎಟಿಪಿ ಕೂಟವೊಂದನ್ನು ಕಳೆದುಕೊಂಡಿದ್ದರು. ಇದೇ ವೇಳೆ ಪ್ರತಿಕ್ರಿಯಿಸಿರುವ ಮರ್ರೆ, ಮೆಲ್ಬರ್ನ್ ಕೂಟದಲ್ಲಿ ಪಾಲ್ಗೊಳ್ಳಲು ಆಗದಿರುವುದಕ್ಕೆ ಬೇಸರವಿದೆ. ಶೀಘ್ರದಲ್ಲೇ ನನ್ನ ಕುಟುಂಬ ಸದಸ್ಯರನ್ನು ಕೂಡಿಕೊಳ್ಳಲಿದ್ದೇನೆ. ಮತ್ತೆ ಟೆನಿಸ್‌ಗೆ ಮರಳುವ ವಿಶ್ವಾಸವಿದೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next