Advertisement
ಏನಿದು ಪ್ರಕರಣ: ಆಂಧ್ರಪ್ರದೇಶದಲ್ಲಿ ಬಾಲಕಿಯರು, ಮಹಿಳೆಯರು ನಾಪತ್ತೆಯಾಗುತ್ತಿದ್ದು ಈ ಕುರಿತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತನ್ನ ಅಧಿಕಾರಿಗಳ ಬಳಿ ಸಭೆಯನ್ನೂ ನಡೆಸಿದ್ದಾರೆ ಈ ನಡುವೆ ಪವನ್ ಕಲ್ಯಾಣ್ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ಗೆ ಭೇಟಿ ನೀಡಿದ್ದರು ಈ ವೇಳೆ ಅಲ್ಲಿಗೆ ಬಂದ ಮಹಿಳೆಯೊಬ್ಬರು ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ತನ್ನ ಮಗಳು ಒಂಬತ್ತು ತಿಂಗಳ ಹಿಂದೆ ಕಾಲೇಜಿಗೆ ಹೋದವಳು ಮರಳಿ ಮನೆಗೆ ಬರಲಿಲ್ಲ ಹುಡುಕಿಕೊಡಿ ಸಾರ್ ಎಂದು ಕೇಳಿಕೊಂಡಿದ್ದಾರೆ, ಕೂಡಲೇ ಮಹಿಳೆಯ ಮನವಿಗೆ ಸ್ಪಂದಿಸಿದ ಪವನ್ ಕಲ್ಯಾಣ್ ಸಂಬಂಧಿತ ಅಧಿಕಾರಿಗಳ ಬಳಿ ಮಾತನಾಡಿ ಕೂಡಲೇ ಪ್ರಕರಣವನ್ನು ಇತ್ಯರ್ಥಪಡಿಸಲು ಸೂಚನೆ ನೀಡಿದ್ದಾರೆ.
Related Articles
Advertisement
ಒಂಬತ್ತು ತಿಂಗಳ ಹಿಂದೆಯೇ ಮಹಿಳೆ ದೂರು ನೀಡಿದ್ದರು:ಮಗಳು ನಾಪತ್ತೆಯಾಗಿರುವ ಕುರಿತು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕ ಯುವತಿ ಇಬ್ಬರು ಜಮ್ಮುವಿನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು ಆದರೆ ಪೊಲೀಸರು ತಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಸಿಮ್ ಬದಲಾಯಿಸಿದ್ದಾನೆ ಇದರಿಂದ ಪೊಲೀಸರು ತಮ್ಮ ಕಾರ್ಯವನ್ನು ಅರ್ಧಕ್ಕೆ ಬಿಟ್ಟು ಬಿಟ್ಟಿದ್ದಾರೆ, ಇದೀಗ ಒಂಬತ್ತು ತಿಂಗಳ ಬಳಿಕ ಉಪಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪೊಲೀಸರು ಈ ಜೋಡಿಗಳನ್ನು ಪತ್ತೆ ಹಚ್ಚಿದ್ದು ಪೊಲೀಸರ ಬಗ್ಗೆ ಜನ ಆಡಿಕೊಳ್ಳುವಂತಾಗಿದೆ, ಅಲ್ಲದೆ ಕರ್ತವ್ಯದಲ್ಲಿ ನಿರ್ಲಕ್ಷ ತೋರಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಡಿಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: Belagavi; ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ