Advertisement

Andhra Pradesh: ಡಿಸಿಎಂ ಪವನ್‌ ಕಲ್ಯಾಣ್‌ ವಾರಾಹಿ ದೀಕ್ಷೆ ಪಡೆದಿದ್ದೇಕೆ?

05:04 PM Jun 26, 2024 | Team Udayavani |

ಅಮರಾವತಿ (ಆಂಧ್ರ ಪ್ರದೇಶ): ರಾಜ್ಯದಲ್ಲಿಈಗ ವಾರಾಹಿ ಮಾತೆಯ ಮಾತು ಕೇಳಿ ಬರುತ್ತಿದೆ. ಅದಕ್ಕೆ ಕಾರಣ ನೂತನ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ (Pawan Kalyan) ಕೈಗೊಳ್ಳುತ್ತಿರುವ ವಾರಾಹಿ ವಿಜಯ ದೀಕ್ಷೆ ಆಗಿದೆ. ಬುಧವಾರದಿಂದ (ಜೂ.26) 11 ದಿನಗಳ ಕಾಲ ಪವನ್ ವಾರಾಹಿ ಮಾತಾ ದೀಕ್ಷೆಯಲ್ಲಿ ಇರಲಿದ್ದಾರೆ ಎಂದು ಜನಸೇನಾ ಪಕ್ಷ ತಿಳಿಸಿದೆ.

Advertisement

ಈ ದೀಕ್ಷೆಯ ಭಾಗವಾಗಿ, ಪವನ್ ಕಲ್ಯಾಣ್ 11 ದಿನಗಳವರೆಗೆ ಕೇವಲ ಹಾಲು, ಹಣ್ಣುಗಳು ಮತ್ತು ಇತರ ದ್ರವ ಆಹಾರಗಳ ಮಾತ್ರವೇ ಸೇವಿಸುತ್ತಾರೆ. ಗಮನಾರ್ಹವೆಂದರೆ ಕಳೆದ ವರ್ಷ ಜೂನ್ ನಲ್ಲಿ ಪವನ್ ವಾರಾಹಿ ವಿಜಯ ಯಾತ್ರೆ ಕೈಗೊಂಡು ಅಮ್ಮನವರಿಗೆ ಪೂಜೆ ಸಲ್ಲಿಸಿದ್ದು ಸುದ್ದಿಯಾಗಿತ್ತು. ಈ ಬಾರಿ ಪವನ್ ಡಿಸಿಎಂ ಆಗಿ ದೀಕ್ಷೆ ಪಡೆಯುತ್ತಿರುವುದು ವಿಶೇಷವಾಗಿದೆ.

ನಟ ಪವನ್ ಈ ಹಿಂದೆಯೂ ಹಲವು ದೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ಚಾತುರ್ಮಾಸ ಆಚರಣೆ ಕೈಗೊಂಡಿದ್ದರು. ಪವನ್ ಕಲ್ಯಾಣ್​​ ನಾಲ್ಕು ತಿಂಗಳ ಕಾಲ ಈ ದೀಕ್ಷೆ ಮುಂದುವರಿಸಿದ್ದರು. ಆ ದೀಕ್ಷೆ ವೇಳೆಯೂ ಸಾತ್ವಿಕ ಆಹಾರದ ನಿಯಮಗಳ ಕಟ್ಟುನಿಟ್ಟಾಗಿ ಪಾಲಿಸಿದ್ದರು.

ವಾರಾಹಿ ಮಾತೆಯ ದೀಕ್ಷೆ ಪಡೆದವರು ಮದ್ಯ, ಮಾಂಸಾಹಾರ ತ್ಯಜಿಸಿ ಬ್ರಹ್ಮಚರ್ಯ ಪಾಲಿಸಬೇಕಿದೆ. ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಈಗ ಇಂತಹ ಕಠಿಣ ದೀಕ್ಷೆ ಮಾಡುತ್ತಿದ್ದಾರೆ.

 

Advertisement


ಈಗ ದೀಕ್ಷೆ ಉದ್ದೇಶವೇನು?   

ಡಿಸಿಎಂ ಪವನ್‌ ಕಲ್ಯಾಣ್‌ ಈ ಬಾರಿ ದೀಕ್ಷೆಯ ಪಡೆದಿರುವುದು ವಾರಾಹಿ ಮಾತೆ ಆಶೀರ್ವಾದ ಹಾಗೂ ಆಂಧ್ರದ ಜನರ ಕಲ್ಯಾಣ, ಸಮೃದ್ಧಿ, ಅಭಿವೃದ್ಧಿಗಾಗಿ ಈ ದೀಕ್ಷೆ ಕೈಗೊಂಡಿದ್ದಾರೆ.

ವಾರಾಹಿ ಮಾತೆ ವಿಶೇಷತೆ ಏನು?

ವಾರಾಹಿ ಮಾತೆ ಸಪ್ತಮಾತೃಕೆಯರಲ್ಲಿ ಒಬ್ಬರು. ಈಕೆ ಲಲಿತಾ ಪರಮೇಶ್ವರಿ, ಸರ್ವ ಸೈನ್ಯಾಧಕ್ಷೆ. ಮಹಾಲಕ್ಷ್ಮಿ ಪ್ರತಿರೂಪ, ದೇವಿಯು ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣೆಗಾಗಿ ಮತ್ತು ಸದ್ಗುಣ ರಕ್ಷಣೆಗಾಗಿ ಸದಾ ಶಸ್ತ್ರಸಜ್ಜಿತಳಾಗಿರುತ್ತಾಳೆ. ದೇವಿಯು ಉಗ್ರವಾಗಿ ಕಂಡರೂ, ತುಂಬಾ ಕರುಣಾಮಯಿ. ವಾರಾಹಿ ಮಾತಾ ಭೂದೇವಿಯು ನೇಗಿಲು ಧರಿಸಿರುವ ಧಾನ್ಯ ದೇವತೆಯೂ ಹೌದು. ಉತ್ತಮ ಫಸಲು ಮತ್ತು ಉತ್ತಮ ಕೃಷಿಗಾಗಿ ಎಲ್ಲ ರೈತರು ವಾರಾಹಿ ಮಾತೆಯ ಪೂಜಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next